ಮಿನಿ ವಿಧಾನಸೌಧದಲ್ಲಿ ಶೌಚಾಲಯಕ್ಕಾಗಿ ಜನರ ಪರದಾಟ

ಹುಮನಾಬಾದ್ :ಜು.11: ಪಟ್ಟಣದ ತಾಲೂಕ ಆಡಳಿತ ಕಚೇರಿಯಲ್ಲಿ ಕಚೇರಿ ಕೆಲಸಕೆಂದು ಬರುವ ಸಾರ್ವಜನಿಕರು ಸುಲಭ ಶೌಚಾಲಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕ ಆಡಳಿತ ಕಚೇರಿ ಆವರಣದಲ್ಲಿ ಜನರ ಅನುಕೂಲಕ್ಕಾಗಿ ಸರಕಾರ ಲಕ್ಷಾಂತರ ರೂಪಾಯಿ ಅನುದಾನ ಖರ್ಚು ಮಾಡಿ ಶೌಚಾಲಯ ಕಟ್ಟಡ ನಿರ್ಮಾಣ ಮಾಡಿದೆ. ಆದರೆ ಶೌಚಾಲಯದ ಬಾಗಿಲು ತೆರೆಯದೇ ಇರುವ ಕಾರಣ ಜನರು ಗಿಡ ಗಂಟಿ ಹಾಗೂ ಜನ ದಟ್ಟಣೆ ಇಲ್ಲದೇ ಸ್ಥಳಗಳಿಗೆ ತೆರಳಿ ಶೌಚ ಮಾಡುವ ದುಸ್ಥಿತಿ ಇದೆ.

ಕಚೇರಿ ಆವರಣದಲ್ಲಿನ ಶೌಚಾಲಯದ ಸುತ್ತಮುತ್ತಲು ಗಿಡಗಂಟಿ ಬೆಳೆದು ದಿನದಿಂದ ದಿನಕ್ಕೆ ಶೌಚಾಲಯ ಅಳಿವಿನ ಅಂಚಿಗೆ ತಲುಪುತ್ತಿದೆ. ಕಚೇರಿಗೆ ಬರುವ ಜನರ ಅನುಕೂಲಕ್ಕಾಗಿ ಅನೇಕ ಬಾರಿ ಶೌಚಾಲಯದ ಬಾಗಿಲು ತೆರೆದು ಇಡುವಂತೆ ಮನವಿ ಮಾಡಿದರೂ ಕೂಡಾ ಯಾವುದೇ ಪ್ರಯೋಜನೆ ಆಗಿಲ್ಲ ಎಂದು ಸ್ಥಳೀರು ಆರೋಪಿಸಿದರು.

ಜನರ ಅನುಕೂಲಕ್ಕಾಗಿ ತಾಲೂಕ ಆಡಳಿತ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ಶೀಘಗತಿಯಲ್ಲಿ ಕಚೇರಿ ಆವರಣದ ಸಾರ್ವಜನಿಕ ಶೌಚಾಲಯ ಚಾಲನೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.


ತಾಲೂಕ ಆಡಳಿತ ಕಚೇರಿಯ ಆವರಣದಲ್ಲಿನ ಸಾರ್ವಜನಿಕ ಶೌಚಾಲಯ ಚಾಲನೆಗೆ ವಿಳಂಬ ಮಾಡದೇ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ವಿಳಂಬ ನೀತಿ ಅನುಸರಿಸಿದರೆ ತಾಲೂಕ ಆಡಳಿತ ಎದುರುಗಡೆ ಬೃಹತ್ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ.

ಅವಿನಾಶ್ ಧುಮಾಳೆ
ಅಧ್ಯಕ್ಷರು, ಜಯ ಕರ್ನಾಟಕ ಜನಪರ ವೇದಿಕೆ ಹುಮಾನಾಬದ್