ಮಿಷನ್ ಇಂದ್ರಧನುಷ್ 5.0 ಎರಡನೇ ಸುತ್ತು ಯಶಸ್ವಿಯಾಗಿ ನಡೆಸಿ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಸೆ.೧೩: ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕ್ಯಾದಿಗೆರೆ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜರುಗಿದ ಮಿಷನ್ ಇಂದ್ರಧನುಷ್ 5.0 ಲಸಿಕಾ ಅಭಿಯಾನಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜಯಶ್ರೀ ಭೇಟಿ ನೀಡಿದರು.ಲಸಿಕಾ ಸತ್ರದಲ್ಲಿ ಬರಬೇಕಾದ ಫಲಾನುಭವಿಗಳ ಪಟ್ಟಿ ಪರಿಶೀಲಿಸಿ ಮಕ್ಕಳಲ್ಲಿ ಬಿಟ್ಟುಹೋದ ಲಸಿಕಾ ಸರಪಳಿ ಸರಿಪಡಿಸಿ ಮಕ್ಕಳನ್ನು ಕರೆಸಿ ಲಸಿಕಾ ವಂಚಿತರಿಗೆ ಬಿಟ್ಟುಹೋದ ಮಕ್ಕಳಿಗೆ ಲಸಿಕೆಯನ್ನು ನೀಡಿ ಯೂ ವಿನ್ ಪೆÇೀರ್ಟಲ್‍ನಲ್ಲಿ ದಾಖಲಿಸಲು ಮಾಹಿತಿ ನೀಡಿದರು.ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, 12 ಮಾರಕ ರೋಗಗಳಿಗೆ ನೀಡುವ ಲಸಿಕೆಗಳ ಮಾಹಿತಿ ಅಗತ್ಯತೆ, ಲಸಿಕೆಯ ಮಹತ್ವ ಅನುಸರಿಸಬೇಕಾದ ಕ್ರಮಗಳ ಕುರಿತು ತಿಳಿಸಿದರು. ಲಸಿಕಾ ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಕಾತ್ಯಾಯಮ್ಮ, ಕ್ಯಾದಿಗೆರೆ ಉಪ ಕೇಂದ್ರದ ಆರೋಗ್ಯ ಸುರಕ್ಷತಾ ಅಧಿಕಾರಿ ಆಶಾ, ಆಶಾ ಕಾರ್ಯಕರ್ತೆಯರು, ಫಲಾನುಭವಿ ತಾಯಂದಿರು ಮಕ್ಕಳು ಇದ್ದರು.