ಮಿಣಜಗಿಯಲ್ಲಿ ಕಳ್ಳಬಟ್ಟಿ, ಅಕ್ರಮ ಸರಾಯಿ ಮಾರಾಟಕ್ಕೆ ಬ್ರೇಕ್

ತಾಳಿಕೋಟೆ:ಅ.30: ಮಿಣಜಗಿ ಗ್ರಾಮದ ಗ್ರಾಂ ಪಂಚಾಯ್ತಿಯಲ್ಲಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಮಿಣಜಗಿ ಗ್ರಾಮದಲ್ಲಿ ಕಳ್ಳಬಟ್ಟಿ ಸರಾಯಿ, ಮತ್ತು ಅಕ್ರಮ ಮದ್ಯ ಮರಾಟಕ್ಕೆ ಬ್ರೇಕ್ ಹಾಕಲು ಅಭಿವೃದ್ದಿ ಅಧಿಕಾರಿ ಬಿ.ಎಂ.ಸಾಗರ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ವಿಶೇಷ ಗ್ರಾಮ ಸಭೆಯಲ್ಲಿ ಸರ್ವಾನುಮತದಿಂದ ಮಿಣಜಗಿ ಗ್ರಾಮವನ್ನು ಸರಾಯಿ ಮುಕ್ತ ಗ್ರಾಮವೆಂದು ಘೋಷಣೆ ಮಾಡಲಾಗಿದೆ.

