ಮಿಲ್ಲಿ ಕೌನ್ಸಿಲ್ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಡಾ. ಅಜಗರ್ ಚುಲಬುಲ್ ಆಯ್ಕೆ

ಕಲಬುರಗಿ:ನ.17: ಬಿಹಾರದ ಪಟನಾ ಫುಲವಾರಿ ಶರೀಫ್ ನಲ್ಲಿ ನವೆಂಬರ್ 12, 13 ಹಾಗೂ 14 ರಂದು ಅಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ವರ್ಷಿಕ ಸಾಮಾನ್ಯ ಸಭೆ ಜರುಗಿತು. ಸಭೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿಯ ಸದಸ್ಯರಾಗಿದ್ದ ಡಾ. ಮೊಹಮ್ಮದ ಅಜಗರ್ ಚುಲಬುಲ್ ಅವರಿಗೆ ರಾಜಕೀಯ ವ್ಯವಹಾರ ರಾಷ್ಟೀಯ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಜೊತೆಗೆ ಮಾಧ್ಯಮ ಯುವ ಹಾಗೂ ಸಮುದಾಯ ಸೇವೆ ಸಮಿತಿಯ ಸಭೆಯಲ್ಲಿ ಹೆಸರು ಪ್ರಸ್ತಾಪಗೊಂಡಿದೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಡಾ. ಚುಲಬುಲ್ ಮಾತನಾಡಿ, ಸದ್ಯ ದೇಶದಲ್ಲಿ ಹಿಂದೂ-ಮುಸ್ಲಿಂ ವೀಷ ಬೀಜ ಬೇಳೆಸಲು ಕೋಮುವಾದಿ ಶಕ್ತಿ ಹಾಗೂ ದೇಶದ ಸಂವಿಧಾನ ಬಗ್ಗೆ ನಂಬಿಕೆಲ್ಲದ ಶಕ್ತಿಗಳು ಬಹಳ ಸಕ್ರಿಯವಾಗಿದೆ. ಸಂವಿಧಾನ ರಕ್ಷಣೆಗೆ “ಸಂವಿಧಾನ ರಕ್ಷಿಸಿ ದೇಶ ಬೆಳಸಿ” ಚಳುವಳಿ ಸಭೆ ಇಡಿ ದೇಶದಲ್ಲಿ ಮುಕ್ತ ಪ್ರಾರಂಭಿಸಿಬೇಕು, ಜೊತೆಗೆ ಎಲ್ಲ ಸಮುದಾಯದ ಬುದ್ಧಿವಂತರು. ಜಾತ್ಯಾತೀತ ವ್ಯಕ್ತಿಗಳು ದೇಶದ ಅಭಿವೃದ್ಧಿ ಕಾಲಜಿ ವಹಿಸಿವರು ಹಾಗೂ ದೇಶ ಸಂವಿಧಾನ ಬಗ್ಗೆ ಸಂಪೂರ್ಣ ನಂಬಿಕೆ ಇರುವ ಮುಖಂಡರು ನಾಐಕರು ಸಂಘ ಸಂಸ್ಥೆ ಹಾಗೂ ವಿವಿಧ ಧರ್ಮದ ಗುರುಗಳಿಗೆ ಒಂದೆ ವೇದಿಕೆಯಲ್ಲಿ ತಂದು ದೊಡ್ಡ ಸಭೆ ಸಮಾರಂಭ ಮಾಡಿ ಕೋಮು ಶಕ್ತಿ ಯೋಜನೆಮತ್ತು ಅವರ ಕಾರ್ಯಕ್ಕೆ ನಾವು ತಡೆಯಬಹುದು. ಮೊಂಬ್ಲಿಚಿಂಗ್ ಹಾಗೂ ಕೋಮು ಗಲಭೆ ನಿಯಂತ್ರಣಕ್ಕೆ ಕಠಿಣ ಕಾನೂನು ರಚಿಸಬೇಕೆಂದು ಹೇಳಿದರು.
ಮುಂಬರು ಐದು ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ (ಉತ್ತರ ಪ್ರದೇಶ, ಉತ್ತಾರಖಂಡ, ಮಣಿಪುರ, ಗೋವಾ ಹಾಗೂ ಪಂಜಾಬ್ ಯಾವ ಕಾರಣಕ್ಕೂ ಬಿಜೆಪಿ ಹಾಗೂ ಇವರ ಬೆಂಬಲಿತ ಪಕ್ಷಗಳು ಅಧಿಕಾರಕ್ಕೆ ಬರಬಾರದು, ಈಗಿಂದಲ್ಲೂ ನಾವು ಸಿದ್ದತೆ ಮಾಡಬೇಕು ಹಿಂದೆ ಪಶ್ಚಿಮ ಬಂಗಾಳ, ಕೇರಳಮತ್ತು ತಮಿಳನಾಡು ರಾಜ್ಯದಲ್ಲಿ ಕೋಮುವಾದಿ ಪಕ್ಷಗಳಿಗೆ ದೂರ ಇಟ್ಟಿದ್ದರು. (ಸೂಲು) ಅದೆ ರೀತಿ ಮುಂಬರುವ ಪಂಚ ರಾಜ್ಯದಲ್ಲಿ ಪಾಲಿಸಿ ನಾವು ಉಶಸ್ವಿಯಾಗಬಹುದು ಎಂದು ಹೇಳಿದರು.
