ಮೀನು ಹಿಡಿಯಲು ಹೋಗಿ ತಂದೆ-ಮಗ ನೀರುಪಾಲು: ಶವ ಪತ್ತೆ

ಕಲಬುರಗಿ,ಆ.3-ಮೀನು ಹಿಡಿಯಲು ಹೋಗಿ ತಂದೆ ಮಗ ಸಾವಿಗೀಡಾದ ಘಟನೆ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿಯಲ್ಲಿ ನಡೆದಿದೆ.
ತಂದೆ ರಾಜು ತಿಮ್ಮಯ್ಯ (45) ಮತ್ತು ಮಗ ಮಹೇಶ್ (12) ಮೃತರು.
ಕಳೆದ 15 ದಿನಗಳಿಂದ ಚಿಂಚೋಳಿ ಸೇರಿದಂತೆ ಚಂದ್ರಪಳ್ಳಿ ಜಲಾಶಯ ಪ್ರದೇಶದಲ್ಲಿ ಸತತ ಮಳೆ ಸುರಿಯುತ್ತಿದ್ದು, ಜಲಾಶಯ ಉಕ್ಕಿ ಹರಿಯುತ್ತಿದೆ. ಹೀಗಿದ್ದರೂ ತಂದೆ ಮಗ ನಿನ್ನೆ 10.30ರ ಸುಮಾರಿಗೆ ಮೀನು ಹಿಡಿಯಲು ಜಲಾಶಯಕ್ಕೆ ತೆರಳಿದ್ದರು. ಮೀನು ಹಿಡಿಯುತ್ತಾ ಆಯತಪ್ಪಿ ಮಗ ನೀರಿನಲ್ಲಿ ಮುಳುಗಿದ್ದು, ನಂತರ ತಂದೆಯೂ ಜಲಾಶಯದ ಆಳದಲ್ಲಿ ಸಿಲುಕಿ ಮೇಲೆ ಬರಲಾಗದೇ ಮುಳುಗಿ ಸಾವಿಗೀಡಾಗಿದ್ದಾರೆ.
ಮೃತರು ಚಂದ್ರಂಪಳ್ಳಿ ಗ್ರಾಮದವರಾಗಿದ್ದು, ಮೃತದೇಹಗಳ ಪತ್ತೆಗಾಗಿ ಚಿಂಚೋಳಿ ತಹಶೀಲ್ದಾರ ಅಂಜುಮ್ ತಬಸ್ಸುಮ್ ಅವರ ಸಮ್ಮುಖದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ನಿನ್ನೆ ಸಂಜೆಯವರೆಗೂ ಶೋಧಕಾರ್ಯ ನಡೆಸಲಾಗಿತ್ತು. ಶವಗಳು ಪತ್ತೆಯಾಗದೇ ಇದುದ್ದರಿಂದ ಇಂದು ಮುಂಜಾನೆ ಮತ್ತೆ ಶೋಧಕಾರ್ಯ ನಡೆಸಿ ತಂದೆ-ಮಗನ ಶವಗಳನ್ನು ಹೊರ ತೆಗೆಯಲಾಗಿದೆ.
ಈ ಕುರಿತು ಚಿಂಚೋಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.