ಮಿಶ್ರ ತರಕಾರಿ ಹುಳಿ

1/2 ಕಪ್ ತೊಗರಿ ಬೇಳೆ
ಸ್ವಲ್ಪ ಹುರುಳಿಕಾಯಿ
ನವಿಲು ಕೋಸು
ದೊಡ್ಡ ಕ್ಯಾರೆಟ್
ಸ್ವಲ್ಪ ಅರಿಶಿಣ
ಬೆಲ್ಲ
ಉಪ್ಪು
ಕಪ್ ನೀರು
ಮಸಾಲೆಗೆ
ಬ್ಯಾಡಗಿ ಮೆಣಸಿನ ಕಾಯಿ
ಕೊತ್ತಂಬರಿ ಬೀಜ
ಮೆಂತ್ಯ
ಎಣ್ಣೆ
ಮಸಾಲೆ ರುಬ್ಬಲು
ಕಪ್ ಕಾಯಿ
ಒಗ್ಗರಣೆಗೆ :
ಎಣ್ಣೆ ಇಲ್ಲವೆ ತುಪ್ಪ
ಸಾಸಿವೆ
ಸ್ವಲ್ಪ ಇಂಗು
ಕೆಂಪು ಮೆಣಸಿನ ಕಾಯಿ

ಮಾಡುವ ವಿಧಾನ
ಮೊದಲು ಬೇಳೆ ಮತ್ತು ತರಕಾರಿಗಳನ್ನು ಚೆನ್ನಗಿ ತೊಳೆದಿಟ್ಟುಕೊಳ್ಳಿ.

ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಯಲು ಇಡಬೇಕು .

ಹುರುಳಿಕಾಯಿಯನ್ನು ಒಂದು ಇಂಚು ಉದ್ದಕ್ಕೆ ಮುರಿದಿಟ್ಟು ಕೊಂಡು, ಕ್ಯಾರೆಟ್ಟಿನ ಮತ್ತು ನವಿಲು ಕೋಸಿನ ಸಿಪ್ಪೆಯನ್ನು ತೆಗೆದು ಅದನ್ನು ಚಿಕ್ಕ ಹೊಳುಗಳನ್ನಾಗಿ ಹೆಚ್ಚಿಟ್ಟುಕೊಳ್ಳಬೇಕು.

ತೊಳೆದಿಟ್ಟ ಬೇಳೆಗೆ 2 ಕಪ್ ನೀರು ,ಅರಿಶಿಣ, 1/4 ಚಮಚ ಎಣ್ಣೆ ಹಾಗು ಹೆಚ್ಚಿಟ್ಟ ತರಕಾರಿಯನ್ನು ಹಾಕಿ ಕುಕ್ಕರಿನಲ್ಲಿ ಮೀಡಿಯಮ್ ಉರಿಯಲ್ಲಿ 2 ಕೂಗು ಬರುವಷ್ಟು ಬಿಡಿ.
ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಹಾಕಿ ಕೊತ್ತಂಬರಿ ಬೀಜ,ಮಂತ್ಯ ಮತ್ತು ಮೆಣಸಿನ ಕಾಯಿಯನ್ನು ಹಾಕಿ ಮೆಂತ್ಯ ಕೆಂಪಗಾಗುವಷ್ಟು ಹುರಿದಿಟ್ಟುಕೊಳ್ಳಿ .

ಹುರಿದ ಮಸಾಲೆಯನ್ನು ಕಾಯಿ ಮತ್ತು ಹುಣಸೆ ಹಣ್ಣಿನೊಡನೆ ಸುಮಾರಾಗಿ ಸಣ್ನಗೆ ರುಬ್ಬಿಕೊಳ್ಳಿ.

ಕುಕ್ಕರ್ ಆರಿದ ಮೇಲೆ ಬೆಂದ ಬೇಳೆ ಮತ್ತು ತರಕಾರಿಯನ್ನು ಒಂದು ದೊಡ್ಡ ಪಾತ್ರೆಗೆ ತೆಗೆದುಕೊಳ್ಳಿ .

ಅದಕ್ಕೆ ತಿರುವಿಕೊಂಡ ಮಿಶ್ರಣ, ಉಪ್ಪು ಮತ್ತು ನೀರನ್ನು ಹಾಕಿ ಕಲಸಿ ಸುಮಾರಿ ಹತ್ತು ನಿಮಿಷ ಸಣ್ಣ ಉರಿಯಲ್ಲಿ ಕುದಿಯಲು ಬಿಡಬೇಕು .

ಬೇಕಾದಲ್ಲಿ ಕರಿಬೇವಿನ ಸೊಪ್ಪನ್ನೂ ಹಾಕಬಹುದು. ಹುಳಿಯ ಮೇಲುಗಡೆ ನೊರೆ ನೊರೆಯಾಗಿ ಬಂದಾಗ ಉರಿಯನ್ನು ಆರಿಸಿ. ಹುಳಿ ತಯಾರು .

ಒಗ್ಗರಣೆ
2 ಟಿ ಚಮಚ ಎಣ್ನೆಯನ್ನು ಒಗ್ಗರಣೆ ಸೌಟಿನಲ್ಲಿ ಒಲೆಯ ಮೇಲಿಟ್ಟು ಅದಕ್ಕೆ ಇಂಗು ಸಾಸಿವೆ ಹಾಕಿ , ಸಾಸಿವೆ ಚಟಗುಟ್ಟಿದ ಮೇಲೆ ಮೆಣಸಿನಕಾಯಿಯನ್ನು ಮುರಿದು ಹಾಕಿ ಉರಿಯನ್ನು ಆರಿಸಿ .
ಈ ಒಗ್ಗರಣೆಯನ್ನು ತಯಾರಿಸಿರುವ ಹುಳಿಗೆ ಹಾಕಿದರೆ ರುಚಿಕರವಾದ ಮಿಶ್ರ ತರಕಾರಿ ಹುಳಿ ಸವಿಯಲು ಸಿದ್ಧ . ಅನ್ನ ಹಾಗು ರಾಗಿ ಮುದ್ದೆಯೊಡನೆ ಬಲು ರುಚಿ .