ಮಿನಿವಿಧಾನಸೌಧ ಪಕ್ಕದಲ್ಲಿರುವ ಡಬ್ಬಾ ಅಂಗಡಿ ತೆರವುಗೊಳಿಸಲು ಮನವಿ

ಮುದ್ದೇಬಿಹಾಳ:ನ.6: ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಇಟ್ಟಿರುವ ಅನಧಿಕೃತ ಡಬ್ಬಾ ಅಂಗಡಿಗಳು ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದೆ. ಬೇಕಾ ಬಿಟ್ಟಿಯಾಗಿ ಇಟ್ಟಿರುವ ಡಬ್ಬಾ ಅಂಗಡಿಗಳನ್ನ ತೆರವುಗೊಳಿಸುವಂತೆ ತಾಲೂಕು ಯುವ ಜನ ಸೇನೆಯ ಸದಸ್ಯರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಹಲವು ವರ್ಷಗಳ ಹಿಂದೆಯೇ ಮಿನಿ ವಿಧಾನಸೌದಧ ಸುತ್ತ ಮುತ್ತ ಕಂಪೌಂಡ್ ನಿರ್ಮಾಣ ಆಗಬೇಕಿತ್ತು. ಇಂದಿನ ತಹಶೀಲ್ದಾರ್ ವಿನಯಕುಮಾರ್ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಇದಕ್ಕೆ ಅನುದಾನ ಕೂಡ ಬಿಟುಗಡೆಯಾಗಿತ್ತು. ಆದರೆ, ಕಂಪೌಂಡ್ ನಿರ್ಮಾಣಕ್ಕೆ ಅನಧಿಕೃತ ಡಬ್ಬಾ ಅಂಗಡಿಗಳು ಅಡ್ಡಿಯಾಗಿವೆ. ಈ ಕೂಡಲೇ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ

ಅಲ್ಲದೇ, ತಹಶೀಲ್ದಾರ ಕಚೇರಿಯ ಆವರಣದಲ್ಲಿ ವಾಹನಗಳ ನಿಲುಗಡೆ ಸ್ಥಳಾವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ತಾಲೂಕು ಯುವ ಜನ ಸೇನೆ ಉಪಾಧ್ಯಕ್ಷ ಜಗದೇವರಾವ್ ಚಲವಾದಿ ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಸೇನೆಯ ತಾಲೂಕು ಅಧ್ಯಕ್ಷರಾದ ಪ್ರಕಾಶ್ ಕೆಂದೂಳಿ, ಸದಸ್ಯರಾದ ಚಾಂದ ಅಮ್ಮದ ಗೋಮರ್ಶಿ, ಸಿದ್ದು ಬಿರಾದಾರ್, ಕಾಶೀಮ್ ನಾಲತವಾಡ, ಸಂಗು ಬಿರಾದಾರ್, ರಾಜ ಅಮ್ಮದ್ ಗೋಮರ್ಶಿ ಇದ್ದರು.