ಮೀನು ಸಾಕಾಣಿಕೆಗೆ ವಿಫುಲ ಅವಕಾಶ : ಆರ್ಥಿಕ ಸದೃಢತೆಗೆ ಸಹಕಾರಿ: ನಾಯ್ಕ

ವಿಜಯಪುರ:ಜೂ.27: ವಾಣಿಜ್ಯ ಮೌಲ್ಯವುಳ್ಳ ಮೀನುಗಾಳಾದ ಸೀ ಬಾಸ್, ಸುರಗಿ, ತಿಲಾಫಿಯಾ ಮೀನುಗಳನ್ನು ಬೆಳೆಯುವುದರಿಂದ ರೈತರು ಆರ್ಥಿಕವಾಗಿ ಸದೃಡವಾಗಬಹುದು ಎಂದು ಮಂಗಳೂರು ವಿಭಾಗದ ಸಾಗರೊತ್ಪನ ಮತ್ತು ರಪ್ತು ಅಭಿವೃದ್ದಿ ಪ್ರಾದಿಕಾರದ ಉಪನಿರ್ದೇಶಕ ರಾಜಕುಮಾರ ನಾಯ್ಕ ಹೇಳಿದರು.
ವಿಜಯಪುರ ನಗರದ ಹೊರವಲಯದಲ್ಲಿರುವ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರ, ಭೂತನಾಳದಲ್ಲಿ ಹಮ್ಮಿಕೊಂಡ ಸಮಗ್ರ ಮೀನು ಸಾಕಾಣಿಕೆÉ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸೀ ಬಾಸ್ ಮೀನು ಕೃಷಿಯನ್ನು ಉತ್ತೆಜಿಸಲು ಸಾಗರೊತ್ಪನ ಮತ್ತು ರಪ್ತು ಅಭಿವೃದ್ದಿ ಪ್ರಾದಿಕಾರ, ಮಂಗಳೂರು ಸಂಸ್ಥೆಯು ಮುಂದಾಗಿದ್ದು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಫಲಾನುಭವಿಗಳು ಮುಂದೆಬಂದರೆ ಅವರಿಗೆ ಸೀ ಬಾಸ್ ಮೀನು ಕೃಷಿಗೆ ತಗಲುವ ಸುಮಾರು 6 ಲಕ್ಷದ ಮೊತ್ತದ ಮೀನು ಮರಿಗಳು, ಆಹಾರ ಮತ್ತು ತಾಂತ್ರಿಕ ಸಲಹೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಹಿಳಾ ಗ್ರಾಮೀಣ ಸಾಮಾಜಿಕ ಕಾರ್ಯಕರ್ತರು, ಪ್ರಗತಿಪರ ರೈತರು, ಹಾಗೂ ವಿಜಯಪುರ ಜಿಲ್ಲಾ ಉಪ್ಪಾರ ಸಮಾಜದ ಮಹಿಳಾ ಅಧ್ಯಕ್ಷರಾದ ಶ್ರೀಮತಿ.ರೇಣುಕಾ ಪರಸಪ್ಪಗೋಳ ಅವರು ಮಾತನಾಡಿ, ಮಹಿಳಾ ಫಲಾನುಭವಿಗಳು ಮೀನುಗಾರಿಕೆಯಲ್ಲಿನ ಅಲಂಕಾರಿಕ ಮೀನು ಕೃಷಿ, ಹೈನು ಮತ್ತು ಮೀನು ಕೃಷಿ, ತೋಟಗಾರಿಕೆ ಮತ್ತು ಮೀನು ಕೃಷಿಗಳಲ್ಲಿ ತೊಡಗಿಸಿಕೊಂಡರೆ ಸ್ಥಳಿಯವಾಗಿ ಲಾಭಗಳಿಸುವ ಜೊತೆಗೆ ಉದ್ಯೋಗವನ್ನು ಸೃಷ್ಠಿಸಬಹುದು ಎಂದು ಹೇಳಿದರು.
ವಿಜಯಪುರ ಮತ್ಸ್ಯ ಸೇವಾ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಹರಿಶ್ಚಂದ್ರ ಜಾಧವ ಅವರು ಮಾತನಾಡಿ, ಜಿಲ್ಲೆಯಲ್ಲಿ ಅಧಿಕವಾದ ಜಲಸಂಪನ್ಮೂಲ ಹೊಂದಿರುವುದರಿಂದ ಮೀನುಗಾರಿಕೆಗೆ ವಿಫುಲ ಅವಕಾಶಗಳಿವೆ. ನಮ್ಮ ಸಂಸ್ಥೆಯಿಂದ ರೈತರಿಗೆ ಮಣ್ಣು ಮತ್ತು ನೀರಿನ ಪರೀಕ್ಷೆಯನ್ನು ಮಾಡಿಕೊಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭೂತನಾಳ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ವಿಜಯಕುಮಾರ ಎಸ್, ಭೂತನಾಳ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ.ವಿಜಯ.ಎಸ್.ಅತನೂರ, ರವಿಕುಮಾರ.ಡಿ.ಮೋದಿ, ಅನೀಲಕುಮಾರ.ರಾಠೋಡ, ಶ್ರೀಮತಿ. ಭಾಗೀರಥಿ ಹೊಸಳ್ಳಿ, ನರಸಪ್ಪ ಕ್ಷತ್ರಿ, ಸುರೇಶ ಪವಾರ, ಸದಾಶಿವ ರಾಠೋಡ ಸೇರಿದಂತೆ 50ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.