ಮೀಸಲಾತಿಯನ್ನು ಎತ್ತಿ ಹಿಡಿದ ಹೈ ಕೋರ್ಟ್

ಕೆ.ಆರ್.ಪೇಟೆ:ಏ:21: ಪಟ್ಟಣದ ಪುರಸಭೆಯ ಅಧ್ಯಕ್ಷ ಉಪಾದ್ಯಕ್ಷ ಮೀಸಲು ನಿಗದಿಗೊಳಿಸಿದ್ದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಏರಿದ್ದ ಪ್ರಕರಣಕ್ಕೆ ಹೈಕೋರ್ಟ್ ಇಂದು ತೀರ್ಪು ನೀಡಿದ್ದು ಈ ಹಿಂದಿನ ಮೀಸಲಾತಿ ನಿಗದಿಗೊಳಿಸಿದ್ದನ್ನು ಎತ್ತಿಹಿಡಿದಿದೆ.
ಈ ಕುರಿತು ಮಾತನಾಡಿದ ಸಚಿವರ ಆಪ್ತ ಸಹಾಯಕ ದಯಾನಂದ್ ಕಳೆದ ಆರು ತಿಂಗಳಿನಲ್ಲಿ ಪಟ್ಟಣದ ಪುರಸಭೆಯ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ವರ್ಗಕ್ಕೆ ಮೀಸಲುಗೊಳಿಸಿ ಹಾಗೂ ಉಪಾಧ್ಯಕ್ಷ ಸ್ಥಾನವನ್ನು 2ಎ ಮಹಿಳೆಗೆ ಮೀಸಲು ಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಪಟ್ಟಣದ ಪುರಸಬಾ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸುಧೀರ್ಘ ವಿಚಾರಣೆಯ ಬಳಿಕ ಹೈಕೋರ್ಟ್ ಈ ಹಿಂದೆ ನಿಗಧಿಗೊಳಿಸಿದ್ದ ಮೀಸಲಾತಿಯನ್ನು ಎತ್ತಿ ಹಿಡಿದಿದ್ದು ನ್ಯಾಯಾಲಯದ ಆದೇಶವನ್ನು ಗೌರವಿಸುವುದಾಗಿ ತಿಳಿಸಿದರು.
ಇದೇ ಮೊದಲ ಬಾರಿಗೆ ಪಟ್ಟಣದ ಪುರಸಭೆಯ ಆಡಳಿತ ಬಿಜೆಪಿ ಪಕ್ಷಕ್ಕೆ ಒಲಿದಿರುವುದು ಬಿಜೆಪಿ ಪಾಳಯದಲ್ಲಿ ಹರ್ಷ ತಂದಿದ್ದು. ಸಚಿವ ನಾರಾಯಣಗೌಡರ ಪರಿಶ್ರಮದ ಫಲವಾಗಿ ಪಟ್ಟಣದ ಪುರಸಭೆಯ ಆಡಳಿತ ಬಿಜೆಪಿ ಪಾಲಾಗಿದೆ. ಮುಂದಿನ ದಿನಗಳಲ್ಲಿ ಪಟ್ಟಣಕ್ಕೆ ಉತ್ತಮ ಕೆಲಸಗಳನ್ನು ಮಾಡಲು ಇದರಿಂದ ಸಹಕಾರಿಯಾಗಲಿದ್ದು ಎಲ್ಲಾ 23 ವಾರ್ಡುಗಳಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪುರಸಬಾ ಸದಸ್ಯರುಗಳಾದ ಹೆಚ್.ಆರ್.ಲೋಕೇಶ್, ಕೆ.ಎಸ್.ಪ್ರಮೋದ್ ಕುಮಾರ್, ಶಾಮಿಯಾನ ತಿಮ್ಮೇಗೌಡ, ಹೆಚ್.ಡಿ.ಅಶೋಕ್, ಬಿಜೆಪಿ ಮುಖಂಡರಾದ ಮಿತ್ರ ಗಿರೀಶ್, ನಂಜುಂಡಸ್ವಾಮಿ, ಶ್ರೀನಿವಾಸ್, ಕಾರಿಗನಹಳ್ಳಿ ಕುಮಾರ್, ಚಲುವರಾಜು, ವಕೀಲ ಪ್ರವೀಣ, ಸ್ಪೈಸ್‍ಅರುಣ್, ಜಿಲ್ಲಾ ಪ್ರಕೋಷ್ಟದ ಅದ್ಯಕ್ಷ ಮೋಹನ, ಸುನಿಲ್, ಗಿರೀಶ್, ಲೋಹಿತ್ ಸೇರಿದಂತೆ ಹಲವರು ಹಾಜರಿದ್ದರು.