ಮೀನಾಕ್ಷಿ ಡಯಾಗ್ನೋಸ್ಟಿಕ್ ಕೇಂದ್ರ ಉದ್ಘಾಟಿಸಿದ ನಿರ್ಮಲಾನಂದ ಶ್ರೀ

ಮಾಲೂರು, ಮೇ.೨೩-ಪಟ್ಟಣದ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದ ಬಳಿ ನೂತನವಾಗಿ ಪ್ರಾರಂಭವಾಗಿರುವ ಮೀನಾಕ್ಷಿ ಡಯಾಗ್ನೋಸ್ಟಿಕ್ ಕೇಂದ್ರದಿಂದ ಬಡವರು ಹಾಗೂ iಧ್ಯಮ ವರ್ಗದ ಜನತೆಗೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಪರೀಕ್ಷೆಗಳ ಪ್ರಯೋಜನ ಸಿಗಲಿ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ನೆಹರು ಬಡಾವಣೆಯ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದ ಬಳಿ ಚಿಕ್ಕ ಕುಂತೂರು ಗ್ರಾಮದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗೋಪಾಲ್ ರೆಡ್ಡಿ ಪುತ್ರ ಹರೀಶ್ ದಂಪತಿಗಳು ನೂತನವಾಗಿ ಪ್ರಾರಂಭಿಸಿರುವ ಮೀನಾಕ್ಷಿ ಡಯಾಗ್ನೋಸ್ಟಿಕ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕವಾಗಿ ಹಲವು ರೀತಿಯ ಸಂಶೋಧನೆಗಳು ನಡೆಯುತ್ತಿವೆ. ಜನರ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಜೀವನಶೈಲಿ ಹಾಗೂ ಆಹಾರ ಪದ್ಧತಿಯನ್ನು ರೂಡಿಸಿಕೊಳ್ಳಬೇಕು, ಬೆಂಗಳೂರಿಗೆ ಸಮೀಪವಿರುವ ಮಾಲೂರು ಪಟ್ಟಣವು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ಜನರ ಆರೋಗ್ಯದ ಹಿತದೃಷ್ಟಿಯಿಂದ ಗೋಪಾಲ್ ರೆಡ್ಡಿ ಅವರ ಪುತ್ರ ಡಾ.ಹರೀಶ್ ಅವರು ೫ ಕೋಟಿ ರೂಗಳ ವೆಚ್ಚದಲ್ಲಿ ಸುಸಜ್ಜಿತವಾದ ರೀತಿಯಲ್ಲಿ ಡಯಾಗ್ನೋಸ್ಟಿಕ್ ಸೆಂಟರ್ ಪ್ರಾರಂಭಿಸಿ ಮಧ್ಯಮ ಹಾಗೂ ಬಡವರ್ಗದ ಜನರಿಗೆ ಸಿಟಿ ಸ್ಕ್ಯಾನ್, ಎಕ್ಸರೇ, ಅಲ್ಟ್ರಾ ಸ್ಕ್ಯಾನ್, ಸೇರಿದಂತೆ ಹಲವು ರೀತಿಯ ಪರೀಕ್ಷೆಗಳನ್ನು ಮಾಡಲು ಡಯಾಗ್ನೋಸ್ಟಿಕ್ ಸೆಂಟರ್ ಪ್ರಯೋಜನವಾಗಲಿದೆ. ಮಾಲೂರಿನ ಜನರು ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜಿಎಸ್, ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದಸ್ವಾಮಿಜಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಸಿ.ಅಪ್ಪಾಜಿಗೌಡ, ಪುರಸಭೆ ಮಾಜಿ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ, ಪುರಸಭಾ ಸದಸ್ಯ ಎಂ.ವಿ.ವೇಮನ, ಚಿಕ್ಕ ಕುಂತೂರು ಗ್ರಾಪಂ ಅಧ್ಯಕ್ಷ ವೆಂಕಟಸ್ವಾಮಿ, ಮುಖಂಡರಾದ ಬೈಯ್ಯಣ್ಣ, ವೀರಭದ್ರಪ್ಪ, ವೆಂಕಟಸ್ವಾಮಿ, ಟಿ.ಬಿ.ಕೃಷ್ಣಪ್ಪ, ಎ.ಜಿ.ಕೃಷ್ಣಯ್ಯ, ರಾಘವೇಂದ್ರ, ಡಾ.ಜಿ.ಹರೀಶ್ ಕುಮಾರ್, ಡಾ. ಈ.ಮೀನಾಕ್ಷಿ, ಡಾ.ಮನೋಹರ್, ಜಿ.ಪಂ.ಮಾಜಿ ಉಪಾಧ್ಯಕ್ಷ ಗೋಪಾಲ್ ರೆಡ್ಡಿ, ಪುಷ್ಪಮ್ಮ, ಸಿ.ಗೋಪಾಲ್ ರೆಡ್ಡಿ, ಗುಣಮ್ಮ, ನವೀನ್ ಕುಮಾರ್, ವೈಷ್ಣವಿ, ಇನ್ನಿತರರು ಹಾಜರಿದ್ದರು.