ಮಿಮ್ಸ್ ಪ್ರಸೂತಿ ವಿಭಾಗದ ಬಾಗಿಲಲ್ಲೇ ಗರ್ಭಿಣಿಗೆ ಹೆರಿಗೆ!

ಮಂಡ್ಯ : ಮೇ.26:- ಗರ್ಭಿಣಿಯೊಬ್ಬರಿಗೆ ಆಸ್ಪತ್ರೆ ಬಾಗಿಲಲ್ಲೇ ಹರಿಗೆಯಾದ ಪ್ರಸಂಗ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) ಸೀರೋಗ ಮತ್ತು ಪ್ರಸೂತಿ ವಿಭಾಗದ ಮುಂದೆ ಬುಧವಾರ ನಡೆಯಿತು.
ನಗರದ ಗುತ್ತಲು ಬಡಾವಣೆಯ ನಿವಾಸಿ ಇಸ್ಮಾಯಿಲ್ ಎಂಬುವರ ಪತ್ನಿ ಸೋನು (23) ಎಂಬಾಕೆಯೇ ಹೆರಿಗೆ ವಾರ್ಡ್‍ನ ಮುಂದೆಯೇ ಹೆರಿಗೆಯಾದ ಮಹಿಳೆ.
ಸೋನು ಅವರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಮೂರನೇ ಬಾರಿ ಗರ್ಭಿಣಿಯಾಗಿದ್ದುಘಿ, 28 ವಾರಗಳು ಕಳೆದಿತ್ತುಘಿ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಧಾವಿಸಿ ಸೀವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡಿದ್ದರು. ಗರ್ಭವತಿಯಾದಾಗಿನಿಂದಲೂ ಒಮ್ಮೆಯೂ ವೈದ್ಯರ ಬಳಿ ಸಲಹೆ ಮತ್ತು ಚಿಕಿತ್ಸೆ ಪಡೆದಿರಲಿಲ್ಲ.
ನಿನ್ನೆಯಷ್ಟೇ ಆಸ್ಪೆತ್ರೆಗೆ ದಾಖಲಿಸಿ ತಪಾಸಣೆಗೆ ಒಳಗಾದ ವೇಳೆ ವೈದ್ಯರ ಸಲಹೆ ಮೇರೆಗೆ ಸ್ಕ್ಯಾನಿಂಗ್ ಮಾಡಿಸಿದ್ದರು. ಸ್ಕ್ಯಾನಿಂಗ್ ಮಾಡಿದಾಗಲೇ ಮಗು ಹೊಟ್ಟೆಯಲ್ಲೇ ಸತ್ತುಹೋಗಿರುವ ಬಗ್ಗೆ ವೈದ್ಯರು ಪತ್ತೆ ಹಚ್ಚಿ ರೋಗಿಗೆ ತಿಳಿಸಿ, ತಕ್ಷಣ ಆಸ್ಪತ್ರೆಗೆ ದಾಖಲಾಗುವಂತೆ ಸೂಚನೆ ನೀಡಿದ್ದಾರೆ.
ವೈದ್ಯರ ಸೂಚನೆಯನ್ನು ಧಿಕ್ಕರಿಸಿದ ಮಹಿಳೆ ಮತ್ತು ಆಕೆಯ ಕಡೆಯವರು ವಾಪಸ್ಸು ಮನೆಗೆ ತೆರಳಿದ್ದಾರೆ. ಬುಧವಾರ ಬೆಳಗ್ಗೆ ಮತ್ತೆ ಆಸ್ಪತ್ರೆಗೆ ಧಾವಿಸಿ ದಾಖಲಾಗಲು ಕೇಳಿಕೊಂಡಿದ್ದಾರೆ. ವೈದ್ಯರು ಕೋವಿಡ್ ಪರೀಕೆಗೆ ಸೂಚಿಸಿದ್ದುಘಿ, ಆಸ್ಪತ್ರೆ ಆವರಣದಲ್ಲಿ ಆರ್‍ಟಿಪಿಸಿಆರ್ ತಪಾಸಣೆಗೆ ಒಳಗಾಗಿದ್ದಾರೆ. ಒಂದು ಗಂಟೆಯ ಬಳಿಕ Àಲಿತಾಂಶ ಬಂದಿದ್ದುಘಿ, ನಂತರವಷ್ಟೇ ಆಕೆಯನ್ನು ಗರ್ಭಿಣಿಯರ ವಾರ್ಡ್‍ಗೆ ದಾಖಲು ಮಾಡಲಾಗಿದೆ.
ವಾರ್ಡ್‍ನ ಒಳಗೆ ಹೋಗಿ ಹಾಸಿಗೆಯಲ್ಲಿ ಕುಳಿತು ಸ್ವಲ್ಪ ಹೊತ್ತಿನ ಬಳಿಕ ತನ್ನ ಮೈಮೇಲಿದ್ದ ವಡವೆಯನ್ನು ಪೆÇೀಷಕರಿಗೆ ನೀಡಲು ಆಕೆ ವಾರ್ಡಿನಿಂದ ಹೊರಗೆ ಬಂದಿದ್ದಾರೆ. ಈ ವೇಳೆ ಆಸ್ಪತ್ರೆಯ ಬಾಗಿಲಲ್ಲೇ ಹೆರಿಗೆಯಾಗಿದೆ ಎಂದು ಮಿಮ್ಸ್‍ನ ಪ್ರಬಾರ ವೈದ್ಯಕೀಯ ಅಧೀಕ್ಷಕ ಡಾ. ಪಿ.ವಿ. ಶ್ರೀಧರ್ ತಿಳಿಸಿದರು.
ನಿರ್ಲಕ್ಷ್ಯ ಆರೋಪ :
ವೈದ್ಯರು ಕೋವಿಡ್ ಪರೀಕ್ಷೆ ನೆಪವೊಡ್ಡಿ ಬೇಗ ಗರ್ಭಿಣಿಯನ್ನು ದಾಖಲಿಸಿಕೊಳ್ಳಲಿಲ್ಲಘಿ. ಇದರಿಂದ ಹೆರಿಗೆ ವಿಭಾಗದ ಮುಂದೆಯೇ ಹೆರಿಗೆಯಾಗಿ ಮಗು ಸಾವನ್ನಪ್ಪಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಸೋನು ಪೆÇೀಷಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಮಿಮ್ಸ್‍ನ ಹೆರಿಗೆ ವಿಭಾಗದ ಮುಖ್ಯಸ್ಥರು, ವೈದ್ಯರು ಹಾಗೂ ಎಂ.ಎಸ್. ಡಾ. ಪಿ.ವಿ. ಶ್ರೀಧರ್ ರೋಗಿಯ ಕಡೆಯವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರಾದರೂ, ಸುಖಾಸುಮ್ಮನೆ ಆರೋಪ ಮಾಡುತ್ತಿದ್ದರೆನ್ನಲಾಗಿದೆ. ತಸ್ಥಳಕ್ಕೆ ಸಿಪಿಐ ಸಂತೋಷ್ ಭೇಟಿ ನೀಡಿ ಪರಿಶೀಲನೆ ನಡೆಸಿ, ವೈದ್ಯರ ವಿರುದ್ಧ ದೂರು ನೀಡಿದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಬಳಿಕ ರೋಗಿಗಳ ಕಡೆಯವರು ವಾಪಸ್ಸು ತೆರಳಿದರು.