ಮೀನು ಹಿಡಿಯಲು ಹೋಗಿ ಹೊಂಡದಲ್ಲಿ ಮುಳುಗಿ ಯುವಕ ಸಾವು

ಕಲಬುರಗಿ,ಮೇ.11-ಮೀನು ಹಿಡಿಯಲು ಹೋಗಿ ಹೊಂಡದಲ್ಲಿ ಮುಳುಗಿ ಯುವಕೊಬ್ಬ ಮೃತಪಟ್ಟ ಘಟನೆ ಖಾಜಾ ಕೋಟನೂರ ಕೆರೆ ಹತ್ತಿರ ನಡೆದಿದೆ.
ಹಾಗರಗಾ ಕ್ರಾಸ್‍ನ ಜುಬೇರ್ ಕಾಲೋನಿಯ ಅಜಗರ್ ಖಾನ್ ತಂದೆ ಅನವರ್ ಖಾನ್ (22) ಮೃತಪಟ್ಟ ಯುವಕ.
ಅಜಗರ್ ಖಾನ್ ಗೆಳೆಯರಾದ ನಜೀರ್, ನಿಜಾಮ ಹಾಗೂ ಇನ್ನಿಬ್ಬರ ಜೊತೆಗೂಡಿ ಖಾಜಾ ಕೋಟನೂರ ಕೆರೆ ಸಮೀಪದ ನೀರಿನ ಹೊಂಡದಲ್ಲಿ ಈಜಾಡಲು ಅಥವಾ ಮೀನು ಹಿಡಿಯಲು ಹೋಗಿ ಆಯತಪ್ಪಿ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.