ಮಿರಿಯಾಣ ಚೆಕ್ ಪೋಸ್ಟನಲ್ಲಿ 3.33 ಲಕ್ಷ ರೂ. ಜಪ್ತಿ

ಚಿಂಚೋಳಿ,ಏ.21-ತಾಲೂಕಿನ ಗಡಿಭಾಗ ಮಿರಿಯಾಣ ಚೆಕ್ ಪೋಸ್ಟನಲ್ಲಿ ತಪಾಸಣೆ ವೇಳೆ ಯಾವುದೇ ದಾಖಲಾತಿಗಳಿಲ್ಲದೆ ಸಾಗಿಸುತ್ತಿದ್ದ 3.33 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಚಿಂಚೋಳಿ ಕಡೆಯಿಂದ ತಾಂಡುರ್ ಕಡೆಗೆ ಕಾರಿನಲ್ಲಿ ಹಣ ಸಾಗಿಸಲಾಗುತ್ತಿತ್ತು. ಮಿರಿಯಾಣ ಚೆಕ್ ಪೋಸ್ಟ್‍ನಲ್ಲಿ ಮಿರಿಯಾಣ ಠಾಣಾ ಪಿಎಸ್‍ಐ ಶಿವರಾಜ್ ಪಾಟೀಲ, ಅಧಿಕಾರಿಗಳಾದ ಹಾತವುರ್ ರಹೇಮನ್, ತುಕ್ಕಪ್ಪ ಕಣ್ಣಿ, ಆನಂದ್ ಫೆÇೀಜಿ, ಪುಂಡಲೀಕ್, ಮಲ್ಲಿಕಾರ್ಜುನ್ ಹಾಗೂ ಗೃಹದಳದ ಸಿಬ್ಬಂದಿಗಳು ತಪಾಸಣೆ ನಡೆಸಿ ಹಣ ವಶಪಡಿಸಿಕೊಂಡಿದ್ದಾರೆ.