ಮಿನಿ ವಿಧಾನಸೌಧ ಕಚೇರಿಯ ಕುಡಿವ ನೀರು ರಸ್ತೆ ಪಾಲು

ಸಂಜೆವಾಣಿ ವಾರ್ತೆ
ನಂಜನಗೂಡು: ಏ.16:- ರಾಜ್ಯದಲ್ಲಿ ಮಳೆ ಇಲ್ಲದೆ ಕುಡಿಯಲುನೀರಿಲ್ಲದೆ ಪರಿತಪಿಸುವ ಸ್ಥಿತಿ ಉಂಟಾಗಿದೆ ಇಂಥ ಸಮಯದಲ್ಲೂ ಕೂಡ ನಂಜನಗೂಡು ಮಿನಿವಿಧಾನಸೌಧ ಕಚೇರಿಯ ಆವರಣದಲ್ಲಿರುವ ನೀರಿನ ಟ್ಯಾಂಕ್ ನಿಂದ ಬೆಳಗ್ಗೆಯಿಂದ ನೀರು ಹರಿದು ಸಾವಿರಾರು ಲೀಟರ್ ರಸ್ತೆ ಪಾಲಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ
ಮಿನಿ ವಿಧಾನಸೌಧಕ್ಕೆ ಬೆಳಗ್ಗೆಯಿಂದ ಸಂಜೆ ಸಾವಿರಾರು ಜನ ತಮ್ಮ ಕೆಲಸಕ್ಕಾಗಿ ಪ್ರತಿದಿನ ಬರುತ್ತಾರೆ ಹೋಗುತ್ತಾರೆ ಆದರೆ ಮಿನಿ ವಿಧಾನಸೌಧ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಕೂಡ ಪರಿಹಾರ ಮಾಡದೇ ಯಥೇಚ್ಛವಾಗಿ ನೀರನ್ನು ಭೂಮಿಗೆ ಬಿಟ್ಟು ಹಾಳು ಮಾಡುತ್ತಿದ್ದಾರೆ ಇದೇ ರಸ್ತೆಯಲ್ಲಿ ಅಧಿಕಾರಿಗಳು ಓಡಾಡುತ್ತಾರೆ ಆದರೂ ಕೂಡ ಕಂಡು ಕಾಣದಂತೆ ತಮ್ಮ ಕೈಯಲ್ಲಿ ಕುಡಿಯುವ ನೀರಿನ ಬಾಟಲ್ ಹಿಡಿದು ಹೋಗುತ್ತಾರೆ ನೀರಿನ ಟ್ಯಾಂಕಿಂದ ಹೋಗುತ್ತಿರುವ ನೀರನ್ನು ಯಾರೂ ಕೂಡ ನಿಲ್ಲಿಸುವ ಗೋಜಿಗೆ ಹೋಗದೆ ಇರುವುದರಿಂದ ಸಾವಿರಾರು ಗಟ್ಟಲೆ ಕುಡಿಯುವ ನೀರು ಭೂಮಿ ಪಾಲಾಗಿದೆ ಮುಂದಾದರು ಕುಡಿಯುವ ನೀರನ್ನು ಈ ರೀತಿ ರಸ್ತೆ ಪಾಲಾಗಲು ಬಿಡದೆ ತಡೆಗಟ್ಟುವರು ಯಾರು ಎಂಬುದ ಪ್ರಶ್ನೆಯಾಗಿದೆ