ಮಿನಾಸಪುರ ಗ್ರಾಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ

ಗುರುಮಠಕಲ್:ಎ.15: ಡಾಕ್ಟರ್ ಬಿ ಆರ್.ಅಂಬೇಡ್ಕರ ಸಂಘದ ವತಿಯಿಂದ “ಭಾರತ ರತ್ನ”, “ಸಂವಿಧಾನ ಶಿಲ್ಪಿ” ಡಾಕ್ಟರ್ ಬಿ ಆರ್.ಅಂಬೇಡ್ಕರ್ ಅವರ 132. ನೇಯ ಜಯಂತಿಯನ್ನು ಮಿನಾಸಪುರ ಗ್ರಾಮದಲ್ಲಿ ಅತ್ಯಂತ ವಿಜೃಂಭಣೆಯಿಂದ ಮಕ್ಕಳಿಗೆ ನೋಟ್ ಪುಸ್ತಕ ವನ್ನೂ ಹಂಚುವುದರ ಮೂಲಕ ಆಚರಿಸಲಾಯಿತು . ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಆನಂದ.ಬಿ ಅವರು ಮಾಡಿದರು . ಕಾರ್ಯಕ್ರಮದ ಕುರಿತು ಗಣೇಶ.ಪಿ ಅವರು ಮಾತಾಡಿದರು ಹಾಗೂ ಮಕ್ಕಳು ಕೂಡ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ರಾಜು .ಪಿ, ವೆಂಕಟಪ್ಪ.ಪಿ, ರಮೇಶ.ಪಿ, ನರೇಶ.ಬಿ, ತಿಪ್ಪಣ್ಣ.ಎಮ್, ಕನಕಪ್ಪ.ಎಮ್, ತಿಮ್ಮಪ್ಪ.ಸಿ, ನವೀನ್.ಎಮ್ ಕೃಷ್ಣ.ಪಿ, ಸುದರ್ಶನ.ಎಮ್, ಇನ್ನಿತರ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.. ವಂದನಾರ್ಪಣೆಯನ್ನೂ ಶ್ರೀದೇವಿ.ಪಿ ನಡೆಸಿಕೊಟ್ಟರು..