ಮಿಸ್ಟರ್ ಅಂಡ್ ಮಿಸಸ್  ರಾಜಾ ಹುಲಿ ಪೂರ್ಣ

” ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ ” ಚಿತ್ರ ಸದ್ದುಗಲ್ಲವಿಲ್ಲದೆ ಪೂರ್ಣಗೊಂಡಿದೆ. ಹೊನ್ನರಾಜ್  ಚೊಚ್ಚಲ ಬಾರಿಗೇ ಆಕ್ಷನ್ ಕಟ್ ಹೇಳುವ ಜೊತೆಗೆ ನಾಯಕ,ನಿರ್ಮಾಪಕರೂ ಕೂಡ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ಹೊನ್ನರಾಜ್ ,    ಸಿನಿಮಾ ಮಾಡಬೇಕು ಎನ್ನುವುದು ಬಹಳ ವರ್ಷದ ಕನಸು.ಕುಟುಂಬದಲ್ಲಿ ನಡೆದ ನೈಜ ಘಟನೆ ಆಧರಿಸಿ ಚಿತ್ರ ಮಾಡಲಾಗಿದೆ.  ಶೀರ್ಷಿಕೆಗೆ ನ್ಯಾಯ ಒದಗಿಸಿದ್ದೇವೆ. ಒಳ್ಳೆಯ ಚಿತ್ರ ನೀಡಲಿದ್ದೇವೆ.

ಯಾವ ತೊಂದರೆ ಇಲ್ಲದೆ ಚಿತ್ರೀಕರಣ ಪೂರ್ಣಗೊಂಡಿದೆ. ಫ್ಯಾಮಿಲಿ ಎಂಟಟೈನ್ ಮೆಂಟ್ ಚಿತ್ರ. ಸಮಾಜ ಸೇವೆಯಲ್ಲಿರುವ ನಾಯಕ ಚಿತ್ರದಲ್ಲಿ ಮದುವೆ ಆಗ್ತನೋ ಇಲ್ಲವೋ, ಎನ್ನುವುದು ಚಿತ್ರದ ತಿರುಳು. ನಾಯಕ ಯಶ್ ಅವರ ಅಭಿಮಾನಿ, ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವ ಉದ್ದೇಶ ಹೊಂದಿದವನು ಎಂದು ಮಾಹಿತಿ ಹಂಚಿಕೊಂಡರು.

ಚಿತ್ರವನ್ನು  ಮದ್ದೂರು, ಹುಳಿಯಾರು ಚಿಕ್ಕನಾಯಕನಾಹಳ್ಳಿ, ಶ್ರೀರಂಗಪಟ್ಟ ಸೇರಿದಂತೆ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ. ಹಾಡೊಂದನ್ನು 12 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಒಂದೂ ಕಾಲು ಕೋಟಿ ಖರ್ಚಾಗಿದೆ. ನಿರ್ಮಾಣದಲ್ಲಿ ಇಡೀ ಕುಟುಂಬ ಸಹಕಾರ ನೀಡಿದ್ದಾರೆ ಎಂದರು.

ನಾಯಕಿ  ಶೃತಿ ಬಬಿತ , ಎರಡು ವರ್ಷದ ನಂತರ ನಟಿಸಿದ್ದೇನೆ. ಶೃತಿ ರಾಜ್ ಹೆಸರಿನಿಂದ ಶೃತಿ ಬಬಿತಾ ಅಂತ ಇಟ್ಟುಕೊಂಡಿದ್ದೇನೆ.ಮಾರ್ಡನ್ ,ಬಜಾರಿ ಹುಡುಗಿ ,ಹಳ್ಳಿಯಲ್ಲಿ ನಾಯಕ ಬುದ್ದಿ ಕಲಿಸುತ್ತಾರೆ. ಶೀರ್ಷಿಕೆಯಿಂದ ಜನ ನೋಡಲು ಬರುತ್ತಾರೆ ಎನ್ನುವ ನಂಬಿಕೆ ಇದೆ ಎಂದರು ಮಾಹಿತಿ ಹಂಚಿಕೊಂಡರು.

ಕಲಾವಿದರಾದ ಮೈಸೂರು ಮಂಜುಳ ,ರೇಖಾ ದಾಸ್ ಮತ್ತಿತರರು ನಟಿಸಿದ್ದಾರೆ. ಸಂಜಯ್ ಶ್ರೀನಿವಾಸ ಸಹ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ವಿನು ಮನಸು ಸಂಗೀತ,ಛಾಯಾಗ್ರಾಹಕ ಶಿವಪುತ್ರ, ನೃತ್ಯ ನಿರ್ದೇಶಕ ಗಿರೀಶ್ ಮತ್ತಿತರ ಮಾಹಿತಿ ಹಂಚಿಕೊಂಡರು.

ತಪ್ಪು ಮಾಡಿದ್ದೀರಿ

ಸಿನಿಮಾ ಯಾರೂ ನೋಡುತ್ತಿಲ್ಲ. ಹತ್ತಾರು ಮಂದಿ ಬಳಿ ಹಣ ತಗೆದುಕೊಂಡು ತಪ್ಪು ಮಾಡಿದ್ದೀರಿ ಎಂದು‌ ನಿರ್ಮಾಪಕ ಕೆ. ಮಂಜು  ನೇರವಾಗಿ ಮುಖಕ್ಕೆ ಹೊಡೆದಂತೆ ನಿರ್ದೇಶಕ ಹೊನ್ನರಾಜ್ ಗೆ ಹೇಳಿದರು.

ಮಲ್ಪಿಫ್ಲೆಕ್ಸ್ ಮುಚ್ಚುತ್ತಿವೆ. ರೆಗ್ಯೂಲರ್ ನಿರ್ಮಾಪಕರು ಚಿತ್ರ ಮಾಡ್ತಾ ಇಲ್ಲ. ನಿಮಗೆ ಆಸೆ ಇದ್ದರೆ ಬೇರೆ ಕೆಲಸ ಮಾಡಿ, ಎಲ್ಲರ ಬಳಿ ಹಣ ಪಡೆದು ಅವರಿಗೆ ಕೊಡದಿದ್ದರೆ ತೊಂದರೆ ಆಗಲಿದೆ ಎಂದು ಹೇಳಿದರು