ಮಿಯೆಟ್ನಾಂ ಚಂಡಮಾರುತ ೩೫ ಮಂದಿ ಬಲಿ

ಹನೋಯ್(ವಿಯೆಟ್ನಾಂ).ಅ.೩೦- ಪ್ರಬಲ ಚಂಡಮಾರತದ ಆರ್ಭಟಕ್ಕೆ ಭಾಗಶಃ ವಿಯೆಟ್ನಾಂ ಚಂಡಮಾರುತಕ್ಕೆ ತತ್ತರಿಸಿ ಹೋಗಿದೆ. ಕಳೆದ ೨೦ ವರ್ಷಗಳಲ್ಲಿಯೇ ಅತ್ಯಂತ ಮಾರಕ ದೇಶದ ಅನೇಕ ಭಾಗಗಳಲ್ಲಿ ಭೂಕುಸಿತದಿಂದಾಗಿ ಕನಿಷ್ಠ ೩೫ ಮಂದಿ ಮೃತಪಟ್ಟಿದ್ದು, ೫೦ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ.
ಅನೇಕ ಕಡೆ ನೂರಾರು ದೋಣಿಗಳು ಮುಳುಗಿ ಹೋಗಿವೆ. ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕನಿಷ್ಠ ೧.೭ ದಶಲಕ್ಷ ಜನರು ಕತ್ತಲಲ್ಲಿ ಕಾಲಕಳೆಯುವಂತಾಗಿದೆ.
ದೇಶದ ಮಧ್ಯಭಾಗದಲ್ಲಿರುವ ಮೂರು ಗ್ರಾಮಗಳಲ್ಲಿ ಭಾರಿ ಆನಾಹುತ ಸಂಭವಿಸಿದ್ದು, ಭೂಕುಸಿತದಿಂದ ಕನಿಷ್ಠ ೧೯ ಮಂದಿ ಮೃತಪಟ್ಟಿದ್ದಾರೆ. ೪೦ಕ್ಕೂ ಹೆಚ್ಚು ಮಂದಿ ಅಪಾರ ಪ್ರಮಾಣದಲ್ಲಿ ಕುಸಿದಿರುವ ಮಣ್ಣು ಮತ್ತು ಅವಶೇಷಗಳಡಿ ಸಿಲುಕಿದ್ದಾರೆ.
ಸೇನಾ ಪಡೆಗಳು ಅವಶೇಷಗಳನ್ನು ತೆರವುಗೊಳಿಸುವ ಮೂಲಕ ಜನರನ್ನು ರಕ್ಷಿಸುವ ಕಾರ್ಯಗಳಲ್ಲಿ ನಿರತವಾಗಿವೆ.
ಭೂಕುಸಿತದ ಸ್ಥಳಕ್ಕೆ ಭೇಟಿ ನೀಡಿರುವ ಉಪ ಪ್ರಧಾನಿ ಟ್ರಿನ್ ಡಿನ್ ಡುಂಗ್, ರಕ್ಷಣಾ ಕಾರ್ಯಾಚರಣೆಯ ಪ್ರಯತ್ನಗಳಿಗೆ ನೆರವಾಗಲು ಕೂಡಲೇ ಮತ್ತಷ್ಟು ಸೇನಾ ಪಡೆಗಳನ್ನು ರವಾನಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಚಂಡಮಾರುತದ ಹೊಡೆತಕ್ಕೆ ಸಿಕ್ಕಿ ನಿನ್ನೆ ಕೆಲವು ಮೀನುಗಾರರ ದೋಣಿಗಳು ಮುಳುಗಿ ಹೋಗಿದ್ದು, ೧೨ ಮೀನುಗಾರರು ಬಲಿಯಾಗಿದ್ದಾರೆ.
ಗಂಟೆಗೆ ೧೫೦ ಕಿ.ಮೀ ವೇಗದಲ್ಲಿ ಗಾಳಿ ಬೀಸಿದ್ದು, ೧೪ ಮೀನುಗಾರರು ನಾಪತ್ತೆಯಾಗಿದ್ದಾರೆ. ದೇಶದ ಅನೇಕ ಕಡೆ ಅಪಾರ ಹಾನಿಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಉಂಟಾಗಿರುವ ಆನೆಗಳ ಪ್ರಮಾಣ iತ್ತು ಸಾವು-ನೋವುಗಳನ್ನು ಅಂದಾಜಿಸಲು ತಕ್ಷಣ ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತ್ಯಂತ ವೇಗವಾಗಿ ಬೀಸುತ್ತಿರುವ ಚಂಡಮಾರುತದಿಂದ ಭಾರೀ ಮಳೆ ಸುರಿಯುತ್ತಿದ್ದು, ಜನರು ಕಂಗಾಲಾಗಿದ್ದಾರೆ. ೧.೩ ಮಿಲಿಯನ್ ಜನರನ್ನು ಬೇರೆಡೆಗೆ ಸ್ಥಳಾಂತರಿಸಲು ಸರ್ಕಾರ ಸಿದ್ಧತೆ ನಡೆಸಿದೆ.