
ಚಿಂಚೋಳಿ,ಆ.5- ತಾಲ್ಲೂಕಿನ ಮೀರಿಯಾಣ ಗ್ರಾಮ ಪಂಚಾಯತÀ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಎರಡನೇ ಅವಧಿಗಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಲ್ಲವಿ ಜಯಶಂಕರ್ ಸೋಮಲಿಂಗದಲ್ಲಿ ಹಾಗೂ ಉಪಾಧ್ಯಕ್ಷರಾಗಿ ವೆಂಕಟಮ್ಮ ಲಾಲಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಪಂನಲ್ಲಿ ಒಟ್ಟು 26 ಸದಸ್ಯರಿದ್ದು, ಚುನಾವಣೆಯಲ್ಲಿ 26ಸದಸ್ಯರು ಹಾಜರಾಗಿದ್ದು, ಎಲ್ಲ ಸದಸ್ಯರ ಒಪ್ಪಿಗೆ ಮೇರೆಗೆ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆನ್ನುಯ ಚುನಾವಣೆ ಅಧಿಕಾರಿಯಾದ ಮಲ್ಲಿಕಾರ್ಜುನ ಪೂರ್ಣಗೊಳಿಸಿದರು.
ಗ್ರಾ. ಪಂ. ವ್ಯಾಪ್ತಿಯ ಹಿರಿಯ ಮುಖಂಡರುಗಳಾದ ಜಗನಾಥ್ ಇದ್ಲಾಯಿ, ಸುದರ್ಶನ್ ರೆಡ್ಡಿ ಪಾಟೀಲ್,ಅಬ್ದುಲ್ ರೌಪ್, ಸುರೇಶ್ ಬಂಟಾ, ಚಂದ್ರಶೇಖರ ಕಾಕೆರ್, ಅಬ್ದುಲ್ ಬಾಸಿದ್ , ಜಗನಾಥ್ ಕಟ್ಟಿ, ನಂದಕುಮಾರ್ ಪಾಟೀಲ್ ಸೇರಿದಂತೆ ಹಲವರು ಇದ್ದರು.