ಮಿರಗಿ ಗ್ರಾಮದಲ್ಲಿ ಮನೆಯಲ್ಲಿ ನೀರು ಹೋಗಿದ್ದರು ಪರಿಹಾರ ಬಂದಿಲ್ಲ

ಇಂಡಿ :ನ.6: ಭೀಮಾನದಿ ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಉಟ್ಟಬಟ್ಟೆಯಲ್ಲಿ ಮನೆ ತೊರೆದು ಎತ್ತರದ ಪ್ರದೇಶದಲ್ಲಿ ಬಂದು ನೆಲೆಸಿ ಬದುಕಿಗಾಗಿ ಹೋರಾಟ ಮಾಡಿದರೆ,ಇಂದು ಸರ್ಕಾರದ ಪರಿಹಾರಕ್ಕಾಗಿ ಅ„ಕಾರಿಗಳ ಮುಂದೆ ಅಂಗಾಲುಚವಂತ ಸ್ಥಿತಿ ನಿರ್ಮಾಣವಾಗಿದೆ.

ಹೌದು ಇಂಡಿ ತಾಲೂಕಿನ ಮಿರಗಿ,ರೋಡಗಿ,ಬುಯ್ಯಾರ ಸೇರಿದಂತೆ ಇತರೆ ಗ್ರಾಮದಲ್ಲಿ ಭೀಮಾನದಿ ಪ್ರವಾಹದಿಂದ ಮನೆ,ಬೆಳೆ ಕಳೆದುಕೊಂಡು ಬೀದಿಗೆ ಬಿದ್ದಿರುವ ಕುಟುಂಬಗಳು ಇಂದು ಸರ್ಕಾರ ತುರ್ತಾಗಿ ನೀಡುವ 10 ಸಾವಿರಕ್ಕೆ ಗ್ರಾಮಕ್ಕೆ ಬರುವ ಅ„ಕಾರಿಗಳು ಮರಿಪುಡಾರಿಗಳ ಮುಂದೆ ಅಂಗಲಾಚಿ ಬೇಡಿಕೊಳ್ಳುವ ದೃಶ್ಯ ಹೆಂಥ ಕಲ್ಲು ಹೃದಯ ಇದ್ದವನಿಗೂ ಕನಿಕರ ಬರುತ್ತದೆ.

