ನವಲಗುಂದ,ಅ.12: ಈಗಾಗಲೇ ಐದು ಜಿಲ್ಲೆ ಹೋರಾಟದ ಸ್ಫೂರ್ತಿ ಗೆ ನವಲಗುಂದ ತಾಲೂಕು ಮುಖ್ಯ ಕಾರಣ. ನವಲಗುಂದ ಇಡೀ ದೇಶದಲ್ಲಿಯೇ ಹೆಸರು ವಾಸಿಯಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಮಹಾಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಪಿಎಲ್ ಡಿ ಬ್ಯಾಂಕ್ ಸಭಾಭವನದಲ್ಲಿ ನಡೆದ 2 ಎ ಮೀಸಲಾತಿ ಹೋರಾಟ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅ.13ರಂದು ಬೆಳಗ್ಗೆ 10ಕ್ಕೆ ಹುಬ್ಬಳ್ಳಿಯ ಗಬ್ಬೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಹೋರಾಟ ಮಾಡಲಾಗುವುದು ಎಂದರು.
2024 ರ ಲೋಕಸಭಾ ಚುನಾವಣೆ ಒಳಗಾಗಿ ನಮಗೆ ಮೀಸಲಾತಿ ಕೊಡಬೇಕು. ಸರಕಾರದ ಗಮನ ಸೆಳೆಯಲು ಹೋರಾಟ ಮಾಡಲಾಗುವುದು ಎಂದರು.
ಕಾರ್ಯಕ್ರಮಕ್ಕೂ ಮೊದಲು ರೈತ ಹುತಾತ್ಮ ವೀರಗಲ್ಲಿಗೆ ಶ್ರೀಗಳು ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ನಿಂಗಣ್ಣ ಕರಿಕಟ್ಟಿ, ಬಾಪುಗೌಡ ಪಾಟೀಲ್, ಎಲ್ ಬಿ ಪಾಟೀಲ್, ಮಲ್ಲಪ್ಪ ಕೀರೆಸೂರ್, ಶಂಕರಗೌಡ ಪಾಟೀಲ್, ನಾಗನಗೌಡ ಪಾಟೀಲ್, ರಾಯನಗೌಡ ಪಾಟೀಲ್, ಸದುಗೌಡ ಪಾಟೀಲ್, ವಾಯ್ ಬಿ ಕುರಹಟ್ಟಿ, ಸಿದ್ದನಗೌಡ ಪಾಟೀಲ್, ಸುರೇಶ ಕಮ್ಮಾರ, ಪ್ರದೀಪ್ ಪಾಟೀಲ್, ಮಲ್ಲಿಕಾರ್ಜುನ ಆರೇಗೌಪ್ಪ , ದೇವರಾಜ್ ಕರಿಯಪ್ಪನವರ, ಮುತ್ತಣ್ಣ ಮನಮಿ, ಈರಣ್ಣ ಚವಡಿ, ಸಂತೋಷ ನಾವಳ್ಳಿ, ಕೆ ಬಿ ಮದ್ನೂರ್, ಎಂ ಎಸ್ ಕೊಪ್ಪದ, ಸಿದ್ದಲಿಂಗಪ್ಪ ಮದ್ನೂರ್ , ಶಿರಿಯಣ್ಣವರ ಸೇರಿದಂತೆ ಸಮಾಜ ಮುಖಂಡರು, ಹಿರಿಯರು ಯುವಕರು ಸಭೆಯಲ್ಲಿ ಉಪಸಿತರಿದ್ದರು.