ಮಿಶ್ರ ತಳಿ ನಾಟಿ ಹಸುಗಳಿಂದ ಹೆಚ್ಚು ಹಾಲು-ಆಶೋಕ್

ಕನಕಪುರ.ನ೧೭: ರೈತರು ತಮ್ಮ ಬಳಿ ಇರುವ ನಾಟಿ ಹಸುಗಳಿಗೆ ಹರಿಯಾಣದ ಕೆಂಪು ಹಸುತಳಿಗಳನ್ನು ಮಿಶ್ರತಳಿಗಳಾಗಿ ಪರಿವರ್ತಿಸುವ ಮೂಲಕ ನಿಮ್ಮ ನಾಟಿ ಹಸುಗಳಿಂದ ಹೆಚ್ಚಿನ ಹಾಲು ಪಡೆಯಬಹುದಾಗಿದೆ ಎಂದು ಬೆಂಗಳೂರು ಹಾಲು ಒಕ್ಕೂಟದ ಕನಕಪುರ ಶಿಬಿರ ಕಛೇರಿಯ ಉಪ ವ್ಯವಸ್ಥಾಪಕರಾದ ಎಂ. ಅಶೋಕ್ ಕರೆನೀಡಿದರು.
ನಗರದ ಮಳಗಾಳು ಹಾಲು ಉತ್ಪಾದಕರ ೨೦೧೯-೨೦ನೇ ಸಾಲಿನ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹರಿಯಾಣದ ಕೆಂಪು ಹಸುಗಳಿಗಳು ಹೆಚ್ಚು ಹಾಲನ್ನು ಕರೆಯುತ್ತವೆ ಇವುಗಳ ಬಿತ್ತನೆ ಹೋರಿ ತಂದು ನಿಮ್ಮ ನಾಟಿ ಹಸುಗಳಿಗೆ ಕ್ರಾಸ್ ಮಾಡಿದಾಗ ಕಡಿಮೆ ಕೊಡುತ್ತಿದ್ದ ಹಾಲು ೮ರಿಂದ ೧೦ ಲೀಟರ್‌ಹೆಚ್ಚಿಗೆ ಹಾಲು ಬರತ್ತದೆ ಎಂದು ಸಲಹೆ ನೀಡಿದರು.
ಹಿಂದೆ ಬೆಂಗಳೂರು ಹಾಲು ಡೈರಿಗೆ ಹೆಚ್ಚಿನ ಹಾಲು ಬರುತಿದ್ದ ಸಂದರ್ಭದಲ್ಲಿ ರೈತರಿಂದ ಕೆಲಸ ದಿನಗಳಕಾಲ ಹಾಲನ್ನು ಪಡೆಯುತ್ತಿರಲಿಲ್ಲ ನಿಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್‌ರವರ ದೂರದೃಷ್ಟಿ ಹಾಗೂ ರೈತರ ಪರವಾದ ಚಿಂತನೆಯಿಂದ ಶಿವನಹಳ್ಳಿ ಬಳಿ ಇರುವ ಮೆಗಾಡೈರಿಯಲ್ಲಿ ಹಾಲುನ್ನು ಚೀಜ್ ಮತ್ತು ಪೌಡರ್ ಆಗಿ ಪರಿವರ್ತನೆ ಮಾಡಲಾಗುತ್ತಿದ್ದು ಈಗ ರೈತರಿಗೆ ನಷ್ಟ ತಪ್ಪಿದಂತೆ ಆಗಿದೆ ಎಂದು ಹೇಳಿದರು.
ಬೆಂಗಳೂರು ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಖರೀದಿ ಮಾಡಿದ ಹಸುಗಳು ಮರಣಹೊಂದಿದರೆ ಅವುಗಳಿಗೆ ವಿಮೆ ಮಾಡಿದ್ದರೆ, ವಿಮಾ ಹಣ ನೀಡಬೇಕೆಂಬ ಹೊಸ ಕಾನೂನು ಬಂದಿದ್ದು ಇನ್ನು ಕೆಲವೇ ದಿನಗಳಲ್ಲಿ ಚಾಲ್ತಿಗೆ ಬರಲಿದೆ ಎಂದು ರೈತರಿಗೆ ಸಿಹಿ ಸುದ್ದಿ ನೀಡಿದರು.
ಇದೇ ಸಂದರ್ಭದಲ್ಲಿ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮರಣಗೊಂದಿದೆ ಹಾಲು ಉತ್ಪಾಕರಿಗೆ ೫೦೦೦ರೂಗಳನ್ನು ನೀಡುವಂತೆ ಸಲಹೆ ನೀಡಲಾಯಿತು. ಹಾಲು ಕರೆಯುವ ಯಂತ್ರದ ಕ್ಯಾನ್ ಪೈಬರ್ ಕ್ಯಾನ್ ನೀಡುವಂತೆ ನಿರ್ದೇಶಕರಾದ ಗಣೇಶ್ ಸಲಹೆ ನೀಡಿದರು. ನಗರಸಭಾ ಸದಸ್ಯರು ಹಾಗೂ ನಿರ್ದೇಶಕರಾದ ಕಾಂತರಾಜ್ ರವರು ಮಾತನಾಡಿ ಸಂಘಗಳಿಗೆ ನೀಡುವ ತುಪ್ಪದ ಬೆಲೆಯನ್ನು ಲೀಟರ್‌ಗೆ ೩೬೦ರೂಗಳನ್ನು ಎಲ್ಲಾ ಕಾಲದಲ್ಲಿ ನೀಡಬೇಕೆಂದು ಉಪವ್ಯವಸ್ಥಾಪಕರಿಗೆ ಮನವಿ ಮಾಡಿದರು.
