ಮಿಶ್ರತಳಿ ಜಾನುವಾರು ಪ್ರದರ್ಶನ

ಮೊಳಕಾಲ್ಮೂರು, ತಾಲೂಕಿನ ಚಿಕ್ಕೋಬನಹಳ್ಳಿ ಗ್ರಾಮದಲ್ಲಿ ಇಂದು ಪಶು ಪಾಲನಾ ಮತ್ತು ಪಶುಗಳ ವೈದ್ಯಕೀಯ ಸೇವಾ ಇಲಾಖೆ ಮೊಳಕಾಲ್ಮೂರು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ ಚಿಕ್ಕೋಬನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ 2023-24  ಸಾಲಿನ ವಿಸ್ತರಣಾ ಬಲಪಡಿಸುವ ಯೋಜನೆಯಡಿ ಮಿಶ್ರತಳಿ ಜಾನುವಾರು ಪ್ರದರ್ಶನ ಕಾರ್ಯಕ್ರಮ ನಡೆಯಿತು. 

  ಈ ಕಾರ್ಯಕ್ರಮದಲ್ಲಿ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀಮತಿ ಕೆ. ಆಶಾ ಸಿದ್ದೇಶ್ ಮಾತನಾಡಿ, ಹೈನುಗಾರಿಕೆ ರೈತರಿಗೆ ಆಸರೆ ಉತ್ತಮ ಜಾನುವಾರು ತಳಿಯ ಸಾಕಣೆಕೆಯಿಂದ ಹೈನುಗಾರಿಕೆಯನ್ನು ಬಲಪಡಿಸಬಹುದು ಮತ್ತು ಆದಾಯ ಬಲಪಡಿಸಬಹುದು.ಜಾನುವಾರುಗಳಿಗೆ ರೋಗ ಲಕ್ಷಣಗಳು ಕಂಡು ಬಂದಲ್ಲಿ ಪಶು ಸಂಗೋಪನಾ ಇಲಾಖೆಯ ವೈದ್ಯರನ್ನು ಸಂಪರ್ಕಿಸಿ ನಿರ್ವಹಣೆ ಮಾಡಿಕೊಳ್ಳಬಹುದು ನಮ್ಮ ಹಾಲು ಉತ್ಪಾದಕರ ಸಹಕಾರ ಸಂಘ ಹೆಚ್ಚಿನ ಹಾಲು ಉತ್ಪಾದಕರ ಸಂಘ ವಾಗಿ ಬೆಳೆಯಲೆಂದು ಆಸಿಸುತ್ತೆನೆ ಎಂದು ತಿಳಿಸಿದರು. 

   ಈ ಸಂದರ್ಭದಲ್ಲಿ ಮಾತನಾಡಿದ ಪ ಸಂ ಇಲಾಖೆಯ ಸಹಾಯಕ ನಿರ್ದೇಶಕರಾದ ರಂಗಪ್ಪ ಮಾತನಾಡಿ ಹೈನುಗಾರಿಕೆ ಮಾಡುವಂತಹ ರೈತರು ಹಸುಗಳಿಗೆ ಬರುವ ರೋಗಿಗಳ ಬಗ್ಗೆ ಎಚ್ಚರ ಹಸುಗಳಿಗೆ   ರೋಗ ಕಂಡು ಬಂದಲ್ಲಿ ನಮ್ಮ ಇಲಾಖೆಯ ವೈದ್ಯಾಧಿಕಾರಿ ಗಳನ್ನು ಸಂಪರ್ಕಿಸಬೇಕು ಹೈನುಗಾರಿಕೆ ರೈತರಿಗೆ ಲಾಭ ದಾಯಕವಾಗಿದೆ   ಎಂದು ತಿಳಿಸಿದರು. 

   ಡಾ.ಮಹೇಶ್ ಮಾತನಾಡಿ, ಹಸುಗಳ ತಪಾಸಣೆ ಗಾಗಿ ಸಂಚಾರಿ ವಾಹನ ಲಭ್ಯವಿದೆ, ಬೆಳಿಗ್ಗೆ ಒಂಬತ್ತು ಗಂಟೆಯಿಂದ ಸಂಜೆ ಐದು ಗಂಟೆವರೆಗೆ ತುರ್ತು ಆಂಬುಲೆನ್ಸ್ ಸೇವೆ ಇರುತ್ತದೆ ಈಗ ರೈತರು ಆತಂಕ ಪಡುವ ಆಗತ್ಯವಿಲ್ಲ, 1962 ಇದು ಆಂಬ್ಯುಲೆನ್ಸ್ ನ ಸಹಾಯವಾಣಿ ಸಂಖ್ಯೆ ಯಾಗಿದೆ ನಿಮ್ಮ ಜಾನುವಾರುಗಳಿಗೆ ಅನಾರೋಗ್ಯಕಂಡು ಬಂದಲ್ಲಿ ಕರೆ ಮಾಡಬಹುದೆಂದು ತಿಳಿಸಿದರು. 

  ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಓ. ಕರಿ ಬಸಪ್ಪ ಮಾತನಾಡಿ, ಮಿಶ್ರತಳಿ ಜಾನುವಾರು ಪ್ರದರ್ಶನ ಮತ್ತು ಪಶುಗಳ ತಪಾಸಣೆ ಕಾರ್ಯಕ್ರಮಗಳಿಂದ ರೈತರಿಗೆ ಮತ್ತು ಹೈನುಗಾರಿಕೆ ಮಾಡುವಂತಹ ವರೆಗೆ ಅನುಕೂಲ ವಾಗುತ್ತದೆ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪಯುಕ್ತ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದು ತಿಳಿಸಿದರು. 

  ಈ ಕಾರ್ಯಕ್ರಮದ ನಿರೂಪಣೆಯನ್ನು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಯಾದ ಜಿ. ಆರ್. ಸೋಮಶೇಖರ್ ನೇರವೆಸಿದರು. 

  ಈ ಕಾರ್ಯಕ್ರಮದಲ್ಲಿ ಡಾ. ವರುಣ್, ಜಾ ಪರೀಕ್ಷಕರಾದ  ದೇವರಾಜ್, ಶಿವರುದ್ರಯ್ಯ,ತಿಪ್ಪೇಸ್ವಾಮಿ, ಹಾ ಉ ಸಂ ನೀ ಗಳಾದ ಎಂ. ವಿ. ಮಲ್ಲೇಶಪ್ಪ,ತಿಪ್ಪೇಸ್ವಾಮಿ, ಸುವರ್ಣಮ್ಮ ಓಬಯ್ಯ,  ಅಮೃತಾ, ಶಿವಣ್ಣ ಇನ್ನು ಮುಂತಾದವರಿದರು.

One attachment • Scanned by Gmail