
ಚಿಂಚೋಳಿ,ಸೆ.12-ತಾಲೂಕಿನ ಮಿರಿಯಾಣ ಗಡಿಭಾಗದಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕವಾಗಿ ವೈವಿಧ್ಯ ಚಟುವಟಿಕೆಗಳನ್ನು ಆಯೋಜಿಸಲಾಗಿದೆ ಎಂದು ಮಾತೃ ಭಾರತಿ ಸಮಿತಿ ಅಧ್ಯಕ್ಷರಾದ ನಾಗವೇಣಿ ನರಸಿಂಹಲು ಕಲ್ಲೂರ ತಿಳಿಸಿದರು.
ದೇಶಿಯ ಸಂಸ್ಕøತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಡಗುಂದಾದ ಬಸವ ಮಾಚಿದೇವ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ ಸಂಚಾಲಿತ ಪಾಪನಾಶ ವಿದ್ಯಾಮಂದಿರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಡಿ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಮಾತೃ ಭಾರತಿ ಸಮಿತಿ ಸಹಯೋಗದಲ್ಲಿ ಹಲವಾರು ಸಾಮಾಜಿಕ ಉಪಯೋಗಿ ವಾರ್ಷಿಕ ಯೋಜನೆಗಳು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶ್ರಾವಣ ಮಾಸದ ಕೊನೆ ಸೋಮವಾರ ನಿಮಿತ್ಯ ಐತಿಹಾಸಿಕ ಹೂವಿನ ತೋಟ ವೀರಭದ್ರೇಶ್ವರ ದೇವಾಲಯದಲ್ಲಿ ಭಜನೆ ಕಾರ್ಯಕ್ರಮ ಆಯೋಜಿಸಲಾಗಿದೆ ತಿಳಿಸಿದರು.
ಸಂಚಾಲಕಿ ಸಪ್ನಾ ಮಠಪತಿ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಶಾಲೆ ಪ್ರಧಾನ ಅಧ್ಯಾಪಕಿ ಶ್ರಾವಂತಿ ನರೇಂದ್ರಗೌಡ ಅಧ್ಯಕ್ಷತೆ ವಹಿಸಿದ್ದರು. ಮಾತೃ ಭಾರತಿ ಸಮಿತಿ ಸದಸ್ಯರಾದ ಶಶಿಕಲಾ ತಿಪ್ಪಣ್ಣ, ಸಂಗೀತ ಮನೋಹರ, ಮಹಾನಂದ ಸಿದ್ದಪ್ಪ, ಅನಿತಾ ರಮೇಶ, ಜಗಮ್ಮ ಹಣಮಂತ, ಗೌರಮ್ಮ ಬಸವರಾಜ, ವಿಜಯಲಕ್ಷ್ಮಿ ರಾಜು, ಸುನಿತಾ ಅಶೋಕ, ಅಂಕಿತಾ ಭೀಮಾಶಾ, ನಾಗಮ್ಮ ರಮೇಶ, ಸುಜಾತಾ ಅಂಜಯ್ಯ, ಪಾರ್ವತಿ ರವಿ, ರೇಣುಕಾ ಶಿವಶಂಕ್ರಯ್ಯ ಸೇರಿದಂತೆ ಶಿಕ್ಷಕಿಯಾದ ಅಂಬಿಕಾ ಕುಪೆಂದ್ರ ಇದ್ದರು.