ಮಿಲೆನಿಮಯಂ ಉದ್ಯಾನವನ ಅವ್ಯವಸ್ಥೆ ರಾಮನಗೌಡ ಆಕ್ರೋಶ

ರಾಯಚೂರು,ಮಾ.೦೨- ನಗರದ ವಾರ್ಡ ನಂಬರ್ ೫ ರಲ್ಲಿರುವ ಮಿಲೆನಿಯಂ ಉದ್ಯಾನವನ ನಿರ್ವಹಣೆಯಿಲ್ಲದೆ ಹದಗೆಟ್ಟಿದೆ ಎಂದು ಜೆಡಿಎಸ್ ಪಕ್ಷದ ನಗರ ಕ್ಷೇತ್ರದ ಆಕಾಂಕ್ಷಿ ರಾಮನಗೌಡ ಏಗನೂರ ಆಕ್ರೋಶ ವ್ಯಕ್ತಪಡಿಸಿದರು.
ಉದ್ಯಾನವನದಲ್ಲಿ ವಿಷ ಜಂತುಗಳು ತಿರುಗಾಡುತ್ತುವೆ. ಹಂದಿಗಳ ವಾಸಸ್ಥಾನವಾಗಿದೆ. ವಿಷ ಜಂತುಗಳು ಉದ್ಯಾನವನದಲ್ಲಿ ಬಂದವರಿಗೆ ಕಡಿದ ಉದಾಹರಣೆಗಳೂ ಇವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಉದ್ಯಾನವನದಲ್ಲಿ ಉಲ್ಲು ಹಾಸು ಹೋಗಿದೆ, ಕೊಳಕು ನೀರು ತುಂಬಿದೆ, ಗಬ್ಬು ನಾರುತ್ತಿದೆ. ರಾತ್ರಿ ವೇಳೆ ಕುಡುಕರ ಹಾವಳಿಯೂ ಇದೆ ಎಂದು ದೂರಿದ್ದಾರೆ.
ಇದು ಹಿರಿಯ ರಾಜಕೀಯ ಮುಖಂಡರಾಗಿದ್ದ ಶೇಖ ರಿಜ್ವಾನ್ ಅವರ ಕನಸಿನ ಕುಸಾಗಿತ್ತು. ಅದು ನುಚ್ಚು ನೂರಾಗಿದೆ ಎಂದು ದೂರಿದ್ದಾರೆ. ಇಲ್ಲಿನ ಜನ ಸರ್ಕಾರದ ಯಾವ ಸೌಲಭ್ಯವೂ ಉಚಿತವಾಗಿ ಪಡೆಯುವುದಿಲ್ಲ ಎಲ್ಲದಕ್ಕೂ ತೆರಿಗಡ ಭರಿಸುತ್ತಾರೆ. ಅವರಿಗೆ ಮೂಲ ಸೌಕರ್ಯ, ಉತ್ತಮ ಉದ್ಯಾನವನ, ಸೇವೆ ಕೊಡುವಲ್ಲಿ ನಗರ ಕ್ಷೇತ್ರದ ಶಾಸಕ ಡಾ.ಶಿವರಾಜ ಪಾಟೀಲ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ತಕ್ಷಣ ಸುಸಜ್ಜಿಯ ಉದ್ಯಾನವನ ಇಲ್ಲಿ ಮರು ಸ್ಥಾಪಿಸದಿದ್ದರೆ, ನಗರಸಭೆ ಮತ್ತು ಶಾಸಕರ ವಿರುದ್ದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಾತೆತ್ತಿದ್ದರೆ, ನಗರ ಕ್ಷೇತ್ರದ ಅಭಿವೃದ್ದಿಗೆ ೬ ಸಾವಿರ ಕೋಟಿ ಹಣ ತಂದಿರುವುದಾಗಿ ಹೆಳುವ ಶಾಸಕರು ಆ ಹಣ ಎಲ್ಲಿ ಹೋಯಿತು ಎಂಬುದು ಅವರೇ ತಿಳಿಸಬೇಕು. ನಿಜಲಿಂಗಪ್ಪ ಕಾಲೋನಿ, ಬೆಲ್ಲಂ ಕಾಲೋನಿ ಜನರಿಗೆ ಸೌಕರ್ಯಗಳ ಮರಿಚೀಕೆಯಾಗಿದೆ. ಉದ್ಯಾನವನಕ್ಕೆ ಹೋಗಲು ದಾರಿಯೇ ಇಲ್ಲ. ಒಳ ಕೊಳಕು ನೀರು ಸರಾಗವಾಗಿ ಹೋಗಲು ಒಳ ಚರಂಡಿ ವ್ಯವಸ್ಥೆ ಇಲ್ಲ. ಅವ್ಯವಸ್ಥೆಯ ಆಗರವಾಗಿರುವ ವಾರ್ಡ್ ಜನ ಬಳಕೆಯ ಉದ್ಯಾನವನದ ಅಭಿವೃದ್ದಿಗೆ ಒತ್ತು ಕೊಡುವಂತೆ ಆಗ್ರಹಿಸಿದ್ದಾರೆ.