ಡೈರಿಯಲ್ಲಿ ಇರುವ ಹಾಲುಕರೆಯುವ ಯಂತ್ರವೊಂದು ಕೆಟ್ಟುಹೋಗಿದೆ ಇದನ್ನು ಸಿರಪಡಿವುಂತೆ ಸದಸ್ಯರೊಬ್ಬರು ಧ್ವನಿತೆಗೆದರು ಈಸಂದರ್ಭದಲ್ಲಿ ರಿಪೇರಿ ಮಾಡಿಸಿ ಅದಕ್ಕೆ ಆಗುವ ವೆಚ್ಚವನ್ನುನಾನೇ ನೀಡುತ್ತೇನೆ ಎಂದು ಕಾಂತರಾಜ್ ಹೇಳಿದರು.
ಸಂಘದಲ್ಲಿ ಆಗುವ ವೆಚ್ಚವನ್ನು ಕಡಿತಗೊಳಿಸಿ ಲಾಭಾಂಶವನ್ನು ಹೆಚ್ಚಿಗೆ ನೀಡಿ ಬೇರೆಸಂಘಗಳಲ್ಲಿ ಹೆಚ್ಚು ಲಾಭಾಂಶವನ್ನು ನೀಡುತಿದ್ದಾರೆ ಎಂದು ಅಂಬಾಪ್ರಸಾದ್ ಸಭೆಯ ಗಮನಸೆಳೆದರು. ಸದಸ್ಯರಾದ ಜಯರಾಂರವರು ಸಲಹೆ ನೀಡಿ ಆಡಿಟರ್ ನೇಮಕ ಮಾಡುವ ವಿಚಾರದಲ್ಲಿ ಸಹಕಾರ ಇಲಾಖೆಯಿಂದ ನೊಂದಾಯಿತ ಆಟರ್ ಆದ ಉಮೇಶ್‌ರವನ ನೇಮಕ ಮಾಡುವಂತೆ ಸಲಹೆ ನೀಡಿದರು. ಹಳೆಯ ಶೇರುಗಳ ಮುಖಬೆಲೆ ೧೦ರೂ ಇದ್ದು ಅದರ ಬೆಲೆಯನ್ನು ೫೦೦ರೂಗಳನ್ನುಮಾಡಬೇಕು ಹಾಗೂ ಉಳಿಕೆ ೪೯೦ರೂಗಳನ್ನು ಸದಸ್ಯರಿಂದ ಪಡೆಯುವಂತೆ ತೀರ್ಮಾನಿಸಲಾಯಿತು.
ಸಭೆಯ ಅದ್ಯಕ್ಷತೆಯನ್ನು ಸಂಘದ ಅದ್ಯಕ್ಷರಾದ ವೆಂಕಟರಮಣಸ್ವಾಮಿ ವಹಿಸಿದ್ದರು. ಸಂಘದ ಕಾರ್‍ಯದರ್ಶಿ ಹನುಮಂತಕುಮಾರ್ ವಾರ್ಷಿಕ ಮಹಾಸಭೆಗೆ ಸಂಘದ ಆಯವ್ಯಯ ಮಂಡಿಸಿದರು.
ಉಪಾದ್ಯಕ್ಷರಾದ ಎಸ್.ವಿ.ಅನಿಲ್ ಕುಮಾರ್, ನಿರ್ದೇಶಕರಾದ ಎಂ.ಕಾಂತರಾಜು, ಎಂ.ಪಿ.ರವಿ, ಆರ್.ವೆಂಕಟೇಶ್, ಪುಟ್ಟರಾಜು, ರಾಮಸಂಜೀವಯ್ಯ, ಜಯಕುಮಾರ್, ಗಣೇಶ್, ವರಲಕ್ಷ್ಮಿ, ವೇಧಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರಾದ ಜಯರಾಮು, ಲಕ್ಷ್ಮೀಕಾಂತ್, ಎಂ.ಎನ್.ಶ್ರೀಧರ್,ನಾಗರಾಜು, ಸುಕನ್ಯ, ಮಂಚೇಗೌಡ, ಮರಸಪ್ಪ, ಮಂಜುನಾಥ್, ಪುಟ್ಟರಾಜು, ಬಾರ್ ವೆಂಕಟೇಶ್ ಗೋಪಾಲ್ ರಾಜು, ಆನಂದ್, ಬೈರಪ್ಪ ಪಾಲ್ಗೊಂಡಿದ್ದರು.