ಮಿರಿಯಾಣ ಶೇ.70ರಷ್ಟು ಮತದಾನ

ಚಿಂಚೋಳಿ,ಏ.8- ತಾಲೂಕಿನ ತೆಲಂಗಾಣ ಗಡಿಭಾಗವಾದ ಮಿರಿಯಾಣ ಗ್ರಾಮದ ಮತಗಟ್ಟೆಯಲ್ಲಿ ಗ್ರಾಮದ ಅಬ್ದುಲ್ ರೌಫ್, ಅವರು ತಮ್ಮ ಮತಹಕ್ಕನ್ನು ಚಲಾಯಿಸಿದರು.
ಮಿರಿಯಾಣ ಗ್ರಾಮದಲ್ಲಿ ಬೆಳಗ್ಗೆಯಿಂದ ಗ್ರಾಮದ ಮತದಾರರು ಪಾಳೆಯಲ್ಲಿ ನಿಂತು ಉತ್ಸಹದಿಂದ ತಮ್ಮ ಮತವನ್ನು ಚಲಾಯಿಸಿದ್ದು ಈ ಗ್ರಾಮದಲ್ಲಿ ಸರಿಸುಮಾರು ಅಂದಾಜು 70 ಪಸೆರ್ಂಟೇಜ್ ರಷ್ಟು ಮತದಾನ ನಡೆದಿದೆ.
ಈ ಭಾಗದಲ್ಲಿ ಎಲ್ಲಾ ಗಣಿ ಕಾರ್ಮಿಕರು ಮತ್ತು ವಿವಿಧ ಸಿಮೆಂಟ್ ಕಂಪನಿಗಳ ಕಾರ್ಮಿಕರಿಗೂ ಚುನಾವಣೆ ಅಂಗವಾಗಿ ರಜೆ ನೀಡಲಾಗಿದ್ದು ಎಲ್ಲಾ ಕಾರ್ಮಿಕರು ಕೂಡ ಮತದಾನ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.