ಮಿಲ್ಕ್ ಖಾರ ಪೊಂಗಲ್

ಬೇಕಾಗು ಸಾಮಗ್ರಿಗಳು

*ಅಕ್ಕಿ – ೧/೪ ಕೆ.ಜಿ
*ಹಾಲು – ೨೫೦ ಮಿ.ಲೀ
*ಹೆಸರು ಬೇಳೆ – ೧/೪ ಕೆ.ಜಿ
*ತುಪ್ಪ – ೧ ಚಮಚ
*ಸಾಸಿವೆ – ೧ಚಮಚ
*ಕಾಳು ಮೆಣಸು – ೧ ಚಮಚ
*ಜೀರಿಗೆ – ೧ ಚಮಚ
*ಶುಂಠಿ – ಸ್ವಲ್ಪ
*ಗೋಡಂಬಿ – ೧೦ ಪೀಸ್
*ತೆಂಗಿನಕಾಯಿ ತುರಿ – ೨ ಚಮಚ
*ಕರಿಬೇವು – ೧೦ ಎಲೆ
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ಉಪ್ಪು
*ಎಣ್ಣೆ

ಮಾಡುವ ವಿಧಾನ :

ಪ್ಯಾನ್‌ಗೆ ಹೆಸರು ಬೇಳೆ ಹಾಕಿ ಘಮ ಬರುವವರೆಗೆ ಹುರುದು ಕೊಳ್ಳಿ. ಕುಕ್ಕರ್‌ಗೆ ಅಗತ್ಯವಿರುವಷ್ಟು ನೀರು, ಹುರಿದುಕೊಂಡ ಹೆಸರುಬೇಳೆ, ತುಪ್ಪ ಹಾಕಿ ೩ ವಿಷಲ್ ಕೂಗಿಸಿ. ಬಾಣಲಿಗೆ ಎಣ್ಣೆ ಹಾಕಿ,ಕಾದ ಮೇಲೆ ಸಾಸಿವೆ, ಮೆಣಸು, ಜೀರಿಗೆ, ಕರಿಬೇವು, ಕತ್ತರಿಸಿದ ಶುಂಠಿ, ಗೋಡಂಬಿ, ತೆಂಗಿನಕಾಯಿ ತುರಿಯನ್ನು ಒಂದೊಂದಾಗಿ ಹಾಕುತ್ತಾ ಹುರಿಯಿರಿ. ಇದಕ್ಕೆ ತುಪ್ಪ ಸೇರಿಸಿ ಚೆನ್ನಾಗಿ ಬೆರೆಸಿ. ಇದನ್ನು ಬೆಂದ ಹೆಸರು ಬೇಳೆಗೆ ಹಾಕಿ ಹಾಲು, ನೆನೆಸಿದ ಅಕ್ಕಿ, ಅಗತ್ಯಕ್ಕೆ ತಕ್ಕಷ್ಟು ನೀರು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಬೆರೆಸಿ, ಮತ್ತೆ ೨ ವಿಷಲ್ ಕೂಗಿಸಿ. ಈಗ ಮಿಲ್ಕ್ ಖಾರ ಪೊಂಗಲ್ ಸವಿಯಲು ರೆಡಿ.