(ಸಂಜೆವಾಣಿ ವಾರ್ತೆ)
ಅಥಣಿ :ಜು.1: ಪಟ್ಟಣದ ಹೊರವಲಯದಲ್ಲಿರುವ ಮಿಲೇನಿಯಮ್ ಸ್ಟಾರ್ಚ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರಖಾನೆ ಹಾಗೂ ಪ್ರೀಯಾ ಎಕ್ಸ್ ಪೆÇೀರ್ಟ್ ಕಾರಖಾನೆಯ ಆಡಳಿತ ಮಂಡಳಿ ವತಿಯಿಂದ ರಾಜ್ಯದಲ್ಲಿಯೇ ಅತಿ ಹೆಚ್ಚು ಮತಗಳ ಅಂತರದಿಂದ ಶಾಸಕರಾಗಿ ಗೆಲುವು ಸಾಧಿಸಿದ ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರಿಗೆ ಮಿಲೇನಿಯಮ್ ಸ್ಟಾರ್ಚ ಹಾಗೂ ಪ್ರೀಯಾ ಎಕ್ಸ್ ಪೆÇೀರ್ಟ ಕಾರಖಾನೆಗಳ ಅಧ್ಯಕ್ಷ ಸುರೇಶ ಪಾಟೀಲ, ಹಾಗೂ ಎಂಡಿ ನಿಖೀಲ ಪಾಟೀಲ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು .
ಸನ್ಮಾನ ಸ್ವೀಕರಿಸಿ ಶಾಶಕ ಲಕ್ಷ್ಮಣ ಸವದಿ ಅವರು ಮಾತನಾಡಿ ಮಿಲೇನಿಯಂ ಸ್ಟಾರ್ಚ ಹಾಗೂ ಪ್ರೀಯಾ ಎಕ್ಷ್ ಪೆÇೀರ್ಟಸ್ ಕಾರಖಾನೆಗಳಿಂದ ನಮ್ಮ ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶಗಳು ಲಭಿಸಿದ್ದು, ಯುವಕರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಪ್ರೀಯಾ ಎಕ್ಷಪೆÇೀರ್ಟನಿಂದ ಬೇಬಿ ಕಾರ್ನ, ಸವತೆ ಮಿಡಿಗಾಯಿಂದ ಉಪ್ಪಿನ ಕಾಯಿ ಸಿದ್ದಪಡಿಸಿ ಅಂತರಾಷ್ಟ್ರೀಯ ಮಟ್ಟದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವದು ನಮ್ಮ ಅಥಣಿ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ. ಸದ್ಯ ಬೇಬಿ ಕಾರ್ನ ಬೆಳೆಯನ್ನು ಈ ಭಾಗದಲ್ಲಿ ರೈತರು ಹೆಚ್ಚಾಗಿ ಬೆಳೆದು ಇಲ್ಲಿನ ಕಾರಖಾನೆಗೆ ನೀಡಿದರೆ ಪ್ರತಿ ಎಕರೆ ಪ್ರದೇಶದಲ್ಲಿ 50 ಸಾವಿರ ರೂ, ಗಳ ಲಾಭವನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ಈ ವೇಳೆ ಕಾರಖಾನೆ ಎಂಡಿ ನಿಖಿಲ ಪಾಟೀಲ ಮಾತನಾಡಿ, ಈ ಭಾಗದಲ್ಲಿರುವ ರೈತರಿಗೆ ಬೇಬಿ ಕಾರ್ನ ಬೆಳೆಯಲು ಉತ್ತೇಜನ ನೀಡುವ ಉದ್ದೇಶದಿಂದ ನಾವೇ ರೈತರಿಗೆ ಉಚಿತವಾಗಿ ಬೀಜಗಳನ್ನು ಕೊಡಲು ನಿರ್ಧರಿಸಿದ್ದು ಸ್ಥಳೀಯವಾಗಿ ಬೆಳೆಯುವದರಿಂದ ರೈತರಿಗೆ ಸಾಗಾಣಿಕೆ ವೆಚ್ಚ ಕಡಿಮೆಯಗಿ ಹೆಚ್ಚು ಲಾಭವನ್ನು ಪಡೆಯಬಹುದಾಗಿದೆ. ಅಲ್ಲದೆ ಈ ಕಾರಖಾನೆ ಬೆಳೆದರೆ ಇಲ್ಲಿನ ಜನರಿಗೆ / ಯುವಕರಿಗೆ ಅತಿ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಾಗುವದು ಖಚಿತ ಎಂದು ಹೇಳಿದರು
ಕಾರಖಾನೆ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಆಡಳಿತ ಮಂಡಳಿ ಹಾಗೂ ಎರಡೂ ಕಾರಖಾನೆಗಳ ಕಾರ್ಮಿಕರು ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ಸಂರ್ದದಲ್ಲಿ ಮಿಲೇನಿಯಂ ಸ್ಟಾರ್ಚ ಹಾಗೂ ಪ್ರೀಯಾ ಎಕ್ಸ್ ಪೆÇೀರ್ಟಸ್ ಕಾರಖಾನೆಗಳ ಅಧ್ಯಕ್ಷ ಸುರೇಶ ಪಾಟೀಲ, ಎಂಡಿ, ನಿಖೀಲ ಪಾಟೀಲ, ಜಿಮ್ ಮಹಾಂತೇಶ ಕುರಬೇಟ್, ಸಂತೋಷ ಹತ್ತಿ, ಪ್ರವೀಣ ಅಂದಾನಿ, ಅಮನ್ ಗುಡಜ್, ನಿತೀನ ಠಕ್ಕಣ್ಣವರ ಸೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.