ಮೀಸಲಾತಿಗಾಗಿ ನಾಳೆಯಿಂದ ಪಾದಯಾತ್ರೆ

ಕೊಟ್ಟೂರು ಜ 13: ಪಂಚಮಸಾಲಿ ಸಮಾಜಕ್ಕೆ 2ಎ ಹಾಗೂ ಲಿಂಗಾಯತ ಸಮುದಾಯಕ್ಕೆ ಕೇಂದ್ರದ ಒಬಿಸಿ ಮೀಸಲಾತಿಗೆ ಒತ್ತಾಯಿಸಿ ಕೂಡಲ ಸಂಗಮ ದಿಂದ ಬೆಂಗಳೂರಿನವರೆಗೆ ನಾಳೆಯಿಂದ ಪಾದಯಾತ್ರೆ ಪ್ರಾರಂಭವಾಗಲಿದೆ.
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಯ ನೇತೃತ್ವದಲ್ಲಿ ನಡೆಯಲಿದೆ ಎಂದು ಸಮಾಜದ ರಾಜ್ಯಕಾರ್ಯದರ್ಶಿ ಅಂಗಡಿ ಪಂಪಾಪತಿ ಹೇಳಿದರು.
700 ಕಿ.ಮೀ.ವರೆಗಿನ ಈ ಪಾದಯಾತ್ರೆ ಒಂದು ತಿಂಗಳು ನಡೆಯಲಿದೆ. ಕೂಡಲಸಂಗಮದಿಂದ ಕೊಪ್ಪಳ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಸಾಗುವ ಪಾದಯಾತ್ರೆಯ ಕೊನೆಯ ದಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಈ ಸಂದರ್ಭದಲ್ಲಿ ಕನಿಷ್ಠ ಐದು ಲಕ್ಷ ಜನ ಸೇರಲಿದ್ದಾರೆ’ ಎಂದು ಅವರು ಸಂಜೆವಾಣಿ ಪತ್ರಿಕೆಗೆ ತಿಳಿಸಿದರು.ಈ ಸಂದರ್ಭದಲ್ಲಿ ಕೊಟ್ಟೂರು ತಾಲೂಕು ಘಟಕದ ಅಧ್ಯಕ್ಷ ಎಂಶಿವಣ್ಣ, ನಿಂಬಳಗೇರಿ ಕಲ್ಲೇಶಪ್ಪ, ಪಿ.ಭರ್ಮನಗೌಡ ಪಾಟೇಲ್ , ಅಕ್ಕಿ ಚಂದ್ರಣ್ಣ, ನಂಜನಗೌಡ, ಮರಬದ ಕೊಟ್ರೇಶ, ಅರವಿಂದ ಬಸಾಪುರ, ಹುಲುಮನಿ ಮಲ್ಲೇಶಪ್ಪ ಚಪರದಹಳ್ಳಿ ಕೊಟ್ರಪ್ಪ , ಸೇರಿದಂತೆ ಆನೇಕರಿದ್ದರು.