ಮಿನಿ ವಿಧಾನಸೌದ, ಕ್ರೀಡಾಂಗಣ ನಿರ್ಮಾಣ, ಕುಡಿಯುವ ನೀರು ಒದಗಿಸುವೆ

ಸಿರವಾರ,ಏ.೦೪- ೨೦೨೩ ರ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವುದರಿಂದ ಮಾನ್ವಿ ವಿಧಾನಸಭಾ ಕ್ಷೇತ್ರದ ಕಲ್ಲೂರು, ಸಿರವಾರ ಪಟ್ಟಣದಲ್ಲಿರುವ ದೇವಸ್ಥಾನ, ಚರ್ಚ್, ಮಸೀದಿಗಳಿಗೆ ತೆರಳಿ ಪಂಚರತ್ನ ಯೋಜನೆಯ ಕರ ಪತ್ರಕ್ಕೆ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಪೂಜೆ ಸಲ್ಲಿಸುವ ಜೊತೆಗೆ ಮತ್ತೆ ಗೆಲುವಿಗಾಗಿ ಟೆಂಪಲ್ ರನ್ ಮಾಡುವ ಮೂಲಕ ಮತದಾರರನ್ನು ಸೇಳೆಯುತ್ತಿದ್ದಾರೆ.
ಪಟ್ಟಣದ ಶ್ರೀ ಈಶ್ವರ, ಹರಿಹರ, ವೀರಭದ್ರೇಶ್ವರ, ಬಯಲು ಆಂಜನೇಯ್ಯ ಸೇರಿ ಇನ್ನಿ ದೇವಸ್ಥಾನದಲ್ಲಿ, ಮೆಥೋಡಿಸ್ಟ್ ಚರ್ಚ್, ಮಸೀದ್‌ಗೆ ತೆರಳಿ ೨೦೨೩ ರ ವಿಧಾನಸಭೆ ಚುನಾವಣೆ ಪ್ರಚಾರ ಹಾಗೂ ಪಂಚರತ್ನ ಯೋಜನೆಗಳ ಪ್ರಚಾರ ಕಾರ್ಯಕ್ರಮಕ್ಕೆ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ನಂತರ ಮಾತನಾಡಿದ ಶಾಸಕರು ಕಳೆದ ಐದು ವರ್ಷಗಳಲ್ಲಿ ಸಿರವಾರ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ.
ಡಿವೈಡರ್, ಹೈಮಸ್ಟ್ ಲೈಟ್, ಬಸ್ ನಿಲ್ದಾಣ ಕಾಮಗಾರಿ, ವಿವಿಧ ವಾರ್ಡ್‌ಗಳಲ್ಲಿ ಸಿಸಿ ರಸ್ತೆ ನಿರ್ಮಾಣ, ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ನನ್ನ ಅಧಿಕಾರ ಅವಧಿಯಲ್ಲಿ ಮಾಡಿದ್ದೇನೆ. ಕ್ರೀಡಾಂಗಣ, ಮಿನಿ ವಿಧಾನಸೌಧ ನಿರ್ಮಾಣಕ್ಕೆ ಬದ್ದನಾಗಿದ್ದೇನಿವೇಶ ನೀರಾವರಿ ಇಲಾಖೆಯಿಂದ ವರ್ಗಾವಣೆ ಆಗಬೇಕಿದರಿಂದ ವಿಳಂಭವಾಗಿದೆ.
ಮುಂಬರುವ ದಿನಗಳಲ್ಲಿ ಮತ್ತೆ ಶಾಸಕನಾದರೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಿನಿವಿಧಾನಸೌಧ, ಕ್ರೀಡಾಂಗಣ ನಿರ್ಮಾಣ, ಎಲ್ಲಾ ಧಾರ್ಮಿಕ ದೇವಸ್ಥಾನಗಳಿಗೆ ನನ್ನ ಅವಧಿಯಲ್ಲಿ ಹೆಚ್ಚಿನ ಅನುದಾನವನ್ನು ನೀಡಿದ್ದೇನೆ. ಇನ್ನು ಹಲವಾರು ಮೂಲಭೂತ ಸೌಕರ್ಯಗಳನ್ನ ಒದಗಿಸಿ ಕೊಡುತ್ತೇನೆ. ಪಂಚರತ್ನ ಯೋಜನೆ ಬಗ್ಗೆ, ರೈತರಿಗೆ ೧೦ ಎಕರೆವರೆಗೂ ೧೦ ಸಾವಿರ, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸಾಲಮನ್ನಾ, ಅಂಗವಿಕಲರ, ವಿಧವೆಯರ, ವೃದ್ಯಾಪ್ಯ ವೇತನ ೫ ಸಾವಿರದವರೆಗೂ ಹೆಚ್ಚಳ ಮಾಡುತ್ತಾರೆ. ಇವುಗಳನ್ನು ಮತದಾರರಿಗೆ ತಿಳಿಸಿ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷರಾದ ರಾಜಾ ರಾಮಚಂದ್ರ ನಾಯಕ, ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಬಲ್ಲಟಿಗಿ, ಹಿರಿಯ ಮುಂಖಡರಾದ ಜಿ.ಲೋಕರೆಡ್ಡಿ, ಪಟ್ಟಣ ಪಂಚಾಯತಿ ಸದಸ್ಯರಾದ ಗ್ಯಾನಪ್ಪ, ಬಂದೇನವಾಜ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಎಮ್.ಡಿ. ವಲೀ ಸಾಬ್, ಯುವ ಮುಂಖಡರಾದ ರಾಜಾ ಆದರ್ಶ ನಾಯಕ, ಮುಂಖಡರಾದ ಕಾಶಿನಾಥ ಸರೋದ್, ಈಶಪ್ಪ ಹೂಗಾರ, ನಾಗರಾಜ ಭೋಗಾವತಿ, ದಾನಪ್ಪ ಸಿರವಾರ, ಚಂದ್ರಶೇಖರ್ ಗೌಡ ಸಿರವಾರ, ಸತ್ತರ್ ಸಾಬ್, ಮೌಲ ಸಾಬ್, ಪಿ. ರವಿಕುಮಾರ, ಲಕ್ಷ್ಮಣ, ಗೋಪಾಲ ನಾಯಕ ಹರವಿ,ಯಂಕಪ್ಪ ಗುಜ್ಜಲ, ಯಲಪ್ಪ ದೊರೆ, ಹುಲಿಗೇಪ್ಪ ಮಡಿವಾಳ, ಇಸ್ಮಾಯಿಲ್, ರವಿ ಗೌಡ, ಇಬ್ರಾಹಿಂ, ಮಲಯ್ಯ ಚಲವಾದಿ,ಬೀಮರಾಜ, ಶರಣಪ್ಪ, ಅಜೇಮೀರ, ಇಮಾಮ ಸಾಬ್, ವಿಜಯ ಸೈ, ರಮೇಶ ಭೋವಿ, ಪಕ್ಷದ ಮುಂಖಡರು ಕಾರ್ಯಕರ್ತರು ಉಪಸ್ಥಿತರಿದ್ದರು.