ಮಿಡತೆ, ಬಸವನ ಹುಳು ಹಾವಳಿ: ಕೃಷಿ ಭೂಮಿ ನಿರ್ವಹಣೆ ಮಾಡಿ: ರಾಜಶೇಖರ

ಧಾರವಾಡ,ಜೂ10: ಜೂನ್ 8 ರಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಕೇಂದ್ರ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ತಜ್ಞರುಗಳು ಧಾರವಾಡ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಅಮ್ಮಿನಭಾವಿ ಮತ್ತು ಮರೇವಾಡ ಗ್ರಾಮಗಳ ವ್ಯಾಪ್ತಿಯಲ್ಲಿ ಹೆಸರು, ಉದ್ದು, ಮತ್ತು ಸೋಯಾ ಅವರೆ ಕ್ಷೇತ್ರ ವೀಕ್ಷಣೆ ಮಾಡಿದಾಗ ಬಿತ್ತನೆಯಾದ 10 ದಿನಗಳÀ ನಂತರ ಬೆಳೆಗಳು ಎರಡೆಲೆ ಬೆಳೆದಿದ್ದು, ಪ್ರಾರಂಭದಲ್ಲಿ ಮಿಡತೆಕಾಟ ಕಾಣಿಸಿಕೊಂಡಿತ್ತು. ಸದ್ಯಕ್ಕೆ ಮಿಡತೆ ಬಾಧೆ ಕಡಿಮೆ ಇದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜಶೇಖರ ಐ ಬಿಜಾಪೂರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜೂನ್ ತಿಂಗಳ 5ನೇ ತಾರಿಖು ಸುರಿದ ಭಾರಿ ಮಳೆಯಿಂದ ಮೇ ತಿಂಗಳ ಕೊನೆಯ ವಾರದಲ್ಲಿ ಬಿತ್ತಿದ ಬೆಳೆಗಳ ಪ್ಲಾಟ್‍ನಲ್ಲಿ ಮಳೆಯ ರಭಸಕ್ಕೆ ಮೇಲ್ಮಣ್ಣು ಗಟ್ಟಿಯಾಗಿ ಹೆಪ್ಪುಗಟ್ಟಿದಂತಾಗಿದೆ. ಬೆಳೆಗಳು ಲವಲವಿಕೆಗೊಂಡಿಲ್ಲ. ತದನಂತರ ಸಣ್ಣ ಮಳೆಯಾದಾಗ ಮತ್ತೆ ಚೇತರಿಕೆ ಕಾಣಲಿವೆ. ಮುಂಗಾರು ಬೆಳೆಗಳಲ್ಲಿ ಅಲ್ಲಲ್ಲಿ ಸ್ವಲ್ಪ ಮಟ್ಟಿಗೆ ಬಸವನ ಹುಳುವಿನ ಬಾಧೆ ಕಾಣಿಸಿಕೊಂಡಿದೆ.
