ಮಿರ್ಜಾ ಗಾಲಿಬ್ ೨೨೩ನೇ ಜನ್ಮದಿನಾಚರಣೆ

ಮಿರ್ಜಾ ಗಾಲಿಬ್ ಶ್ರೇಷ್ಠ ಕವಿ- ನ್ಯಾ.ಮಲ್ಲಿಕಾರ್ಜುನ ಗೌಡ
ರಾಯಚೂರು,ಡಿ.೨೭- ಒಬ್ಬ ವ್ಯಕ್ತಿಯನ್ನು ಆತನ ಸಾವಿನ ನಂತರವು ನೆನೆಸಿಕೊಳ್ಳುದು ಅವರು ಮಾಡಿದ ಸಾಧನೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಯಿಂದ. ಅದೇರೀತಿ ಮಿರ್ಜಾ ಅಸಾದುಲ್ಲಾ ಖಾನ್ ಗಾಲಿಬ್ ಅವರು ಒಬ್ಬ ಶ್ರೇಷ್ಠ ಕವಿ ಅವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಹೇಳಿದರು.
ಅವರಿಂದು ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರವಿರುವ ಗಾಲಿಬ್ ಮೆಮೊರಿಯಲ್ ಟ್ರಸ್ಟ್ ನ ನವೀಕರಿಸಿದ ಗ್ರಂಥಾಲಯ ಉದ್ಘಾಟನೆ ಮತ್ತು ಮಿರ್ಜಾ ಅಸಾದುಲ್ಲಾ ಖಾನ್ ಗಾಲಿಬ್ ಅವರ ೨೨೩ನೇ ಜನ್ಮಾದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಿರ್ಜಾ ಅಸಾದುಲ್ಲಾ ಖಾನ್ ಗಾಲಿಬ್ ಅವರು ಒಬ್ಬ ಶ್ರೇಷ್ಠ ಕವಿಯಾಗಿದ್ದಾರೆ. ಪ್ರತಿಯೊಬ್ಬರೂ ಜೀವನದಲ್ಲಿ ಒಂದು ಗುರಿ ಅಳವಡಿಸಿಕೊಳ್ಳಬೇಕು. ಗುರಿ ಸಾಧನೆಗೆ ಕಠಿಣ ಶ್ರಮಪಡುವ ಮೂಲಕ ಗುರಿ ಮುಟ್ಟಬೇಕೆಂದರು.
ಮಿರ್ಜಾ ಅಸಾದುಲ್ಲಾ ಖಾನ್ ಗಾಲಿಬ್ ಅವರು ಒಬ್ಬ ಶ್ರೇಷ್ಠ ಕವಿಯಾಗಿದ್ದು, ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾಗಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಂಡು ಗುರಿಸಾಧನೆಗೆ ಕಠಿಣ ಶ್ರಮ ವಹಿಸುವ ಮೂಲಕ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಸಂಚಾಲಕ ಡಾ.ರಜಾಕ್ ಉಸ್ತಾದ್ ಹೇಳಿದರು.
ಸುಮಾರು ೫೦ ವರ್ಷಗಳ ಹಿಂದೆ ಶಿಕ್ಷಣದ ಕುರಿತು ಸಮಾಜದಲ್ಲಿ ಅರಿವು ಮೂಡಿಸಲು ಗಾಲಿಬ್ ಮೆಮೊರಿಯಲ್ ಟ್ರಸ್ಟ್ ಸ್ಥಾಪಿಸಲಾಗಿತ್ತು. ಸಮಾಜದ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಸಲು ಅವರಿಗೆ ಉಚಿತ ತರಬೇತಿ ನೀಡಲು ಉದ್ದೇಶಿಸಿದ್ದು, ಇದಕ್ಕಾಗಿ ಈಗಾಗಲೇ ಸಾವಿರಾರು ಪುಸ್ತಕಗಳನ್ನು ಖರೀದಿಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎ.ಜೆ.ಅಕಾಡೆಮಿ ನಿರ್ದೇಶಕ ಮೊಹಮ್ಮದ್ ಅಬ್ದುಲ್ಲಾ ಜಾವಿದ್, ಗಾಲಿಬ್ ಮೆಮೊರಿಯಲ್ ಟ್ರಸ್ಟ್ ನ ಅಧ್ಯಕ್ಷ ಸೈಯದ್ ತಾರಿಖ್ ಹಸನ್ ರಝ್ವಿ, ನೂರ್ ಮೊಹಮ್ಮದ್, ಖೈಸರ್ ರಜಾಖ್ ಮೊಹಿಯುದ್ದೀನ್, ಅಬ್ದುಲ್ ರಹೀಮ್ ಖಾನ್, ಮಲ್ಲಿಕಾರ್ಜುನ, ಅನ್ವರ್ ವಹೀದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.