ಮಿರ್ಚಿ ಕೋಫ್ತಾ

ಪದಾರ್ಥಗಳು :-
ಎಣ್ಣೆ – ೪ ಚಮಚ
ಜಜ್ಜಿದ ಕಾಳುಮೆಣಸು – ೧/೨ಚಮಚ
ಜಜ್ಜಿದ ಕೊತ್ತಂಬರಿಬೀಜ – ೧/೨ಚಮಚ
ಹೆಚ್ಚಿದ ಈರುಳ್ಳಿ – ೧
ಹೆಚ್ಚಿದ ಹಸಿಮೆಣಸಿನಕಾಯಿ -೨
ಪುಡಿ ಮಾಡಿದ ಆಲೂಗಡ್ಡೆ – ೧ ಲೋಟ
ಅರಿಶಿನ – ೧/೨ ಚಮಚ
ಅಚ್ಚಖಾರದಪುಡಿ -೧/೨ ಚಮಚ
ಉಪ್ಪು – ರುಚಿಗೆ
ಕೊತ್ತಂಬರಿಸೊಪ್ಪು – ಸ್ವಲ್ಪ

ಹಿಟ್ಟಿಗೆ :- ಕಡ್ಲೇಹಿಟ್ಟು – ೧ ಲೋಟ
ಓಂ ಕಾಳು – ೧ ಚಮಚ
ಸೋಡಾ – ಚಿಟಿಕೆ
ಉಪ್ಪು -ರುಚಿಗೆ
ಮಿರ್ಚಿ ಮೆಣಸಿನಕಾಯಿ -೧/೨ ಕೆ.ಜಿ
ಕರಿಯಲು ಎಣ್ಣೆ

ವಿಧಾನ :- ೧.ಪಲ್ಯಕ್ಕೆ ಪದಾರ್ಥಗಳನ್ನು ಬಳಸಿ ಪಲ್ಯ ತಯಾರಿಸಿಡಬೇಕು.
೨. ಹಿಟ್ಟಿಗೆ ಕೊಟ್ಟ ಪದಾರ್ಥಗಳನ್ನು ಬಳಸಿ, ತಕ್ಕಷ್ಟು ನೀರು ಹಾಕಿ ಕದಡಿ ಹಿಟ್ಟು ಕಲೆಸಬೇಕು.
೩. ಹಸಿರು ದಪ್ಪನೆಯ ಉದ್ದನೆಯ ಮಿರ್ಚಿಯ ಮಧ್ಯ ಭಾಗ ಸೀಳಿ,ಬೀಜ ತೆಗೆದು ತಯಾರಾದ ಪಲ್ಯವನ್ನು ಮಧ್ಯಭಾಗ ತುಂಬಿ ಕಲೆಸಿದ ಹಿಟ್ಟಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಹಾಕಿ ಕರಿಯಬೇಕು.