ಮೀನುಗಾರರ ಆರ್ಥಿಕ ಸಂವರ್ಧನೆಗಾಗಿ ಹೊಸ ಯೋಜನೆ ಘೋಷಣೆ ಮಾಡಲಿ: ಮಂಜುನಾಥ್ ಸುಣಗಾರ್

ಸಂಜೆವಾಣಿ ನ್ಯೂಸ್
ಮೈಸೂರು: ಫೆ.28:- ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿಯ ಮೀನುಗಾರರ ಕಾಂಗ್ರೆಸ್ ಘಟಕದ ವತಿಯಿಂದ ಜಿಲ್ಲಾ ಮೀನುಗಾರರ ಸಮ್ಮವೇಶ ಹಾಗೂ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಮೀನುಗಾರರ ಘಟಕದ ಅಧ್ಯಕ್ಷ ಮಂಜುನಾಥ್ ಎಸ್ ಸುಣಗಾರ್ ಮಾತನಾಡಿ ಮೀನುಗಾರರ ಸಮುದಾಯ ಅತ್ಯಂತ ಶೋಷಿತ ಸಮುದಾಯ. ಈ ಸಮುದಾಯ ಮೀನು ಮಾರಾಟದ ಹೀನ್ನೆಲೆಇಂದ ಬಂದಿದ್ದಾದರಿಂದ ಕಾಯಕ ಸಮುದಾಯ ಎಂದು ಕರೆಯಲ್ಪಟ್ಟಿದೆ. ಪ್ರತಿ ನಿತ್ಯ ನಾವು ನೀರಿನ ಜೊತೆ ಒಡನಾಟ ಹೊಂದಿರುತ್ತೇವೆ ಹಾಗಾಗಿ ನಮ್ಮನ್ನು ಗಂಗೆಯ ಮಕ್ಕಳು ಎಂದು ಕರೆಯುತ್ತಾರೆ. ಶ್ರಮ ಜೀವಿಗಳಲ್ಲೇ ಅತ್ಯಂತ ಶ್ರಮಜಿವಿಗಳು ಎಂದೇರೆ ಮೀನುಗಾಗರು. ಈ ಸಮುದಾಯವನ್ನು ರಾಜಕೀಯವಾಗಿ ಕಾಂಗ್ರೆಸ್ ಪಕ್ಷ ಮಾತ್ರ ಬೆಳೆಸಲು ಸಾಧ್ಯ ಎಂದು ಹೇಳಿದರು.
2017 ರಲ್ಲಿ ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿಯವರು ಮೀನುಗಾರರ ಘಟಕವನ್ನು ರಾಜಕೀಯವಾಗಿ ಮುನ್ನೆಲೆಗೆ ತರಲು ಈ ಸಮಿತಿಯನ್ನು ಸ್ಥಾಪಿಸಿದರು ಎಂದು ಹೇಳಿದರು.
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಗೆ ಈ ಜನಾಂಗದ ಮೇಲೆ ಬಹಳ ಪ್ರೀತಿ ಇದೆ. ಹಾಗಾಗಿ ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಅಪಾರವಾದ ಕೊಡುಗೆಗಳನ್ನು ಮೀನುಗಾರ ಸಮುದಾಯಕ್ಕೆ ನೀಡಿರುವುದಕ್ಕೆ ಅವರಿಗೆ ಅಭಿನಂದನೆಗಳು. ಅವರ ಕಾಲದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಪ್ರಾರಂಭ ಮಾಡಿದರು ಒಂದು ಐತಿಹಾಸಿ ದಾಖಲೆ ಸೃಷ್ಟಿಸಿದರು. ಒಳನಾಡು ಮೀನುಗಾರರ ನಿಗಮ ಸ್ಥಾಪನೆ ಮಾಡಿ ಒಳನಾಡು ಮೀನುಗಾರರಿಗೆ ಸರ್ವತೋಮುಖ ಅಭಿವೃದ್ಧಿಯ ಶ್ರೀರಕ್ಷೆ ನೀಡಿದರು.
