ಮೀನು ಶಿಕಾರಿಗೆ ಹೋದವ ಜಲ ಸಮಾಧಿ


ದಾವಣಗೆರೆ,ನ.20: ಮೀನು ಶಿಕಾರಿಗೆ ಬಂದ ವ್ಯಕ್ತಿಯೊಬ್ಬರು ಕಾಲು ಜಾರಿ ಕೆರೆಗೆ ಬಿದ್ದು, ಜಲ ಸಮಾಧಿಯಾಗಿರುವ ಘಟನೆ ತಾಲ್ಲೂಕಿನ ರಾಂಪುರದಲ್ಲಿ ನಡೆದಿದೆ.ದಾವಣಗೆರೆ ತಾಲ್ಲೂಕಿನ ಅಳಗವಾಡಿಯ ತಿಪ್ಪೇಶಪ್ಪ ಎಂಬುವರು  ರಾಂಪುರ ಕೆರೆಗೆ ಮೀನು ಹಿಡಿಯಲು ಹೋಗಿದ್ದರು. ಈ ವೇಳೆಯಲ್ಲಿ ತಿಪ್ಪೇಶಪ್ಪ ಕಾಲು ಜಾರಿ ಕೆರೆಗೆ ಬಿದ್ದು ಜಲಸಮಾಧಿಯಾಗಿದ್ದಾರೆ.
ಶುಕ್ರವಾರ ಸಂಜೆ ಕೆರೆಗೆ ಬಿದ್ದಿರುವ ತಿಪ್ಪೇಶಪ್ಪನವರ ಮೃತ ದೇಹವು ಶನಿವಾರ ಮಧ್ಯಾಹ್ನದ ವರೆಗೂ ಪತ್ತೆಯಾಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಮೃತ ದೇಹಕ್ಕಾಗಿ ಶೋಧಕಾರ್ಯ ಮುಂದು ವರೆಸಿದೆ.ಈ ಕುರಿತು ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.