ಮೀನುಗಾರಿಕಾ ದೋಣಿ ಪಲ್ಟಿ: ಓರ್ವ ಸಮುದ್ರಪಾಲು

ಕೋಟ, ಜು.೨೩- ಸಾಲಿಗ್ರಾಮದ ಸಮೀಪದ ಪಾರಂಪಳ್ಳಿ ಸಮೀಪದ ಮೀನುಗಾರಿಕೆಯಲ್ಲಿ ನಿರತವಾಗಿದ್ದ ದೋಣಿ, ಅಲೆಗೆ ಸಿಲುಕಿ ಮಗುಚಿದ ಪರಿಣಾಮ ದೋಣಿಯಲ್ಲಿದ್ದ ಒಬ್ಬ ಸಮುದ್ರ ಪಾಲಾಗಿ, ಇಬ್ಬರು ಈಜಿಕೊಂಡು ದಡ ಸೇರಿದ ಘಟನೆ ವರದಿಯಾಗಿದೆ.
ಸಮುದ್ರಕ್ಕೆ ಬಿದ್ದು ನೀರು ಪಾಲಾದವರನ್ನು ಪಾರಂಪಳ್ಳಿ ಪಡುಕೆರೆಯ ಸುಮಂತ್ (೨೧) ಎಂದು ಗುರುತಿಸಲಾಗಿದೆ. ಅವರ ಜೊತೆಗೆ ಇಬ್ಬರು ಸ್ಥಳೀಯರು ಸಂದೀಪ್ ಮತ್ತು ಪ್ರಜ್ವಲ್ ಈಜಿ ದಡ ಸೇರಿದ್ದಾರೆ. ಬಳಿಕ ಸ್ಥಳೀಯರು ಬಲೆ ಹಾಕಿ ಸುಮಂತ್‌ನನ್ನು ಮೇಲೆ ತಂದು ಆಸ್ಪತ್ರೆಗೆ ದಾಖಲಿಸಿದರೂ ಅವರಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು. ಪ್ರಕರಣದ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.