
ಬೇಕಾಗುವ ಪದಾರ್ಥಗಳು:
- ಅಕ್ಕಿಹಿಟ್ಟು – ೨ ಚಮಚ
- ಕಡ್ಲೆಹಿಟ್ಟು – ೪ ಚಮಚ
- ಮೈದಾಹಿಟ್ಟು – ೨ ಚಮಚ
- ಚಿರೋಟಿರವೆ – ೨ ಚಮಚ
- ಜೀರಿಗೆ/ಓಂಕಾಳು – ೧ ಚಮಚ
- ಅರಿಶಿನ – ಅರ್ಧ ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಬೇಕಾದರೆ ಶುಂಠಿ ಪೇಸ್ಟ್ – ೨ ಚಮಚ
- ಅಚ್ಚಖಾರದಪುಡಿ – ೧ ಚಮಚ
- ಹಸಿಮೆಣಸಿನಕಾಯಿ ಪೇಸ್ಟ್ – ೨ ಚಮಚ
- ಕೊತ್ತಂಬರಿಸೊಪ್ಪು – ರುಚಿಗೆ ತಕ್ಕಷ್ಟು
- ಚಿಕ್ಕದಾಗಿ ಹೆಚ್ಚಿದ ಈರುಳ್ಳಿ – ೨
- ಚಿಕ್ಕದಾಗಿ ಹೆಚ್ಚಿದ ಕ್ಯಾಪ್ಸಿಕಮ್ – ಸ್ವಲ್ಪ
- ಚಿಕ್ಕದಾಗಿ ಹೆಚ್ಚಿದ ಕರಿಬೇವು – ಸ್ವಲ್ಪ
- ಗಸಗಸೆ – ೨ ಚಮಚ
ತರಕಾರಿಗಳು:
- ತುರಿದ ಕ್ಯಾರೆಟ್
- ತುರಿದ ಆಲೂಗೆಡ್ಡೆ
- ಹೆಚ್ಚಿದ ಎಲೆಕೋಸು
- ಹೆಚ್ಚಿದ ಬೀನ್ಸ್
- ತುರಿದ ಗೆಡ್ಡೆಕೋಸು
- ಗೋಬಿಹೂಗಳು
(ಎಲ್ಲವೂ ಸೇರಿ ೨ ಲೋಟ)
ಇತರೆ:
- ಕರಿಯಲು ಎಣ್ಣೆ
ವಿಧಾನ:
ಮೇಲಿನ ಪದಾರ್ಥಗಳನ್ನೆಲ್ಲಾ ಸೇರಿಸಿ, ೨ ಚಮಚ ಕಾಯಿಸಿದ ಎಣ್ಣೆ ಮತ್ತು ಸ್ವಲ್ಪ ನೀರು ಹಾಕಿ ಕಲೆಸಿ, ಉಂಡೆಮಾಡಿ ಕಾದಎಣ್ಣೆಗೆ ಹಾಕಿ ಸಣ್ಣಉರಿಯಲ್ಲಿ ಕೆಂಪಗಾಗುವ ತನಕ ಕರಿಯಬೇಕು.