  ಗ್ರಾಂಪಂ ಅಧ್ಯಕ್ಷ ಶ್ರೀಮತಿ ಸುನಿತಾ ಶಿವಾನಂದ ನಾಯಕ ಅವರ ಅಧ್ಯಕ್ಷತೆಯಲ್ಲಿ ಹಾಗೂ ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ಪಿಎಸ್‍ಐ ಆರ್.ಎಸ್.ಭಂಗಿ ಅವರ ಸಹಭಾಗಿತ್ವದಲ್ಲಿ ಕರೆಯಲಾಗಿದ್ದ ಗ್ರಾಮ ಸಭೆಯಲ್ಲಿ ತುರ್ತು ನಿರ್ಣಯ ಮತ್ತು ಕಠಿಣ ಕ್ರಮಗಳ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ, ಸ್ತ್ರೀ ಶಕ್ತಿ ಸಂಘ ಮತ್ತು ಮಿಣಜಗಿ ಗ್ರಾಮಸ್ಥರು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಸರ್ಕಾರಿ ಕಾರ್ಯಕ್ರಮದ ನಿಮಿತ್ಯ ಮಿಣಜಗಿ ಗ್ರಾಮಕ್ಕೆ ಈ ಹಿಂದೆ ಬೆಟ್ಟಿ ನೀಡಿದ್ದಾಗ ಗ್ರಾಮದ ಮಹಿಳೆಯರು ಒಕ್ಕೂರುಲಿನಿಂದ ಅಕ್ರಮ ಸರಾಯಿ ಮಾರಾಟ ನಿಲ್ಲಿಸಬೇಕು ಇದರಿಂದ ಕುಟುಂಭಗಳು ಬೀದಿಪಾಲಾಗುತ್ತಿವೆ ಎಂದು ಗಮನಕ್ಕೆ ತಂದಿದ್ದರು, ಅದೇ ಸಮಯದಲ್ಲಿ ಶಾಸಕ ನಡಹಳ್ಳಿ ಅವರು ಗ್ರಾಂಪಂ ಅಭಿವೃದ್ದಿ ಅಧಿಕಾರಿ ಬಿ.ಎಂ.ಸಾಗರ ಅವರಿಗೆ ಅಕ್ರಮ ಸರಾಯಿ ಮಾರಾಟಕ್ಕೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದರು, ಇದರ ಅನ್ವಯ ಶನಿವಾರರಂದು ಮಿಣಜಗಿ ಗ್ರಾಂಪಂ ಕಾರ್ಯಾಲಯದಲ್ಲಿ ವಿಶೇಷ ಗ್ರಾಮ ಸಭೆಯನ್ನು ನಡೆಸಿದಾಗ ಅಕ್ರಮ ಸರಾಯಿ ಮಾರಾಟ ನಿಲ್ಲಬೇಕು ಅದಕ್ಕೆ ಗ್ರಾಂಪಂ ವತಿಯಿಂದ ಕಠಿಣ ಕ್ರಮ ಕೈಗೊಳ್ಳಿ ಎಲ್ಲ ರೀತಿಯ ಸಹಕಾರ ನೀಡುತ್ತೇವೆಂದು ತಿಳಿಸಿದರು.
  ಈ ಸಮಯದಲ್ಲಿ ಮಾತನಾಡಿದ ಅಭಿವೃದ್ದಿ ಅಧಿಕಾರಿ ಬಿ.ಎಂ.ಸಾಗರ ಅವರು ಪಂಚಾಯತ ವ್ಯಾಪ್ತಿಯಲ್ಲಿ ಬರುವ ಮಿಣಜಗಿ ಗ್ರಾಮದಲ್ಲಿ ಅಕ್ರಮವಾಗಿ ಸಾರಾಯಿ ಮಾರುವದನ್ನು ಬಹುತೆಕ ಎಲ್ಲಾ ಅಂಗಡಿಗಲ್ಲಿ ಮತ್ತು ಮನೆಯಲ್ಲಿ ಮಾರುವದನ್ನು ಮೌಖಿಕವಾಗಿ ನಮಗೆ ತಿಳಿಸಿದ್ದಾರೆ ಮತ್ತು ದಿನಾಂಕ 03/10/2022 ರಂದು ವಿವಿಧ ಕಾಮಗಾರಿಗಳ ಚಾಲನೆ ಅಂಗವಾಗಿ ಮಾನ್ಯ ಶಾಸಕರಾದ ಎ ಎಸ್ ಪಾಟೀಲ (ನಡಹಳ್ಳಿ) ಶಾಸಕರು ಇವರು ಮಿಣಜಗಿ ಗ್ರಾಮಕ್ಕೆ ಬಂದ ಸಮಯದಲ್ಲಿ ಮಹಿಳೆಯರು ಮೌಖಿಕವಾಗಿ ಸರಾಯಿ ಬಂದು ಮಾಡಲು ಮಾನ್ಯ ಶಾಸಕರಲ್ಲಿ ಮನವಿ ಮಾಡಿಕೊಂಡರು. ಸದರಿ ವಿಷಯವಾಗಿ ಈ ಗ್ರಾಮದಲ್ಲಿ ಅಧಿಕೃತ ಸರಾಯಿ ಅಂಗಡಿ ಇಲ್ಲದಿದ್ದರು ಬಹುತೇಕ ಎಲ್ಲಾ ಕಡೆ ಸಿಗುವದರಿಂದ ಯುವಕರು ಮತ್ತು ಮಧ್ಯಮ ವಯಸ್ಸಿನವರು ಸರಾಯಿ ಕುಡಿಯುವ ಪ್ರಮಾಣ ಹೆಚ್ಚಾಗಿರುತ್ತದೆ. ಅದ್ದರಿಂದ ಅವರ ಕುಟುಂಬಗಳಲ್ಲಿ ಜಗಳ, ಕುಟುಂಬ ನಿರ್ವಹಣೆ ತೊಂದರೆ ಮತ್ತು ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಸಭೆಗೆ ತಿಳಿಸಿ ಇದರ ಸಾಧಕ ಬಾಧಕ ಬಗ್ಗೆ ತಮ್ಮ ಅಭಿಪ್ರಾಯನ್ನು ತಿಳಿಸಬೇಕು ಎಂದು ಹೇಳಿದರು.