ಅ„ಕಾರಿಗಳು, ಗ್ರಾಮದ ವಾಲಿಕಾರ(ಕಂದಾಯ ಇಲಾಖೆಯ ಗ್ರಾಮ ಸಹಾಯಕ) ಮಾಡಿದ ತಪ್ಪಿಗೆ ಭೀಮಾನದಿಯಿಂದ ಮನೆಗೆ ನೀರು ನುಗ್ಗಿ ತೊಂದರೆ ಅನುಭವಿಸಿದ ನಿಜವಾದ ಫಲಾನುಭವಿಗಳಿಗೆ ಪರಿಹಾರ ಸಿಗದೆ, ಭೀಮಾನದಿ ಪ್ರವಾಹಕ್ಕೂ ಪರಿಹಾರದಲ್ಲಿರುವ ಫಲಾನುಭವಿಗಳ ಯಾದಿಗೂ ಸಂಬಂಧವೇ ಇಲ್ಲದಂತಾಗಿದೆ.ಸರ್ವೆ ಕಾರ್ಯ ಮಾಡಿದ ಅ„ಕಾರಿಗಳ ತಪ್ಪಿನಿಂದ ತೊಂದರೆಗೊಳಗಾದ ನಿಜವಾದ ಫಲಾನುಭವಿಗಳಿಗೆ ಪರಿಹಾರ ಸಿಗದೆ,ಗ್ರಾಮದಲ್ಲಿನ ಶಕ್ತಿವಂತರ ಪಾಲಾಗಿದೆ. ಪಟ್ಟಣದ ತಹಶೀಲ್ದಾರ ಕಚೇರಿ ಮುಂದೆ ಕಳೆದ ಎರಡು ದಿನಗಳಿಂದ ಮಿರಗಿ,ಬುಯ್ಯಾರ,ರೋಡಗಿ ಸೇರಿದಂತೆ ಇತರೆ ಗ್ರಾಮದ ತೊಂದರೆ ಒಳಗಾದ ಕುಟುಂಬಗಳು ಪ್ರತಿಭಟನೆ,ಧರಣಿ ನಡೆಸಿದ್ದರೂ ಇಲ್ಲಿಯವರೆಗೆ ಅವರಿಗೆ ನ್ಯಾಯ ಸಿಕ್ಕಿರುವುದಿಲ್ಲ.ಹೀಗಾಗಿ ಭೀಮಾಪ್ರವಾಹದಿಂದ ಮನೆ ಕಳೆದುಕೊಂಡ ನಿಜವಾದ ಫಲಾನುಭವಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಗ್ರಾಮದ ಕೆಲ ಮುಖಂಡರ ಕುಮ್ಮಕ್ಕಿನಿಂದ ಸರ್ವೆ ಮಾಡಿದ ಅ„ಕಾರಿಗಳು ಸ್ಥಳ ಪರಿಶೀಲನೆ ಮಾಡದೆ, ಶಾಲೆ,ದೇವಸ್ಥಾನದಲ್ಲಿ ಕುಳಿತು ಗ್ರಾಮದ ಮುಖಂಡರು ಹೇಳಿದ ಹೆಸರುಗಳನ್ನು ಬರೆದುಕೊಂಡು ಸರ್ಕಾರದ ಪರಿಹಾರ ದೊರಕಿಸಿಕೊಟ್ಟಿದ್ದಾರೆ ಎಂಬ ಆರೋಪ ಮಿರಗಿ,ರೋಡಗಿ,ಬುಯ್ಯಾರ ಗ್ರಾಮಸ್ಥದ್ದಾಗಿದೆ.ಈ ಕುರಿತು ತಹಶೀಲ್ದಾರ,ಎಸಿ ಅವರಿಗೂ ಮನವಿ ಸಲ್ಲಿಸಿದ್ದಾರೆ.

ಒಂದು ಕಡೆ ಪ್ರವಾಹದಿಂದ ಮನೆಯಲ್ಲಿನ ಧವಸ,ಧಾನ್ಯ,ಬಟ್ಟೆ,ಮನೆ ಉಪಯೋಗಿ ವಸ್ತುಗಳನ್ನು ಭೀಮಾನದಿ ಪವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ,ಹೊಸ ಬದುಕು ಕಟ್ಟಿಕೊಳ್ಳಬೇಕು.ಸರ್ಕಾರ ನಮ್ಮ ನೆರವಿಗೆ ಬರುತ್ತದೆ ಎಂದು ಕನಸು ಕಟ್ಟಿಕೊಂಡು ಕುಳಿತ್ತಿದ್ದ ಕುಟುಂಬಗಳಿಗೆ ಇಂದು ನಿರಾಶ ಉಂಟಾಗಿದೆ.ಅ„ಕಾರಿಗಳ ತಪ್ಪಿನಿಂದ ಇಂದು ನಿಜವಾದ ಫಲಾನುಭವಿಗಳು ಪರಿಹಾರದಿಂದ ವಂಚಿತಗೊಂಡಿದ್ದಾರೆ.ಜಿಲ್ಲಾ„ಕಾರಿಗಳು ಭೀಮಾನದಿ ಪ್ರವಾಹದಿಂದ ಹಾನಿಯಾದ ಮನೆಗಳ ಸರ್ವೆ ಮಾಡಿದ ಯಾದಿಯನ್ನು(ಪಟ್ಟಿಯನ್ನು) ತಗೆದುಕೊಂಡು ಖುದ್ದಾಗಿ ಮಿರಗಿ,ರೋಡಗಿ,ಬುಯ್ಯಾರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರೆ,ಸರ್ವೆ ಮಾಡಿದ ಅ„ಕಾರಿಗಳ ನಿಜ ಬಣ್ಣ ಬಯಲಾಗುತ್ತದೆ. ತಪ್ಪಿಸ್ಥ ಅ„ಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ನಿಜವಾದ ಫಲಾನುಭವಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂಬುದು ತೊಂದರೆಗೊಳಗಾದ ಕುಟುಂಬಗಳ ಆಗ್ರಹವಾಗಿದೆ.


