ಮಿರಿಯಾಣ ವಿಶ್ವ ಯೋಗ ದಿನಾಚರಣೆ

ಚಿಂಚೋಳಿ:ಜೂ.22: ತಾಲೂಕಿನ ಗಡಿಭಾಗದ ಮಿರಿಯಾಣನ ಪೂಜ್ಯ ಶ್ರೀ ಬಸವ ಮಾಚಿದೇವ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ನಿಡಗುಂದಾ ಸಂಚಾಲಿತ ಶ್ರೀ ಪಾಪನಾಶ ವಿದ್ಯಾಮಂದಿರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಶಾಲೆ ಹಾಗೂ ವಿದ್ಯಾಭಾರತಿ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕಾಶೀನಾಥ ಮಡಿವಾಳ ಚಾಲನೆ ನೀಡಿ ಯೋಗದ ಮಹತ್ವ ಹಾಗೂ ಇಂದಿನ ಒತ್ತಡ ಬದಿಕಿನಲ್ಲಿ ಪ್ರತಿದಿನ ನಮಗಾಗಿ ಒಂದು ತಾಸು ಸಮಯ ಮೀಸಲಿಟ್ಟು ಅರೋಗ್ಯ ಕಾಪಾಡುವಲ್ಲಿ ಯೋಗ ಪ್ರಾಣಾಯಾಮ ಅಳವಡಿಸಿ ಸಹಕಾರಿ ಎಂದು ಪ್ರಾಸ್ತವಿಕವಾಗಿ ನುಡಿದರು ನಂತರ ಸಾಮೂಹಿಕ ಸೂರ್ಯ ನಮಸ್ಕಾರ, ಯೋಗಾಸನ ವಿವಿಧ ಆಯಾಮಗಳು ಮಾಡಲಾಯಿತು.
ಅಧ್ಯಕ್ಷತೆಯನ್ನು ಪ್ರಧಾನ ಅಧ್ಯಾಪಕರಾದ ಶ್ರವಂತಿ ನರೇಂದ್ರಗೌಡ, ಹಿರಿಯ ಶಿಕ್ಷಕ ಶಶಿಕುಮಾರ ಪೂಜಾರಿ ಇದ್ದರು. ವಿದ್ಯಾರ್ಥಿನಿಯರಾದ ಪ್ರಭಾಷಿಣಿ, ಸಿರೀಶ ಪ್ರಾರ್ಥಿಸಿದರು.ಸಂಪೂರ್ಣ ನಿರೂಪಿಸಿ, ಸಪ್ನಾ ಮಠಪತಿ ಸ್ವಾಗತಿಸಿ ಅಂಬಿಕಾ ವಂದಿಸಿದರು ಶಾಲೆ ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕಿಯರಾದ ಶುಷ್ಮಾ, ಸವಿತಾ, ಸಭಾ, ಇದ್ದರು.