ಮಿಸ್ ಇಂಡಿಯಾ ಸುಪರ್ ಟ್ಯಾಲೆಂಟ್ 2020 ದಿಕ್ಷಾ ಬಿಸೆ ದ್ವಿತೀಯ ಸ್ಥಾನ

ವಿಜಯಪುರ, ನ.19-ಮಂಗಳೂರು ಮಹಾನಗರದಲ್ಲಿ ನಡೆದ ಫ್ಯಾಶನ್ ಎ.ಬಿ.ಸಿ.ಡಿ. ಮಿಸ್ ಇಂಡಿಯಾ ಸುಪರ್ ಟ್ಯಾಲೆಂಟ್ 13-11-2020ರಂದು ವಿಜಯಪುರದ ಭರತನಾಟ್ಯ ಕಲಾವಿದೆ ಕುಮಾರಿ ದಿಕ್ಷಾ ಬಿಸೆ ರನ್ನರ್ಸ ಟ್ಯಾಲೆಂಟೆಡ್ ಬಹುಮಾನ ಪಡೆದು ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಎಮ್.ಎ. ಭರತನಾಟ್ಯಂದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಇವರ ಸಾಧನೆಗೆ ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಪ್ರೊ. ಮಹಾದೇವ ರೆಬಿನಾಳ, ವಿಜಯಕುಮಾರ ಘಾಟಗೆ, ದಿಲಾವರ ಖಾಜಿ, ಈರಣ್ಣ ಮಾಮನೆ, ರುಬಿಯಾ ಹಳ್ಳೂರ, ಸಲೀಮ್ ಜಹಾಗೀರದಾರ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.