ಮಿಡತೆಯ ನಿರ್ವಹಣೆ: ಬೀಜ ಬಿತ್ತಿದ ಬಳಿಕ ಒಣ ಹವೆ ಮುಂದುವರೆದಾಗ ಮಿಡತೆಗಳ ಹಾವಳಿ ಕಂಡು ಬರುತ್ತದೆ. ಮೇಲಿಂದ ಮೇಲೆ ಮಳೆಯಾಗುತ್ತಿದ್ದರೆ ಮಿಡತೆಗಳ ಬಾಧೆ ಇರುವುದಿಲ್ಲ. ಇದರ ನಿರ್ವಹಣೆಗಾಗಿ ಕಸ ಕಳೆ ತೆಗೆದು ಬದುಗಳನ್ನು ಸ್ವಚ್ಛವಾಗಿಡಬೇಕು. ಬೀಜ ಬಿತ್ತುವ ಮುಂಚೆ ಹೊಲದ ಸುತ್ತಲೂ ಒಂದು ಅಡಿ ಕಾಲುವೆ ಮಾಡುವುದರಿಂದ ಕೀಟಗಳು ಹೊಲದೊಳಗೆ ಬರುವುದನ್ನು ತಡೆಗಟ್ಟಬಹುದು. ಬದುಗಳ ಮೆಲೆ ಶೇ.2ರ ಮೆಲಾಥಿಯನ್ ಅಥವಾ ಶೇ.4 ರ ಫೇನ್ವಾಲರೇಟ್ ಅಥವಾ ಶೇ 1.5 ರಕ್ವಿನಾಲಫಾಸ ಹುಡಿರೂಪದ ಕೀಟನಾಶಕಗಳನ್ನು ಧೂಳಿಕರಿಸಬೇಕು. ಹೊಲದ ಸುತ್ತಲೂ ಕಾಲುವೆಯಲ್ಲಿ (ಮೇಲೆ ತಿಳಿಸಿದ) ಕೀಟನಾಶಕಗಳÀ ಪುಡಿಯನ್ನು ಧೂಳೀಕರಿಸಬೇಕು.
ಬಸವನಹುಳು: ಬಸವನಹುಳು ನಿಶಾಚರಿಯಾಗಿದ್ದು, ರಾತ್ರಿ ಹೊತ್ತಿನಲ್ಲಿ ಬೆಳೆಯನ್ನು ಬಾಧಿಸುತ್ತದೆ. ಹಗಲು ಹೊತ್ತಿನಲ್ಲಿ ಬದುಗಳಲ್ಲಿ, ಕಸದ ಗುಂಪುಗಳ ಕೆಳಗಡೆ ಆಶ್ರಯಿಸುತ್ತದೆ. ಕೆಲವೊಮ್ಮೆ ಮೋಡಕವಿದ ವಾತಾವರಣ ಮತ್ತು ತುಂತುರು ಮಳೆಯಿದ್ದಾಗ ದಿನವಿಡೀ ಬೆಳೆಯನ್ನು ತಿನ್ನುತ್ತದೆ. ಇದರ ಬಾಧೆ ಬೆಳೆಯ ಪ್ರಾರಂಭಿಕ ಹಂತದಲ್ಲಿ (ಬೆಳೆಯ 10-15 ದಿನಗಳವರೆಗೆ) ಹೆಚ್ಚು ಕಂಡು ಬರುತ್ತದೆ. (ಬೆಳೆಯ 10-15 ದಿನಗಳವರೆಗೆ) ತದನಂತರ ಕಾಂಡವು ಗಡುಸಾದಾಗ ಈ ಕೀಟದ ಬಾಧೆ ಇರುವುದಿಲ್ಲ.
ನಿರ್ವಹಣೆ: ಹೊಲದ ಸುತ್ತಲೂ ಇರುವ ಬದುಗಳನ್ನು ಸ್ವಚ್ಛಗೊಳಿಸಬೇಕು. ಬದುವಿನ ಸುತ್ತಲೂ ಅಲ್ಲಲ್ಲಿ ಕಸದ ಗುಂಪೆ ಹಾಕಿ ಅದರಲ್ಲಿ ಶೇ. 2.5 ರಮೆಟಾಲ್ಡಿಹೈಡ್ ಶಂಕುಹುಳು ನಾಶಕದ ಬಿಲ್ಲೆಗಳನ್ನು ಹಾಕುವುದರಿಂದ ಹುಳುಗಳು ಆಕರ್ಷಿಸಿ ಸಾಯುತ್ತವೆ. ಬದುವಿನ ಸುತ್ತಲೂ ಅರ್ಧ ಅಡಿ ಅಂಗಲ ಪುಡಿರೂಪದ ಕೀಟನಾಶಕಗಳಾದ ಮೆಲಾಥಿಯನ್, ಕ್ವಿನಾಲಫಾಸ್, ಫೆನ್ವಲರೇಟ್ ಧೂಳೀಕರಿಸಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.