ಬಾಕ್ಸ್
ಅಗತ್ಯ ವಸ್ತುಗಳ ಹೆಚ್ಚಳಕ್ಕೆ ತತ್ತರಿಸಿ ಹೋಗಿರುವ ಜನರಿಗೆ ಕೇಂದ್ರ ಸರ್ಕಾರ ಮತ್ತೊಂದು ಅಗತ್ಯ ಬಳಕೆಯ ಅಡುಗೆ ಅನಿಲದ ಬೆಲೆ ಅವೈಜ್ಞಾನಿಕವಾಗಿ ಏರಿಸಿ, ಬರೆ ಎಳೆದಿದೆ ಎಂದು ಜೆಡಿಎಸ್ ನಗರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ರಾಮನಗೌಡ ಏಗನೂರ ಕೇಂದ್ರದ ಜನ ವಿರೋಧಿ ನೀತಿಗೆ ಅಕ್ರೋಶ ವ್ಯಕ್ತಪಡಿಸಿದರು.
ಸಿರಿವಂತರ ಹಿತಕಾಯುವ ಕೇಂದ್ರದ ಮೋದಿ ಸರ್ಕಾರ ಬಡವರನ್ನು ಮುಗಿಸಲು ಹೊರಟಂತೆ ಕಾಣುತ್ತಿದೆ. ಅಗತ್ಯ ದಿನ ಬಳಕೆಯ ಗೃಹ ಸಿಲೆಂಡರ್ ದರ ಮತ್ತೆ ೫೦ ರೂ ಹೆಚ್ಚಿಸಿದರೆ, ವಾಣಿಜ್ಯ ಉದ್ದೇಶದ ಅಡುಗೆ ಅನೀಲ ದರ ೩೫೦ ರೂ ಹೆಚ್ಚಿಸಿದೆ. ಬಡವರ ವಿರೋಧಿತನ ತೋರಿಸಿದೆ. ಈಗ ಹೋಟೆಲ್ ಸೇರಿ ಅಗತ್ಯ ಮಾರಾಟದ ವಸ್ತುಗಳ ದರ ದುಬಾರಿಯಾಗಿ ಜನಸಾಮಾನ್ಯರಿಗೆ ಹೊರೆಯಾಗುತ್ತದೆ. ಆದಾನಿ, ಅಂಬಾನಿ ಖಜಾನೆ ತುಂಬಿಸಿ, ಬಡವರ ಜೇಬಿಗೆ ಬಿಜೆಪಿ ಸರ್ಕಾರ ಕತ್ಥರಿ ಹಾಕುತ್ತಿದೆ. ಇದರಿಂದ ಬಡವರ ಸಿರಿವಂತರ ನಡುವಿನ ಅಂತರ ಹೆಚ್ಚಾಗುತ್ತಿದೆ ಎಂದು ಟೀಕಿಸಿದರು.