  ಸಭೆಯಲ್ಲಿದ್ದ ಗ್ರಾಮದ ಯುವ ಮುಖಂಡರಾದ ಡಿ. ಕೆ. ಪಾಟೀಲ ಅವರು ಗ್ರಾಮದ ಮಹಿಳೆಯರು ತಮ್ಮ ಕಣ್ಣಿರು ಹಾಕಿ ಅಕ್ರಮ ಸರಾಯಿ ನಿಲ್ಲಸಬೇಕು ಎಂದು ಕೇಳುತ್ತಿದ್ದಾರೆ ಯಾಕೆಂದರೆ ಇದರಿಂದ ಅವರ ಕುಟುಂಬದಲ್ಲಿ ಎಷ್ಟು ತೊಂದರೆಯಾಗಿವೆÉ ಎಂದು ತಿಳಿಯುತ್ತದೆ. ಮಿಣಜಗಿ ಗ್ರಾಮದ ಎಲ್ಲಾ ಸಮಾಜದ ಮುಖಂಡರು ತಮ್ಮ ನಿರ್ಣಯದ ಮುಖಾಂತರ ಸಂಪೂರ್ಣವಾಗಿ ಅಕ್ರಮ ಸರಾಯಿ ಮತ್ತು ಕಳ್ಳ ಬಟ್ಟಿ ಸರಾಯಿ ನಿಲ್ಲಿಸಬೇಕೆಂಬುದು ಅಭಿಪ್ರಾಯವಾಗಿದೆ ಈ ವಿಷಯದಲ್ಲಿ ಕಠಿಣ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
 ಅಪರಾದ ವಿಭಾಗದ ಪಿಎಸ್‍ಐ ಆರ್. ಎಸ್. ಬಂಗಿ ಅವರು ಮಾತನಾಡಿ ಅಕ್ರಮ ಸರಾಯಿ ಮತ್ತು ಕಳ್ಳ ಬಟ್ಟಿ ಸರಾಯಿ ಮಾರಿದರೆ ನಮ್ಮ ಮೋಬೈಲ್ ನಂಬರಿಗೆ ಪೋನ್ ಮಾಡಿ ತಿಳಿಸಿ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಅದರ ಜೊತೆಗೆ ಅಬಕಾರಿ ಇಲಾಖೆಗೆ ತಿಳಿಸಿ ಅವರ ಮೇಲೆ ಕಾನೂನಿನ ಅಡಿಯಲ್ಲಿ ಕ್ರಮವಹಿಸುತ್ತೇವೆ ಮತ್ತು ಕಾನೂನಿನ ಬಾಹಿರ ಚಟುವಟಿಕೆ ಮಾಡಬಾರದು ಗ್ರಾಮದಲ್ಲಿ ಅಕ್ರಮ ಸರಾಯಿ ಮಾರಾಟ ನಿಲ್ಲಬೇಕೆಂಬ ನಿಲವನ್ನು ಸ್ವಾಗತಿಸಿದ ಅವರು ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವದೆಂದರು.
  ಗ್ರಾಂಪಂ ಅಭಿವೃದ್ದಿ ಅಧಿಕಾರಿ ಬಿ.ಎಂ.ಸಾಗರ ಅವರು ಅಕ್ರಮ ಸಾರಾಯಿ ಮಾರಾಟದ ಬಗ್ಗೆ ಸಾಮುಹಿಕವಾಗಿ ಅಭಿಪ್ರಾಯವನ್ನು ಬಯಸಿದಾಗ ಸಭೆಯಲ್ಲಿದ್ದ ಗ್ರಾಮದ ಹಿರಿಯರಾದ ಐ. ಬಿ. ಪಾಟೀಲ ಅವರು ಗ್ರಾಮಸ್ಥರ ಪರವಾಗಿ ಮಾತನಾಡಿ ಮಹಿಳೆಯರು ಕುಟುಂಬ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಅವರ ಬೇಡಿಕೆ ಅನುಸಾರವಾಗಿ ನೀವು ಯಾವುದೇ ಕ್ರಮ ಕೈಗೊಂಡರು ಸಂಪೂರ್ಣವಾಗಿ ಗ್ರಾಮದ ಮುಖಂಡರು ಮತ್ತು ಜನರ ಬೆಂಬಲವನ್ನು ನೀಡುತ್ತೇವೆ ಎಂದು ಅಕ್ರಮ ಸಾರಾಯಿ ಮಾರಾಟ ಮತ್ತು ಕಳ್ಳ ಬಟ್ಟಿ ಸರಾಯಿ ಮಾರಾಟ ಮಾಡುವದನ್ನು ತಡೆದು "ಸರಾಯಿ ಮುಕ್ತ ಗ್ರಾಮ" ಎಂದು ಘೊಷಿಸಬೆಕೆಂದು ಮನವಿ ಮಾಡಿದಾಗ ಸಭೆಯಲ್ಲಿದ್ದ ಗ್ರಾಮಸ್ಥರರು ಒಕ್ಕೂರಲಿನಿಂದ ಬೆಂಬಲ ನೀಡಿದರು.

