ಮಿನಿವಿಧಾನಸೌದ ಕಟ್ಟಡ ನಿರ್ಮಾಣಕ್ಕೆ ಸಿದ್ದರಾಮಯ್ಯ ಪತ್ರ


ಗುಳೇದಗುಡ್ಡ,ಮಾ.26: ತಾಲ್ಲೂಕ ಕೇಂದ್ರವಾದ ಗುಳೇದಗುಡ್ಡದಲ್ಲಿ ಮಿನಿವಿಧಾನಸೌಧ ಕಟ್ಟಡ ನಿರ್ಮಿಸಲು ಹೆಸ್ಕಾಂ ಜಾಗ ಸೂಕ್ತವಾಗಿದೆ. ಹೆಸ್ಕಾಂ ಉಪವಿಭಾಗದ ಕಚೇರಿಯನ್ನು ಪುರಸಭೆ ವ್ಯಾಪ್ತಿಯ ಖಾಲಿ ಇರುವ ಜಾಗಕ್ಕೆ ಸ್ಥಳಾಂತರಿಸಿ, ಮುಂದಿನ ಅಗತ್ಯ ಕ್ರಮಕೈಗೊಳ್ಳುವಂತೆ ಹೆಸ್ಕಾಂನ ಹುಬ್ಬಳ್ಳಿ ವ್ಯವಸ್ಥಾಪಕ ನಿದೇರ್ಶಕರಿಗೆ ಬೆಂಗಳೂರು ಕವಿಪ್ರನಿನಿ ಪ್ರಧಾನ ವ್ಯವಸ್ಥಾಪಕರು ನಿರ್ದೇಶಿಸಿದ್ದಾರೆ.
ಬೆಂಗಳೂರು ಕವಿಪ್ರನಿನಿ ಪ್ರಧಾನ ವ್ಯವಸ್ಥಾಪಕರು ಹೆಸ್ಕಾಂನ ಹುಬ್ಬಳ್ಳಿ ವ್ಯವಸ್ಥಾಪಕ ನಿದೇರ್ಶಕರಿಗೆ ಪತ್ರ ಬರೆದು, ವಿಧಾನಸಭೆ ವಿರೋಧ ಪಕ್ಷದ ನಾಯಕರೂ ಆದ ಶಾಸಕ ಸಿದ್ದರಾಮಯ್ಯನವರು ನೂತನವಾಗಿ ರಚನೆಗೊಂಡ ಗುಳೇದಗುಡ್ಡ ತಾಲೂಕಿನಲ್ಲಿ ಮಿನಿವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಹೆಸ್ಕಾಂ ಉಪ ವಿಭಾಗ ಕಚೇರಿಯನ್ನು ಸ್ಥಳಾಂತರಿಸಿ ಈ ಜಾಗ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ಅದಕ್ಕೆ ಮುಖ್ಯಮಂತ್ರಿಗಳು ಸಹ ಟಿಪ್ಪಣಿ ಬರೆದಿದ್ದು, ಪತ್ರದಲ್ಲಿ ಪ್ರಸ್ತಾಪಿಸಿರುವ ಜಾಗಾ ಹೆಸ್ಕಾಂ ಒಡೆತನಕ್ಕೆ ಸೇರಿರುವ ಕಾರಣ ಮುಂದಿನ ಅಗತ್ಯ ಕ್ರಮಕೈಗೊಳ್ಳುವಂತೆ ಪ್ರಧಾನ ವ್ಯವಸ್ಥಾಪಕರು ನಿರ್ದೇಶಕರಿಗೆ ಸೂಚಿಸಿದ್ದಾರೆ.
ಸಿದ್ಧರಾಮಯ್ಯ ಪತ್ರ : ಗುಳೇದಗುಡ್ಡ ತಾಲ್ಲೂಕ ಕೇಂದ್ರದಲ್ಲಿ ಮಿನಿವಿಧಾನಸೌಧ ಕಟ್ಟಡ ನಿರ್ಮಾಣ ಮಾಡಲು ಪುರಸಭೆ ವ್ಯಾಪ್ತಿಯಲ್ಲಿರುವ ಹರದೊಳ್ಳಿ ಗ್ರಾಮದ ಜಾಗ ಬಾಗಲಕೋಟರವರಿಗೆ ಮಂಜೂರಿ ಯಾಗಿರುತ್ತದೆ. ಸದರಿ ಸ್ಥಳದಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು, ಸದರಿ ಜಾಗದಲ್ಲಿರುವ ಹೆಸ್ಕಾಂ ಕಚೇರಿಗಳನ್ನು ಪುರಸಭೆ ವ್ಯಾಪ್ತಿಯ ಜಮೀನಿನಲ್ಲಿ ವಸತಿ ಗೃಹಗಳಿದ್ದು, ಈ ಜಾಗದಲ್ಲಿ ಹೆಸ್ಕಾಂ ಉಪ ವಿಭಾಗ ಕಚೇರಿಗಳನ್ನು ಸ್ಥಳಾಂತರಿಸಲು ಸಂಬಂಧಪಟ್ಟವರಿಗೆ ಆದೇಶಿಸಲು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಶಾಸಕ ಸಿದ್ದರಾಮಯ್ಯ ಅವರು ಪತ್ರ ಬರೆದು ಆಗ್ರಹಿಸಿದ್ದಾರೆ.
ರೂ, 50 ಲಕ್ಷ ಮಂಜೂರಿ : ಪಟ್ಟಣದ ಗ್ರಾಮದೇವತೆ ಮೂಕೇಶ್ವರಿ ದೇವಸ್ಥಾನದ ಜಿರ್ಣೋದ್ಧರಾಕ್ಕೆ ರೂ, 2 ಕೋಟಿ ಅನುದಾನ ನೀಡುವಂತೆ ಶಾಸಕ ಸಿದ್ದರಾಮಯ್ಯನವರು ಬರೆದ ಪತ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ಶಾಸಕ ಸಿದ್ದರಾಮಯ್ಯ ಅವರ ಪತ್ರಕ್ಕೆ ಸ್ಪಂಧಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ರೂ, 50 ಲಕ್ಷ ರೂ ಬಿಡುಗಡೆ ಮಾಡಲು ಆದೇಶಿಸಿದ್ದಾರೆ.
ಮೂಕೇಶ್ವರಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಿದ್ದರಾಮಯ್ಯನವರು ಬರೆದ ಪತ್ರಗಳನ್ನು ಹಿಡಿದುಕೊಂಡು ಮಂಜೂರಿ ಯಾಗುವ ವರೆಗೂ ಆ ಕೆಲಸವನ್ನು ಹೊಳಬಸು ಶೆಟ್ಟರ ಅವರು ಫಾಲೋಅಪ್ ಮಾಡಿದ್ದಾರೆ. ಅನುದಾನ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ, ಶಾಸಕ ವಿಪಕ್ಷ ನಾಯಕ ಸಿದ್ಧರಾಮಯ್ಯನವರಿಗೆ, ಮುಖಂಡ ಹೊಳಬಸು ಶೆಟ್ಟರ ಅವರಿಗೆ ಜಾತ್ರಾ ಕಮೀಟಿ ಹಾಗೂ ಗುಳೇದಗುಡ್ಡ ತಾಲೂಕಿನ ಎಲ್ಲ ಜನತೆಯ ಪರವಾಗಿ ಅಶೋಕ ಹೆಗಡಿ ಧನ್ಯವಾದಗಳು ತಿಳಿಸಿದ್ದಾರೆ.