ಮಿಷನ್ ಮೋಡ್ “ನಲ್ಲಿ ವ್ಯಾಕ್ಸಿನ್ ಹಾಕಿಸಿ


(ಸಂಜೆವಾಣಿ ವಾರ್ತೆ)
ಕೊಟ್ಟೂರು, ಜು.19: ಕೋವಿಡ್-19 ರ ವ್ಯಾಕ್ಸಿನ್ ಪ್ರಗತಿ  ತಾಲೂಕಿನಲ್ಲಿ ಹಿನ್ನೆಡೆಯಾಗಿದ್ದು, ಕೂಡಲೇ ಪ್ರಗತಿ ಸಾಧಿಸಲು  ಜಿಲ್ಲಾಧಿಕಾರಿಗಳು ಸೂಚಿಸಿರುವ ಹಿನ್ನಲೆಯಲ್ಲಿ ನಿನ್ನೆ ಪಟ್ಟಣದ  ತಾಲೂಕ ಕಛೇರಿಯ ಮಹಾತ್ಮಾಗಾಂಧೀಜಿ ಸಭಾಂಗಣದಲ್ಲಿ  ಕೋವಿಡ್-19 ವ್ಯಾಕ್ಸಿನೇಷನ್ ತಾಲೂಕು ಸಮನ್ವಯ ಸಮಿತಿ ಸಭೆ ನಡೆಯಿತು.
ತಾಲೂಕು ವೈದ್ಯಾಧಿಕಾರಿ  ಡಾ.ಎಸ್ ಪಿ ಪ್ರದೀಪ್ ಸಭೆಯಲ್ಲಿ ಮಾತನಾಡಿ.  “ಮಿಷನ್ ಮೋಡ್ “ ನಲ್ಲಿ ಕಾರ್ಯನಿರ್ವಹಿಸಿ 3 ದಿನದಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿ,
ಈಗಾಗಲೇ 12-14 ಹಾಗೂ 15-17 ವಯಸ್ಸಿನ ಮಕ್ಕಳಿಗೆ ವ್ಯಾಕ್ಸಿನ್ ಹಾಕಲಾಗಿದ್ದು, ಅವರ ಹೆಸರು ಹಾಗೂ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಸರಿಯಾಗಿ ದಾಖಲಾಗದೇ ಇರಬಹುದು. ಇದರಿಂದ ಪ್ರಗತಿ ಫಲಿತಾಂಶ ಸರಿಯಾಗಿರದೇ ಇರಬಹುದು.  ಆದ್ದರಿಂದ ಪ್ರತಿಯೊಂದು ಶಾಲಾ-ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹೆಸರು, ವ್ಯಾಕ್ಸಿನ್ ಹಾಕಿಸಿದ್ದಲ್ಲಿ ಅವರ ದಾಖಲಾತಿಯ ಸಂಖ್ಯೆ, ಆಧಾರ್ ಸಂಖ್ಯೆಯ ಮಾಹಿತಿ ಹಾಗೂ  ಸ್ಯಾಟ್ಸ್ ಸಂಖ್ಯೆಯನ್ನು ನಮೂದಿಸಿಕೊಡಲು ಹಾಗೂ ಲಸಿಕೆ ಹಾಕಿಸದೇ ಇರುವ ಬಗ್ಗೆ ಮಾಹಿತಿ ನೀಡಿದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಿ ವ್ಯಾಕ್ಸಿನ್ ಗೆ ಅಗತ್ಯ ಕ್ರಮ ವಹಿಸಬೇಕು.   ಆದ್ದರಿಂದ ಎಲ್ಲಾ ಶಾಲಾ-ಕಾಲೇಜು ಮುಖ್ಯಸ್ಥರು, ಬಿಸಿಎಂ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಹಾಸ್ಟಲ್ ಗಳಲ್ಲಿ ಅಗತ್ಯ ಕ್ರಮವಹಿಸಲು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರ ಸಹಾಯದಿಂದ ಮನೆ ಮನೆಗೆ ಭೇಟಿನೀಡಿ ವ್ಯಾಕ್ಸಿನ್ ಗೆ ಅಗತ್ಯ ಕ್ರಮವಹಿಸಿ ಶೇಕಡ 100 ರಷ್ಟು ಪ್ರಗತಿ ಸಾಧಿಸಲು ಸಹಕರಿಸಬೇಕೆಂದು ವಿನಂತಿಸಿದರು.
ಕಳೆದ ಕೋವಿಡ್ ಅಲೆಯಲ್ಲಿ ಹಾಗೂ ವ್ಯಾಕ್ಸಿನ್ ಮೇಳದಲ್ಲಿ ತಾವೆಲ್ಲಾ ಸಹಕರಿಸಿದಂತೆ ಕೋವಿಡ್ ವ್ಯಾಕ್ಸಿನ್ ಹಾಕಿಸಲು ಶ್ರಮವಹಿಸಿ ತಾಲೂಕಿನಲ್ಲಿ ಶೇ 100 ರಷ್ಟು ಪ್ರಗತಿ ಸಾಧಿಸಲು ತಹಸಿಲ್ದಾರ್ ಕುಮಾರ ಸ್ವಾಮಿ ಕೋರಿದರು.
ಸಭೆಯಲ್ಲಿ ಸಿ ಅಜ್ಜಪ್ಪ ಇಸಿಒ, ಸನ್ನಿಧಿ, ಕೊಟ್ಟೂರೇಶ್ವರ, ಗಂಗೋತ್ರಿ, ಎಸ್ ಯು ಜೆ ಉಜ್ಜಿನಿ, ಭಾಗೀರಥಿ ಪ ಪೂ ಕಾಲೇಜುಗಳ ಉಪನ್ಯಾಸಕರು ಹಾಗೂ ಪ್ರಾಚಾರ್ಯರು, ವಿಜಯಲಕ್ಷ್ಮಿ ಅಂಗನವಾಡಿ ಮೇಲ್ವಿಚಾರಕರು,  ಬಿಸಿಎಂ ಇಲಾಖೆ ಬಸವರಾಜ ಹಾಗೂ ಮುಂತಾದವರು ಭಾಗವಹಿಸಿದ್ದರು. ಸಿ ಮ ಗುರುಬಸವರಾಜ ನಿರೂಪಿಸಿ ವಂದಿಸಿದರು.

Attachments area