ಡಾ. ಮೊಹಮ್ಮದ್ ಅಸಗರ್ ಚುಲಬುಲ್ ತಮ್ಮ ಪತ್ರಿಕೆ ಪ್ರಕಟಣೆಯಲ್ಲಿ ಎಐಎಂಸಿ ಇನ್ನಿತರ ವಿಷಯ ಬಗ್ಗೆ ಮಾತನಾಡಿ ಸಭೆಯಲ್ಲಿ 2050 ವರ್ಷವರೆಗೆ ಮುಸ್ಲಿಂ ಸಮಾಜದ ಎಲ್ಲ ವರ್ಗದವರು 100% ಶೈಕ್ಷಣಿಕ ಆಗಬೇಕು ಲಾಕ್ ಡೌನ್ ನಲ್ಲಿ ಶಾಲೆ ಬಿಟ್ಟು ಹೊದ ಮಕ್ಕಳಿಗೆ ಗುರುತಿಸಿ ಪುನಃಹ ಶಾಲೆಗೆ ಕಳುಹಿಸುವ ಕಾರ್ಯ 2022, 26 ಜನೆವರಿಗೆ ದೇಶದ 75 ವರ್ಷ ಸ್ವತಂತ್ರ್ಯ ಉತ್ಸವದಲ್ಲಿ ಅಲ್ಪಸಂಖ್ಯಾತರ ನಾಐಕರ ಬಲಿದಾನ ಹೆಸರು ಜನರ ಮುಂದೆ ತರಬೇರುವಂತ ಎಲ್ಲಾ ಜಾತ್ಯಾತೀತತತ್ವ ಹಾಗೂ ಸಂವಿಧಾಣ ಮೇಲೆ ನಂಬಿಕೆ ಇರುವ ಮುಖಂಡರು ಸಂಘ ಸಂಸ್ಥೆಗಳಿಗೆ ಜೊತೆಗೊಡಿ ಮಾತನಾಡಿ ಸಂವಿಧಾನ ವಿರೋಧಿ ಹಾಗೂ ಶಾಂತಿ ಭಂಗ ಮತ್ತು ಕೋಮುವಾದ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಸಲು ಹಾಗೂ ಇನ್ನಿತರ ಮುಖ್ಯ ವಿಷಯವನ್ನು ವಿವಿಧ ರಾಝ್ಯದ ಸಂಬಂಧ ಮಂಜೂರು ಮಾಡಲಾಯಿತು.
ಮುಂದಿನ ಮೂರು ವರ್ಷಗಳಿಗೆ ಇದೆ ಅಧ್ಯಕ್ಷರು, ಕಾರ್ಯದರ್ಶಿ, ಉಪಾಧ್ಯಕ್ಷರು ಕೆಲಸ ನಿರ್ವಾಹಿಸಲು ಮುಂದುವರಿಸಲಾಯಿತು. ಎಐಎಂಸಿ ರಾಷ್ಟ್ರೀಯ ಅಧ್ಯಕ್ಷರಾದ ಮೌಲಾನಾ ಹಕಿಂ ಅಬ್ದುಲ್ ಮುಫ್ತಿ, ಸಭೆಯ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯಾದರ್ಶಿಯಾದ ಡಾ. ಮಂಜೂರ ಆಲಂ ಸಭೆಯ ನಡುವಳಿಕೆ, ಸುತ್ತೋಲೆನಿರ್ದೇಶನಗಳು ಸಭೆಯಲ್ಲಿ ಪ್ರಸ್ತಾಪಿಸಿದರು. ಶಾ ಪಸ್ತಫ ರಿಪಾಯಿ ಜಿಲಾನಿ ಸಲೇಮಾನ್ ಖಾನ್, ಮೌಲಾನಾ ಅನಿಸುರ ರಹೇಮಾಣ್ ಬಿಹಾರ, ಮೌಲಾನಾ ಫಜಲ್ ದಜನಿ ಪಂಚಿಮ ಬಂಗಾಳ, ಮೌಲಾನಾ ಅಸ್ ಗುಲಜಾರ್ ಖಾಸ್ಮಿ ಉತ್ತರ ಪ್ರದೇಶ, ಬಿನೆಸವುದ ತಮಿಳ ನಾಡ, ರಬ್ದುಲ ರಶೀದ್ ಅಸ್ಲಂ ಪರವೇಜ್ ನವದೇಹಲಿ, ಮೌಲಾನಾ ರಿಜ್ವಾನ್ ಗುಜರಾತ್, ನಿಜಾಮೊದ್ದೀನ್ ಮಹಾರಾಷ್ಟ್ರ ಸೇರಿದಂತೆ ಪ್ರಮುಖ ಮುಖಂಡರು ಹಾಗೂ ವಿವಿಧ ರಾಜ್ಯದ ಸದಸ್ಯರು ಪದಾಧಿಕಾರಿಗಳು ಭಾಗವಹಿಸಿದರು.