ಮಿಶ್ರ ತರಕಾರಿ ಕುರುಕಲು

ಕುರುಕಲು ತಿಂಡಿ ಇಷ್ಟ ಪಡದವರು ತುಂಬಾ ವಿರಳ. ಅದರಲ್ಲಿ ಮಿಶ್ರ ತರಕಾರಿಗಳಿಂದ ತಯಾರಿಸಿದರೆ ರುಚಿಯ ಜೊತೆಗೆ ಅಧಿಕ ವಿಟಮಿನ್ ಗಳಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಈ ಮಿಶ್ರ ವೆಜಿಟೇಬಲ್ ಕುರುಕಲು ತಿಂಡಿ ಸುಲಭವಾಗಿ ಮಾಡಬಹುದಾಗಿದ್ದು, ತಯಾರಿಸುವ ವಿಧಾನ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
ಕತ್ತರಿಸಿದ ದೊಡ್ಡಮೆಣಸು, ಆಲೂಗೆಡ್ಡೆ, ಎಲೆಕೋಸು, ಈರುಳ್ಳಿ, ಹಾಗಲಕಾಯಿ, ಹೀರೆ ಕಾಯಿ ಎಲ್ಲಾ ತರಕಾರಿ ಸೇರಿ ಒಂದು ಕಪ್
2 ಕಪ್ ಕಡಲೆ ಹಿಟ್ಟು
1 ಕಪ್ ಅಕ್ಕಿ ಹಿಟ್ಟು
11/2 ಕಪ್ ನೀರು
ರುಚಿಗ ತಕ್ಕ ಉಪ್ಪು
1 ಚಮಚ ಜೀರಿಗೆ
1/2 ಚಮಚ ಮೆಣಸಿನ ಪುಡಿ
ಒಂದು ಚಿಟಿಕೆಯಷ್ಟು ಅಡುಗೆ ಸೋಡಾ
ಎಣ್ಣೆ
ಮಾಡುವ ವಿಧಾನ:
ಕಡಲೆ ಮತ್ತು ಅಕ್ಕಿ ಹಿಟ್ಟಿಗೆ ನೀರು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಆ ಮಿಶ್ರಣಕ್ಕೆ ಜೀರಿಗೆ, ರುಚಿಗೆ ತಕ್ಕ ಉಪ್ಪು ಮತ್ತು ಚಿಟಿಕೆಯಷ್ಟು ಅಡುಗೆ ಸೋಡಾ ಹಾಕಿ ಚೆನ್ನಾಗಿ ಬೆರೆಸಬೇಕು.
ಈಗ ಸ್ವಲ್ಪ ದೊಡ್ಡದಾಗಿ ಕತ್ತರಿಸಿದ ತರಕಾರಿಗಳನ್ನು ಈ ಮಿಶ್ರಣದಲ್ಲಿ ಅದ್ದಿ ಕುದಿಯುತ್ತಿರುವ ಎಣ್ಣೆಗೆ ಹಾಕಬೇಕು. ತಿಂಡಿಗಳು ಕಂದು ಬಣ್ಣಕ್ಕೆ ತಿರುಗಿದಾಗ ತೆಗೆದರೆ ಮಿಶ್ರ ವೆಜಿಟೇಬಲ್ ಕುಕುಕಲು ರೆಡಿ.