ಮಿರಿಯಾಣದಲ್ಲಿ ಮೋದಿ ಜನ್ಮದಿನಾಚರಣೆ

ಚಿಂಚೋಳಿ ಸೆ 18: ತಾಲೂಕಿನ ಮಿರಿಯಾಣ ಗ್ರಾಮದಲ್ಲಿ
ಸ್ವತಂತ್ರ ಭಾರತದ ಸರ್ವಶ್ರೇಷ್ಠ ಪ್ರಧಾನಮಂತ್ರಿ, ವಿಶ್ವನಾಯಕ ನರೇಂದ್ರ ದಾಮೋದರ ದಾಸ್ ಮೋದಿ ಅವರ 72 ನೇ ಜನ್ಮ ದಿನಾಚರಣೆ ಅಂಗವಾಗಿ ಮಿರಿಯಾಣ ಗ್ರಾಮದ ಬಿಜೆಪಿಯ ಹಿರಿಯ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ಜಗಜೀವನ್ ರೆಡ್ಡಿ ಪಾಟೀಲ್ ಅವರ ನೇತೃತ್ವದಲ್ಲಿ ಕೇಕ್ ಕತ್ತರಿಸುವ ಮೂಲಕ ನರೇಂದ್ರ ಮೋದಿ ಅವರ ಜನ್ಮದಿನಾಚರಣೆ ಆಚರಿಸಲಾಯಿತು. ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಿರಿಯಾಣ ಗ್ರಾಮ ಪಂಚಾಯತ ಸದಸ್ಯರಾದ ರವಿಶಂಕರ್. ಪ್ರಭಾಕರ್ ಗೌಡ್, ಮಿರಿಯಾಣ ಬಿಜೆಪಿ ಯುವ ಮುಖಂಡರಾದ ಸುಧಾಕರ್ ಗೌಡ ಬೈರಂಪಳ್ಳಿ. ಅನಿಲ್ ಪೂಜಾರಿ. ಅನಿಲ್ ರಾಜಸಿಂಗ್. ರಘುವೀರ್ ಗೌಡ. ನರೇಶ್ ಗೌಡ. ಸಾಯಿ. ಶಿವ ಗೌಡ್. ಮತ್ತು ಅನೇಕ ಬಿಜೆಪಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಇದ್ದರು