ನನ್ನ ಮನೆಯಲ್ಲಿ ಸಂಪೂರ್ಣ ನೀರಿನಲ್ಲಿ ಮುಳುಗಿದೆ.ಆದರೂ ನನಗೆ ಪರಿಹಾರ ಬಂದಿರುವುದಿಲ್ಲ.ಸರ್ವೆ ಮಾಡುವಾಗ ನನ್ನ ಮನೆ ಹೆಸರು ಬರೆದುಕೊಂಡಿದ್ದಾರೆ.ನಂತರ ಕೆಲವರಿಗೆ ಪರಿಹಾರ ಬಂದಿದೆ.ನನಗೆ ಪರಿಹಾರ ಬಂದಿರುವುದಿಲ್ಲ. ಮಿರಗಿ ಗ್ರಾಮದ ಬಹುತೇಕ ಮನೆಗಳು ಭೀಮಾನದಿ ಪ್ರವಾಹದಿಂದ ಮುಳುಗಡೆಯಾಗಿ ಮನೆಯಲ್ಲಿನ ಸಾಮಾನುಗಳು ಕೊಚ್ಚಿಕೊಂಡು ಹೋಗಿವೆ.ಪರಿಹಾರಕ್ಕಾಗಿ ಅ„ಕಾರಿಗಳು ಸರ್ವೆ ಕಾರ್ಯ ಮಾಡಿದ್ದಾರೆ. ಆದರೆ ನಿಜವಾದ ಫಲಾನುಭವಿಗಳಿಗೆ ಪರಿಹಾರ ದೊರಕಿರುವುದಿಲ್ಲ. ಅ„ಕಾರಿಗಳು ಒಬ್ಬರ ಮೇಲೆ ಒಬ್ಬರು ಹಾಕಿ ಜಾರಿಕೊಳ್ಳುತ್ತಿದ್ದಾರೆ.ಮನೆ ಕಳೆದುಕೊಂಡು ಸಂಕಷ್ಟದಲ್ಲಿರುವವರ ನೆರವಿಗೆ ಸರ್ಕಾರ ಅ„ಕಾರಿಗಳು ಬರಬೇಕು. ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಬೇಕು.ಕಮಲಾಬಾಯಿ ಜಾಧವ,ಮಿರಗಿ ಗ್ರಾಮದ ಮಹಿಳೆ.


ತಾಲೂಕಿನ ಇತರೆ ಗ್ರಾಮದಲ್ಲಿ ಭೀಮಾನದಿ ಪ್ರವಾಹದಿಂದ ಮನೆಯಲ್ಲಿ ನೀರು ನುಗ್ಗಿದ ಕುಟುಂಭದ ಫಲಾನುಭವಿಗಳ ಸರ್ವೆ ಮಾಡಲು ಅ„ಕಾರಿಗಳ ತಂಡ ರಚಿಸಲಾಗಿತ್ತು.ಕೆಲವೊಂದು ಗ್ರಾಮದಲ್ಲಿ ಸರ್ವೆ ಕಾರ್ಯ ಸರಿಯಾಗಿ ನಡೆದಿರುವುದಿಲ್ಲ. ನಿಜವಾದ ಕುಟುಂಬಗಳಿಗೆ ಪರಿಹಾರ ದೊರಕಿರುವುದಿಲ್ಲ ಎಂಬ ದೂರುಗಳು ಬಂದಿವೆ. ಪರಿಶೀಲಿಸಿ,ಅಂತಹ ಕುಟುಂಬಗಳಿಗೆ ಪರಿಹಾರ ಒದಗಿಸಿಕೊಡಲು ಕ್ರಮ ಕೈಗೊಳ್ಳಲಾಗುತ್ತದೆ. ಚಿದಂಬರ ಕುಲಕರ್ಣಿ,ತಹಶೀಲ್ದಾರ,ಇಂಡಿ.