ಮಿಸ್ ಯೂ ಹಬ್ಬಿ ಎಂದ ಅನುಷ್ಕಾ ಶರ್ಮಾ

ಮುಂಬೈ,ಸೆ೧೮:ಅನುಷ್ಕಾ ತಮ್ಮ ಪತಿ ವಿರಾಟ್ ಕೊಹ್ಲಿ ಜೊತೆಗಿನ ಬ್ಯೂಟಿಫುಲ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಫೇಮಸ್ ಸ್ಟಾರ್ ದಂಪತಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವವರು. ಇಬ್ಬರೂ ತಮ್ಮದೇ ಕ್ಷೇತ್ರದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರಿಬ್ಬರ ಸುದ್ದಿ ತಿಳಿದುಕೊಳ್ಳಲು ಬಯಸುವ ಅಭಿಮಾನಿಗಳಿಗಾಗಿ ಇದೀಗ ಅನುಷ್ಕಾ ಶರ್ಮಾ ’ಮಿಸ್ ಯೂ ಹಬ್ಬಿ ಎಂದು ಕ್ಯಾಪ್ಷನ್? ಕೊಟ್ಟು ಹೊಸ ಫೋಟೋ ಶೇರ್ ಮಾಡಿದ್ದಾರೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿಚಿತ್ರದಲ್ಲಿ ದಂಪತಿ ಪರಸ್ಪರ ಹತ್ತಿರ ನಿಂತು ಕ್ಯಾಮೆರಾಗೆ ಪೋಸ್ ನೀಡಿರುವುದನ್ನು ಕಾಣಬಹುದು. ಅನುಷ್ಕಾ, ವಿರಾಟ್ ಬೆಚ್ಚಗಿನ ಬಟ್ಟೆ ಧರಿಸಿದ್ದಾರೆ. ಕ್ರಿಕೆಟ್ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಸ್ವದೇಶದಕ್ಕೆ ಆಗಮಿಸಿದ್ದು, ಲಂಡನ್‌ನಲ್ಲಿರುವ ಅನುಷ್ಕಾ ಶರ್ಮಾ ಪತಿಯ ಕುರಿತು ಭಾವನಾತ್ಮಕ ಪೋಸ್ಟ್ ಪ್ರಕಟಿಸಿದ್ದಾರೆ.
ಅನುಷ್ಕಾ ಅವರ ಪ್ರೀತಿಯ ಪೋಸ್ಟ್‌ಗೆ ರಣವೀರ್ ಸಿಂಗ್ ರೆಡ್? ಹಾರ್ಟ್ ಇಮೋಜಿಯನ್ನು, ದುಷ್ಟ ಕಣ್ಣಿನ ಚಿಹ್ನೆಯನ್ನೂ ಸೇರಿಸಿದ್ದಾರೆ. ಚಲನಚಿತ್ರ ನಿರ್ಮಾಪಕರಾದ ಜೋಯಾ ಅಖ್ತರ್, ನಟರಾದ ಜರೀನ್ ಖಾನ್ ಮತ್ತು ಕರಣ್ ವಾಹಿ ಕೂಡ ಪ್ರೀತಿ ವ್ಯಕ್ತಪಡಿಸಿದ್ದಾರೆ.