ಮೀನುಗಾರರಿಗೆ ನದಿ ಕೆರೆಗಳನ್ನು ಮೀಸಲಿಡಲು ಕೇಂದ್ರ ಸಚಿವರಿಗೆ ಮನವಿ      


(ಸಂಜೆವಾಣಿ ವಾರ್ತೆ)       
ಬಳ್ಳಾರಿ:   ದೆಹಲಿಯಲ್ಲಿನ  ರಾಷ್ಟ್ರೀಯ ಮೀನುಗಾರರ ಸಂಘ  ನೇತೃತ್ವದಲ್ಲಿ  ಕೇಂದ್ರ ಮೀನುಗಾರಿಕಾ ಸಚೀವ ಪರೊಷೋತ್ತಮ್ ರೂಪಾಲಾ  ಅಚರನ್ನು ದೆಹಲಿಯಲ್ಲಿ ಭೇಟಿ ಮಾಡಿ. ಗಂಗಮತ ,ಕೂಲಿ ಕಬ್ಬಲಿಕ, ಮಗವೀರ ಹಾಗೂ ಇನ್ನಿತರ ಮಿನುಗಾರರ ಸಮಸ್ಯೆಗಳ ಬಗ್ಗೆ ಮತ್ತು  ನಮ್ಮ ಸಮುದಾಯಕ್ಕೆ ನದಿ , ಒಳನಾಡ ಕೆರೆಗಳನ್ನು ಮೀಸಲಿರುವಂತೆ ಮನವಿ ಸಲ್ಲಿಸಿದೆ.
 ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಸಮುದಾಯದ ಅಭ್ಯರ್ಥಿಗಳಿಗೆ ಪ್ರತಿ ತಾಜ್ಯದಲ್ಲೂ ಸ್ಪರ್ಧಿಸಲು ಅವಕಾಶ ಮಾಡಿಕೊಡುವಂತೆ  ಮನವಿ  ಮಾಡಿದೆ.      ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರಧ್ಯಕ್ಷ ಡಾ. ಗಜೇಂದ್ರ ಬಾಂಜಿ.ಕೋಶಾಧ್ಯಕ್ಷ ಡಾ.ತೋಮರ್. ಉಪಾಧ್ಯಕ್ಷ ವಿಜಯ ವಾರ್ಲೀಕರ್. ಪ್ರವೀಣಕುಮಾರ ಅಧ್ಯಕ್ಷರು  ರಾಮಿಸಂ ತಮಿಳುನಾಡು. ಹಾಗೂ ರಾಷ್ಟೀಯ ಮೀನುಗಾರರ ಸಂಘ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ದೇವಿ ಪ್ರಸಾದ್ ಹೆಜ್ಮಾಡಿ . ರಾಮೀಸಂ ರಾಜ್ಯ ಉಪಾಧ್ಯಕ್ಷ ರಂಗಸ್ವಾಮಿ ಬಳ್ಳಾರಿ,  ರಾಮೀಸಂ ರಾಜ್ಯ ಪ್ರಧಾನ ಕಾರ್ಯದರ್ಶಿ, ಬಿ ಡಿ ರವಿಕುಮಾರ್ ಇದ್ದರು.