ಮಿತಿ ಮೀರಿದ ಮಟ್ಕಾ ದಂಧೆ : ೧೮೦ ಕಂಪನಿ ಜನ್ಮ

(ದೇವಪ್ಪ ಹಂಚಿನಾಳ)
ಗಬ್ಬೂರು.ಡಿ.೨೮- ಹಿಂದೂಳಿದ ದೇವದುರ್ಗ ತಾಲೂಕಿನಲ್ಲಿ ಮಟ್ಕಾ ದಂಧೆ ಮಿತಿ ಮೀರಿದ್ದು, ಹಗಲೊತ್ತಲ್ಲೇ ರಾ ಜಾರೋಷವಾಗಿ ಮಟ್ಕಾ ದಂಧೆಯನ್ನು ತಡೆಗಟ್ಟಲು ಈ ಹಿಂದೆ ಯುವಕರು ’ಮಟ್ಕಾ ನಿಲ್ಲಿಸಿ ದೇವದುರ್ಗ ಉಳಿಸಿ’ ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದರು. ಏನು ಪ್ರಯೋಜನ ಇಲ್ಲ ಎಂದು ಸಾರ್ವಜನಿಕರ ಮಾತಾಗಿದೆ. ಒಂದು ಸಣ್ಣ ಹಳ್ಳಿಯಿಂದ ಆರಂಭಗೊಂಡು ೧೮೦ ಹಳ್ಳಿಗೂ ಮಟ್ಕಾ ಕಂಪನಿಗಳು ಜನ್ಮ ತಾಳಿವೆ.
ಇವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಗತಿಪರ ಸಂಘಟನೆಗಳ ಆರೋಪ. ಸಾಮಾನ್ಯ ಜನರು ಕೊರೋನಾ ವೈರಸ್ ನಿಂದ ಉದ್ಯೋಗ, ವ್ಯಾಪಾರ ನಷ್ಟವಾಗಿ ಖರ್ಚಿಗೆ ಕಾಸಿಲ್ಲ ಎಂದು ಪರದಾಡುತ್ತಿದ್ದಾರೆ. ಪಟ್ಟಣ, ಯರಮಸಾಳ್, ಜಾಲಹಳ್ಳಿ , ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಮಿತಿ ಮೀರಿ ಮಟ್ಕಾ ದಂಧೆ ನಡೆಯುತ್ತಿದೆ. ಈ ಮಟ್ಕಾ ದಂಧೆಯಿಂದ ಸ್ಥಳೀಯ ಯುವ ಜನರು ಹಾಳಾಗುತ್ತಿದ್ದಾರೆ ಎಂದು ಪೋಸ್ಟ್ ಗಳಲ್ಲಿ ಬಿತ್ತರಿಸಲಾಗುತ್ತಿದೆ.
ದೇವದುರ್ಗದಲ್ಲಿ ಮಿತಿಮೀರಿ ಹೋಗಿದ್ದು. ಪೊಲೀಸ್ ಇಲಾಖೆ ಈ ದಂಧೆ ನಿಯಂತ್ರಿಸುವಲ್ಲಿ ವಿಫಲವಾಗಿತ್ತು. ಯುವ ಪಡೆ ’ಮಟ್ಕಾ ನಿಲ್ಲಿಸಿ ದೇವದುರ್ಗ ಉಳಿಸಿ’ ಎಂಬ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಶುರು ಮಾಡಿದ್ದರೂ ಏನು ಪ್ರಯೋಜನವಿಲ್ಲ, ಮಟ್ಕಾ ಬುಕ್ಕಿಗಳನ್ನು ಮಾತ್ರ ಪೊಲೀಸ್ ಇಲಾಖೆಯವರು ಹಿಡಿಯುತ್ತಾರೆ. ಆದರೆ, ಮಟ್ಕಾ ದೊರೆಗಳನ್ನು ಏಕೆ ಬಂಧಿಸುವುದಿಲ್ಲ ಎನ್ನುವುದೇ ಪ್ರಜ್ಞಾವಂತರ ಮಾತಾಗಿದೆ.
ದೇವದುರ್ಗ ಮಾತ್ರವೇ ಈ ಆಟಕ್ಕೆ ಸೀಮಿತವಾಗಿಲ್ಲ. ಅರಕೇರಾ, ಗಬ್ಬೂರು, ಜಾಲಹಳ್ಳಿ, ಮಸರಕಲ್, ಮಲದಕಲ್, ರಾಮದುರ್ಗ, ಜಾಗಟಗಲ್, ನೂರಾ ಎಂಭತ್ತು ಹಳ್ಳಿಗಳಲ್ಲಿಯೂ ಮಟ್ಕಾ ದಂಧೆಯ ಕರಾಮತ್ತು ಎಗ್ಗಿಲ್ಲದೆ ನಡೆಯುತ್ತಿದೆ. ಮಟ್ಕಾದಲ್ಲಿ ೬ ದಿನಗಳ ಆಟ ಹೆಚ್ಚು ಫೇಮಸ್, ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸಂಜೆ ಈ ನಂಬರ್ ಗೇಮ್ ಆಟ ನಡೆಯುತ್ತದೆ. ಬೀಟರ್(ಏಜೆಂಟ್) ಹಣಕಟ್ಟಿಸಿ ಕೊಳ್ಳುತ್ತಾನೆ.
