
ಲಕ್ಷ್ಮೇಶ್ವರ,ಆ11: ಕೃಷಿಯಿಂದ ಕೈ ಸುಟ್ಟು ಕೊಳ್ಳುತ್ತಿರುವ ರೈತ ಸಮುದಾಯ ಇದೀಗ ಅರಣ್ಯ ಬೆಳೆ ತೋಟಗಾರಿಕಾ ಬೆಳೆ ಔಷಧಿ ಸಸ್ಯ ಸೇರಿದಂತೆ ಹೂವು ಹಣ್ಣು ತರಕಾರಿಗಳನ್ನು ಬೆಳೆಯಲು ಹೆಚ್ಚು ಆಸಕ್ತರಾಗಿದ್ದಾರೆ.
ಉದಾಹರಣೆಗೆ ಈ ಬಾರಿ ರೈತರು ಟೊಮೆಟೊ ಬೆಳೆದಿದ್ದರೆ ಕೋಟಿ ಕೋಟಿ ಲಾಭಗಳಿನುತ್ತಿದ್ದರು ಆದರೆ ಪರ್ಯಾಯ ಬಳೆಗಳನ್ನು ಬೆಳೆದಿರುವುದರಿಂದ ರೈತರು ನಿರಾಶೆ ಹೊಂದಿದರು.
ಇದೀಗ ಅಡರಕಟ್ಟಿ ಗ್ರಾಮದ ಕಲ್ಲಪ್ಪ ಗಂಗಣ್ಣನವರ್ ಎಂಬ ರೈತ 20 ಗುಂಟೆ ಜಮೀನಿನಲ್ಲಿ ಮಿಡಿ ಸೌತೆ ಬೆಳೆದಿದ್ದು ಅದೀಗ ಅವರ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದ್ದಾರೆ ಇದೀಗ ಫಸಲು ಬಂದಿದ್ದು ಈಗಾಗಲೇ ಒಂದು ಕ್ವಿಂಟಲ್ ಮಿಡಿ ಸೌತೆಯನ್ನು ಮಾರುಕಟ್ಟೆಗೆ ಕಳಿಸಿದ್ದಾರೆ.
ಈ ಮಿಡಿ ಸೌತೆ ಔಷಧಿ ಉಪಯೋಗಕ್ಕೆ ಬರುವುದರಿಂದ ಇದರಲ್ಲಿ ನಾಲ್ಕು ವರ್ಗಗಳನ್ನು ಮಾಡಿ ಮಾರಾಟಕ್ಕೆ ಕೊಂಡೊಯುತ್ತಾರೆ ಅತ್ಯಂತ ಎಳೆಯ ಸೌತೆಕಾಯಿಗೆ ಭಾರಿ ಡಿಮಾಂಡ್ ಇಂದು ಎರಡು ಮೂರು ಮತ್ತು ನಾಲ್ಕನೇ ಕ್ವಾಲಿಟಿಯ ಸೌತೆಕಾಯಿಗೆ ಬೆಲೆ ಕಡಿಮೆಯಾಗುತ್ತ ಹೋಗುವುದರಿಂದ ರೈತರು ಪ್ರತಿದಿನವೂ ಕಡ್ಡಾಯವಾಗಿ ಸೌತೆಯನ್ನು ಬಿಡಿಸಲೇ ಬೇಕಾಗುತ್ತದೆ ಎಂದು ಹೇಳಿದರು.
ಈ ಕುರಿತು ಕಲ್ಲಪ್ಪ ಗಂಗಣ್ಣವರ್ ಪ್ರತಿಕ್ರಿಯೆ ನೀಡಿ ಇದೊಂದು ಹೊಸ ಪ್ರಯೋಗವಾಗಿದ್ದು ಅರಸೀಕೆರಿಯಲ್ಲಿರುವ ಅಡರಕಟ್ಟಿ ಗ್ರಾಮದ ಹಿರೇಮಠ ಎಂಬವರು ತಮಗೆ ಈ ಬೀಜವನ್ನು ನೀಡಿದ್ದು ನೇರವಾಗಿ ಉತ್ಪನ್ನವನ್ನು ಅವರಿಗೆ ಕಳಿಸುತ್ತಿರುವದಾಗಿ ಹೇಳಿದರು ಇಂತಹ ಬೆಳೆಗಳನ್ನು ಬೆಳೆಯಲು ರೈತರಿಗೆ ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಹೇಳಿದರು.