ಮಿಡಗಲದಿನ್ನಿ : ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮ

ಅಂಬೇಡ್ಕರ್‌ರ ಪಂಚಸೂತ್ರಗಳೇ ದಲಿತರಿಗೆ ದಾರಿ ದೀಪ – ಮಲ್ಲಿಕಾರ್ಜುನ ಕ್ಯಾದಿಗೇರಾ
ರಾಯಚೂರು.ಅ.೩೧- ದಲಿತರು ಆತ್ಮಗೌರವದಿಂದ ಸ್ವತಂತ್ರವಾಗಿ ಬದುಕಲು ಅಂಬೇಡ್ಕರ್ ಅವರು ಹೇಳಿದ ಸ್ವ-ಸುಧಾರಣೆ, ಸ್ವ ಏಳಿಗೆ, ಸ್ವಾವಲಂಬನೆ, ಸ್ವಾಭಿಮಾನ ಮತ್ತು ಸ್ವ ನಂಬಿಕೆ ಎಂಬ ಪಂಚ ಸೂತ್ರಗಳೇ ದಾರಿ ದೀಪವಾಗಬೇಕಾಗಿದೆ ಎಂದು ಗಬ್ಬೂರು ಸ.ಪ.ಪೂ. ಕಾಲೇಜಿನ ಉಪನ್ಯಾಸಕ ಮಲ್ಲಿಕಾರ್ಜುನ ಕ್ಯಾದಿಗೇರಾ ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಮಿಡಗಲದಿನ್ನಿ ಕ್ಯಾಂಪ್ ಗ್ರಾಮದ ಜೂಲಿ ರಾಜು- ರೂಬೇನ್ ಇವರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ೩೮ನೇ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಾಮಾಜಿಕವಾಗಿ, ರಾಜಕೀಯವಾಗಿ ಹೋರಾಟ ಮಾಡಿ ದಲಿತರಿಗೆ, ಮಹಿಳೆಯರಿಗೆ, ಸಂವಿಧಾನ ಬದ್ಧವಾದ ಹಕ್ಕುಗಳನ್ನು ನೀಡಿದ್ದಾರೆ. ಬಾಬಾ ಸಾಹೇಬರು ಬಹುಜರಿಗೆ ನಾನು ಎಳೆದು ತಂದ ವಿಮೋಚನಾ ರಥವನ್ನು ನಿಮ್ಮಿಂದ ಸಾಧ್ಯವಾದರೆ ಮುಂದೆ ಎಳೆಯಿರಿ, ಇಲ್ಲದಿದ್ದರೆ ಅಲ್ಲೆಬಿಡಿ ಹಿಂದಕ್ಕೆ ಮಾತ್ರ ತಳ್ಳಬೇಡಿ ಎಂದು ನೀಡಿದ ಸಂದೇಶವನ್ನು ಪ್ರತಿಯೊಬ್ಬರು ಪಾಲಿಸಬೇಕಾಗಿದೆಂದರು.
ಕಾರ್ಯಕ್ರಮ ಉದ್ಘಾಟಿಸಿ ಪೋಸ್ಟ್ ಮಾಸ್ಟರ್ ಸುಮಿತ್ರಪ್ಪ ಜಂಬಲದಿನ್ನಿ ಮಾತನಾಡಿ, ಪ್ರತಿಯೊಬ್ಬರೂ ಡಾ.ಬಿ.ಆರ್.ಅಂಬೇಡ್ಕರ್ ರವರ ಇತಿಹಾಸವನ್ನು ಅರಿತುಕೊಳ್ಳಬೇಕು. ಅವರು ಬರೆದ ಸಂವಿಧಾನ ಮತ್ತು ಕಾನೂನುನನ್ನು ತಿಳಿದು ಅದರ ರಕ್ಷಣೆ ಮತ್ತು ಉಳುವಿಗಾಗಿ ಶ್ರಮಿಸಬೇಕು. ಅಂಬೇಡ್ಕರ್ ದೇಶದ ಆಸ್ತಿಯಾಗಿದ್ದಾರೆ “ಮನೆ ಮನೆಗೆ ಅಂಬೇಡ್ಕರ್” ಕಾರ್ಯಕ್ರಮದ ಮೂಲಕ ಪ್ರತಿ ಮನೆಗೂ ಅಂಬೇಡ್ಕರ್ ಇತಿಹಾಸ ತಿಳಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಬಹುಜನ ಸಂಘರ್ಷ ಸಮಿತಿ ಮಹಾಪೋಷಕ ಎಮ್.ಆರ್.ಭೇರಿ, ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಸದಸ್ಯ ನರಸಿಂಹ ಬಂಗಾರಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಮಾರ್ಕಪ್ಪ, ಎಲಿಯಪ್ಪ, ಆಶಾ ಕಾರ್ಯಕರ್ತೆ ಸಂಗೀತಾ, ಹನುಮಂತ ಗುಂಜಳ್ಳಿ, ಆಂಜಿನೇಯ್ಯ ಗುಂಜಳ್ಳಿ, ದಿನಾಕರ್, ಆದಮ್, ರಾಬಿನ್, ಎಲೀಷ, ವಿನೋದ, ಪ್ರಶಾಂತ, ಭೀಮಯ್ಯ, ಸುನಾಂದಪ್ಪ, ಸಾಮ್ಯುವೇಲ್ ಸೇರಿದಂತೆ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.