ಎಲ್ಲೋ ಮುಂಬೈನಲ್ಲಿರುವ ಮಾಲೀಕನೊಂದಿಗೆ ಈತನ ಸಂಪರ್ಕವಿರುತ್ತದೆ. ಬೇರೆ ಯಾರಿಗೂ ಈ ಮಾಲೀಕನ ಸಂಪರ್ಕ ಇರುವುದಿಲ್ಲ. ಹೀಗಾಗಿ ಎಲ್ಲವೂ ಅಯೋಮಯ. ಆಟ ಮಾತ್ರ ಸಲೀಸಾಗಿ ನಡೆಯುತ್ತಾ ಸಾಗುತ್ತದೆ. ದಿನವಿಡೀ ದುಡಿದು ಮನೆಗೆ ಸೇರಿಕೊಳ್ಳಬೇಕಾದ ಕೂಲಿ ಕಾರ್ಮಿಕ ನಿಧಾನವಾಗಿ ಮಟ್ಕಾ ಸೆಂಟರ್‌ಗಳತ್ತಾ ಹೆಜ್ಜೆ ಹಾಕುತ್ತಾನೆ. ತನ್ನ
ಮನೆಯ ಮಡದಿ ಮಕ್ಕಳಗಿಂತ ಹೆಚ್ಚಿನ ಪ್ರೀತಿ ಈ ಸೆಂಟರ್‌ಗಳ ಮೇಲೆ, ಕುಡಿತದ ಚಟಕ್ಕೂ ಬಲಿಯಾಗಿ ತನ್ನ ದುಡಿಮೆಯ ಹಣವೆಲ್ಲ ವ್ಯಯವಾಗುತ್ತದೆ.
ಹೆಂಡತಿ ಮಕ್ಕಳು ಉಪವಾಸ ಬೀಳುತ್ತಾರೆ, ದೇವದುರ್ಗ ಸುತ್ತಮುತ್ತಲ ಪ್ರದೇಶಗಳಿಗೆ ತೆರಳಿ ನೋಡಿದರೆ ಇಂತಹ ಆಟಗಳಿಗೆ ಬಲಿಯಾಗಿರುವ ಕುಟುಂಬಗಳ ದೈನೇಸಿ ಸ್ಥಿತಿ ಅರ್ಥವಾಗತ್ತದೆ. ಆದರೂ ಮಟ್ಕಾ ದಂಧೆಯ ಪ್ರಮುಖ ಕಿಂಗ್ ಪಿನ್ ರೂವಾರಿಗಳಾದ ಬಸವರಾಜ ಸ್ವಾಮಿ ಯರಮಸಾಳ, ಹಂಪಯ್ಯ ತಾತ ಎನ್ ಗಣೇಕಲ್, ರಾಚಯ್ಯ ತಾತ ಅರಕೇರಾ, ಶಾಂತುಕುಮಾರ ಹುರಕಡ್ಲಿ ಗಬ್ಬೂರು, ಬಂದೇನವಾಜ ಗಬ್ಬೂರು ಬಸವರಾಜ ಮಸರಕಲ್, ಬಸನಗೌಡ ಹಂಚಿನಾಳ, ಶಂಕ್ರಪ್ಪ ಸಾಹುಕಾರ ಹೀರೇರಾಯಕುಂಪಿ, ಚೆನ್ನಪ್ಪ ಅಂಗಡಿ ಹೇಮನೂರು, ಶರಣಪ್ಪ ಚಾರ್ ಮಾರ್ ಹೀರೆಬೂದುರು, ಮಲ್ಲಪ್ಪ ಇಟಗಿ, ನಾರಬಂಡಿ ಮೋನಪ್ಪ ಕಾಕರಗಲ್, ಮರಿಯಪ್ಪ ಜಗ್ಲಿ ಸುಂಕೇಶ್ವರಹಾಳ, ಅವರನ್ನು ಬಂಧಿಸಬೇಕು ಎಂದು ಅನೇಕ ಬಾರಿ ಪೊಲೀಸರ ಮೇಲೆ ಸಾರ್ವಜನಿಕ ಒತ್ತಡವನ್ನು ಹೇರಿದ್ದರು ಏನು ಪ್ರಯೋಜನವಿಲ್ಲ ಎಂದು ತಾಲೂಕಿನ ಪ್ರಜ್ಞಾವಂತ ಹಿರಿಯ ನಾಕರಿಕನಾದ ಆಮ್ ಅದ್ಮಿ ಪಾರ್ಟಿಯ ಜಿಲ್ಲಾಅಧ್ಯಕ್ಷರಾದ ಭೀಮರಾಯ ಜರದಬಂಡಿ ಅವರ ಮಾತಾಗಿದೆ.