ಸಭೆಯಲ್ಲಿ ಮಿಣಜಗಿ ಗ್ರಾಮವನ್ನು ಸರಾಯಿ ಮುಕ್ತ ಗ್ರಾಮವೆಂದು ಘೋಷಣೆ ಮಾಡುವದರ ಜೊತೆಗೆ ಸರ್ವಾನುಮತದಿಂದ ಠರಾವು ಪಾಸ್ ಮಾಡಲಾಯಿತು.

ಈ ಸಮಯದಲ್ಲಿ ಮುಖಂಡರುಗಳಾದ ಎಸ್.ಎಂ.ಬೆಣ್ಣೂರ, ಸಿ.ಎಸ್.ಬಿರಾದಾರ, ರಾಮನಗೌಡ ಪಾಟೀಲ, ಬಸನಗೌಡ ಬಿರಾದಾರ, ಜಿ.ಎನ್.ಬಿರಾದಾರ, ಎಂ.ಎಸ್.ಯರನಾಳ, ಸಿದ್ದು ಮುರಾಳ, ಅಯ್ಯಪ್ಪ ಬಾಗೇವಾಡಿ, ರಮೇಶ ಜಂಬಗಿ, ಮಹಾಂತೇಶ ಬಿರಾದಾರ, ಶಿವನಗೌಡ ನಾಯಕ, ಮಾಂತಗೌಡ ಬಿರಾದಾರ, ಈರಣ್ಣ ತೇಕೂರ, ಮಾಳಪ್ಪ ಗುಂಡಕನಾಳ, ಮಹಾಂತೇಶ ಬಿರಾದಾರ, ಮೊದಲಾದವರು ಇದ್ದರು.


ಮಿಣಜಗಿ ಗ್ರಾಮ ಸರಾಯಿ ಮುಕ್ತ ಗ್ರಾಮ ಮಾಡಿದ್ದಕ್ಕೆ ಸಂಪೂರ್ಣವಾದ ಬೆಂಬಲವಿದೆ ಮಿಣಜಗಿ ಗ್ರಾಮದಲ್ಲಿ ಸರಾಯಿ ಮಾರಾಟ ಮಾಡುವದಕ್ಕೆ ಯಾವುದೇ ರೀತಿಯಿಂದ ಅವಕಾಶ ಕೊಡದಂತೆ ಪೊಲೀಸ್ ಅಧಿಕಾರಿಗಳಿಗೆ ಮತ್ತು ಅಬಕಾರಿ ಅಧಿಕಾರಿಗಳಿಗೆ ಸೂಚಿಸುತ್ತೇನೆ ಒಂದು ವೇಳೆ ಅವಕಾಶ ಕೊಟ್ಟರೆ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇನೆ.

     ಎ.ಎಸ್.ಪಾಟೀಲ(ನಡಹಳ್ಳಿ)

ಅಧ್ಯಕ್ಷರು/ಕ.ಆ.ಮತ್ತು ನಾ.ಸ.ನಿಗಮ ಶಾಸಕರು