ಮಿಲ್ಕ್ ಹಲ್ವ

ಬೇಕಾಗುವ ಸಾಮಗ್ರಿಗಳು :

  • ಹಾಲು – ೧/೨ ಲೀಟರ್
  • ಸಕ್ಕರೆ – ೧೦೦ ಗ್ರಾಂ
  • ಏಲಕ್ಕಿ ಪುಡಿ – ೧/೨ ಚಮಚ
  • ವಿನಿಗರ್ – ೫೦ ಮಿ.ಲೀ.
  • ತುಪ್ಪ – ೧೦೦ ಗ್ರಾಂ
  • ಸಪ್ಪೆ ಖೋವಾ – ೧೦೦ ಗ್ರಾಂ
  • ಪಿಸ್ತಾ – ೫೦ ಗ್ರಾಂ
  • ಬಾದಾಮಿ – ೫೦ ಗ್ರಾಂ

ಮಾಡುವ ವಿಧಾನ :
ಪಾತ್ರೆಯಲ್ಲಿ ಹಾಲು ಹಾಕಿ ಬಿಸಿಮಾಡಿ. ಕುದಿಬಂದಾಗ ವಿನಿಗರ್ ಚಿಮುಕಿಸಿ. ಹಾಲನ್ನು ಒಡೆಸಿ, ನಂತರ ನಿಧಾನವಾಗಿ ತಳಹಿಡಿಯದಂತೆ ಕಲಕುತ್ತಿರಿ. ಮಿಶ್ರಣ ಗಟ್ಟಿಯಾದ ಬಳಿಕ ಸಕ್ಕರೆ, ಏಲಕ್ಕಿ ಪುಡಿ, ತುಪ್ಪ ಹಾಕಿ ಚೆನ್ನಾಗಿ ಕಲಸಿ. ಹೆಚ್ಚಿದ ಬಾದಾಮಿ, ಪಿಸ್ತಾ ಹಾಕಿ ಮಿಕ್ಸ್ ಮಾಡಿದರೆ ಸವಿಯಾದ ಮಿಲ್ಕ್ ಹಲ್ವ ಸಿದ್ಧ.