ಚುನಾವಣಾ ಪ್ರಣಾಳಿಕೆಯಲ್ಲಿ ಮೀನುಗಾರಿಕೆಗೆ ಹಲವಾರು ಬೇಡಿಕೆ ಇಟ್ಟಿದ್ದೆವು ಅವುಗಳಲ್ಲಿ ಮಹಿಳಾ ಮೀನುಗಾರಿರರಿಗೆ 50 ಸಾವಿರರು ಬಡ್ಡಿ ರಹಿತ ಸಾಲವನ್ನು 3 ಲಕ್ಷಕ್ಕೆ ಏರಿಕೆ, ಮೀನುಗಾರಿರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡುವುದು ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿ ಘೋಷಿಸಿದ್ದಾರೆ. ಸರ್ಕಾರ ನೀಡಿರುವ ಸಲತ್ತುಗಳನ್ನು ಪ್ರತಿಯೊಬ್ಬ ಮೀನುಗಾರರ ಮನ ಮುಟ್ಟುವಂತೆ ಹೇಳಬೇಕು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೋಮುವಾದವನ್ನು ಓಡಿಸುವ ಕೆಲಸ ನಮ್ಮ ಜನಾಂಗದಿಂದಲೇ ಶುರು ಆಗಬೇಕು. ಈ ಹತ್ತು ವರ್ಷಗಳಲ್ಲಿ ಕೇಂದ್ರದ ಮೋದಿ ಸರ್ಕಾರ ನೀಡಿರುವ ಒಂದೇ ಒಂದು ಯೋಜನೆಯು ಕೂಡ ಅನುಷ್ಠಾನ ರೂಪಕ್ಕೆ ಬಂದಿಲ್ಲ. ಬಿಜೆಪಿಯವರು ಬರಿ ಮಂದಿರಗಳ ಹೆಸರಲ್ಲಿ ಚುನಾವಣೆಗೆ ಹೋಗಲು ತಯಾರಿ ನಡೆಸುತ್ತಿದ್ದಾರೆ ಹಾಗಾಗಿ ಈ ಬಾರಿ ಅವರ ಆಟ ನಡೆಯುವುದಿಲ್ಲ ಎಂದು ಸ್ಪಷ್ಟವಾಗಿ ನುಡಿದರು.
ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಮಾತನಾಡಿ, ಮೀನು ಹಿಡಿಯಲು ಜಾತಿ ಇಲ್ಲ. ಎಲ್ಲ ಸಮುದಾಯದವರು ಮೀನುಗಾರಿಕೆ ಮಾಡಿಯೇ ಇರುತ್ತಾರೆ ಎಂದು ಹೇಳಿದರು. ಇಂದು ನಡೆಯುತ್ತಿರುವ ಈ ಸಮಾವೇಶಕ್ಕೆ ಸಿದ್ದಯ್ಯನವರೆ ಕಾರಣ. ಮೀನುಗಾರರ ಸಮಾವೇಶವನ್ನು ಮಾಡಲು ಒಂದು ವಾರದಿಂದ ಅವಿರತ ಪರಿಶ್ರಮ ಹಾಕಿ ಯಶಸ್ವಿ ಮಾಡಿದ್ದಾರೆ. ಅವರಿಗೆ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರ ವತಿಯಿಂದ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು.
ಇದೇ ಸಂದರ್ಭದಲ್ಲಿ ಮೀನುಗಾರರ ಬೇಡಿಕೆಗಳನ್ನು ರಾಜ್ಯ ಅಧ್ಯಕ್ಷರಾದ ಮಂಜುನಾಥ್ ಎಸ್ ಸುಣಗಾರ್ ಅವರಿಗೆ ಹಸ್ತಾಂತರಿಸಿದರು ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ರಾಮನಹಳ್ಳಿ ಎಸ್ ಸಿದ್ದಯ್ಯ ಜಿಲ್ಲಾ ಮೀನುಗಾರರ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು , ಸಭೆಯಲ್ಲಿ ಕೆಪಿಸಿಸಿ ಸದಸ್ಯರಾದ ಕೆ ಮರಿಗೌಡ, ಕೆಪಿಸಿಸಿ ಕಾರ್ಯದರ್ಶಿ ಅಶೋಕ್ ಪುರಂ ಭಾಸ್ಕರ್, ಕಾಂಗ್ರೆಸ್ ಪಕ್ಷದ ವಿವಿಧ ಹಂತದ ಪದಾಧಿಕಾರಿಗಳಾದ ಶಿವಪ್ರಸಾದ್, ಎಡತಲೆ ಮಂಜುನಾಥ್, ಪೆÇ್ರಫೆಸರ್ ಶಿವಕುಮಾರ್ , ಯೋಗೇಶ್ ಉಪ್ಪಾರ್, ಶಾಮ್ ಯೋಗೇಶ್, ಸಂತೋಷ್ ಮಳಿಯೂರ್, ಸುನಂದ್ ಕುಮಾರ್, ನಾಗನಹಳ್ಳಿ ಉಮಾ ಶಂಕರ್, ಜವರೇಗೌಡರು, ಕಾರ್ಮಿಕ ನಿವೃತ್ತ ಅಧಿಕಾರಿ ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತಲಕಾಡು ಮಂಜುನಾಥ್, ಅರುಣ್ ಕುಮಾರ್ , ಶ್ರೀನಿವಾಸ್ ನಾಯಕ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಗುರುಸ್ವಾಮಿ, ಮಹದೇವು, ಉದಯಶಂಕರ್, ರಮೇಶ್, ಕಾಂಗ್ರೆಸ್ ಮುಖಂಡರಾದ ಕಾಟೂರ್ ದೇವರಾಜ್, ರಾಮನಹಳ್ಳಿ ರಘು, ಜಿಂಕ ನಾಯಕ, ರವಿನಾಯ್ಕ , ಸಿದ್ದರಾಜ್ ಹಾಗೂ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಭಾಗವಹಿಸಿದ್ದ ಮೀನುಗಾರರ ಸಹಕಾರ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.