ಮೀನುಗಾರ ನಾಪತ್ತೆ

ಮಂಗಳೂರು, ಎ.೯- ಪಣಂಬೂರು ಸಮೀಪದ ತಣ್ಣೀರುಬಾವಿಯಿಂದ ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ನಾಪತ್ತೆಯಾದ ಘಟನೆ ಗುರುವಾರ ನಡೆದಿದೆ.
ತಣ್ಣೀರುಬಾವಿಯ ದಾವೂದ್ ಸಿದ್ದೀಕ್ (೩೯) ಕಾಣೆಯಾದ ಮೀನುಗಾರ ಎಂದು ತಿಳಿದುಬಂದಿದೆ. ಗುರುವಾರ ಪೂರ್ವಾಹ್ನ ಸುಮಾರು ೧೧:೩೦ರ ವೇಳೆಗೆ ಪಣಂಬೂರು ಕಡಲ ತೀರದಿಂದ ಅರಬ್ಬೀ ಸಮುದ್ರದಲ್ಲಿ ಸುಮಾರು ೧೪ ನಾಟಿಕಲ್ ಮೈಲ್ ದೂರದಲ್ಲಿ ಈ ಘಟನೆ ನಡೆದಿದೆ. ನಾಡದೋಣಿಯಲ್ಲಿ ಸುಮಾರು ೬ ಮಂದಿ ಇದ್ದು, ದಾವೂದ್ ಸಿದ್ದೀಕ್ ಮೀನು ಹಿಡಿಯುವಾಗ ಕಾಣೆಯಾಗಿದ್ದಾರೆ. ಕಳೆದ ೧೫ ವರ್ಷದಿಂದ ಇವರು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ತಣ್ಣೀರುಬಾವಿಯ ಮುಳುಗು ರಕ್ಷಣಾ ತಂಡದ ಸದಸ್ಯರೂ ಆಗಿದ್ದರು. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.