ಮಿಚೆಲ್ ಸ್ಪೋಟಕ ಬ್ಯಾಟಿಂಗ್ ಡೆಲ್ಲಿ ಜಯಭೇರಿ, ರಾಜಸ್ಥಾನಕ್ಕೆ ಮುಖಭಂಗ

ಮುಂಬೈ, ಮೇ.11-ಮಿಚೆಲ್ ಮಾರ್ಷ್ ಅವರ ಸ್ಪೋಟಕ ಬ್ಯಾಟಿಂಗ್ ‌ನೆರವಿನಿಂದ ಡೆಲ್ಲಿ ‌ಕ್ಯಾಪಿಟಲ್ಸ್ , ರಾಜಸ್ಥಾನ ರಾಯಲ್ಸ್ ವಿರುದ್ಧ ಎಂಟು ವಿಕೆಟ್ ಗಳಿಂದ ಭರ್ಜರಿ ಜಯಭೇರಿ ಬಾರಿಸಿತು.
ಸತತವಾಗಿ ಎರಡು ಪಂದ್ಯಗಳಲ್ಲಿ ಸೋತಿದ್ದ ಡೆಲ್ಲಿ ಇಂದಿನ ಪಂದ್ಯದಲ್ಲಿ ಪ್ಲೇ ಆಸೆ ಜೀವಂತವಾಗಿರಿಸಿ ಕೊಳ್ಕಲು ಗೆಲುವು ಅನಿವಾರ್ಯವಾಗಿತ್ತು. ಹೀಗಾಗಿ ಪಂತ್ ಪಡೆ ಗೆಲುವು ಸಾಧಿಸುವಲ್ಲಿ ಸಫಲವಾಯಿತು.


ಡೆಲ್ಲಿ ಒಟ್ಟು 12 ಪಂದ್ಯಗಳಲ್ಲಿ 6 ರಲ್ಲಿ ಸೋತು ಆರರಲ್ಲಿ ಗೆಲುವು ಸಾಧಿಸಿ 12 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಉಳಿದಿರುವ ಎರಡು ಪಂದ್ಯಗಳು ಗೆಲ್ಲಲೇ ಬೇಕಾಗಿದೆ.
ರಾಜಸ್ಥಾನ ಈ ಪಂದ್ಯದಲ್ಲಿ ಸೋತರೂ 14 ಅಂಕಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇನ್ನೂ ಎರಡು ಪಂದ್ಯ ಬಾಕಿಯಿದ್ದು ಪ್ಲೇ ಆಫ್ ತಲುಪಲು ಗೆಲ್ಲಬೇಕಾದ ಒತ್ತಡವಿದೆ.
161 ರನ್ ಗಳ ಗೆಲುವಿನ ಗುರಿಯನ್ನು ಬೆನ್ನಹತ್ತಿದ ರಾಜಸ್ಥಾನ 18.1 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 161 ರನ್ ಗಳಿಸಿ ಜಯ ಸಾಧಿಸಿತು.
ಬ್ಯಾಟಿಂಗ್ ಆರಂಭಿಸಿದ ಡೆಲ್ಲಿಗೆ ಆರಂಭದಲ್ಲೇ ಶ್ರೀಕರ್ ಭರತ್ ಶೂನ್ಯಕ್ಕೆ ಔಟಾದರು. ಎರಡನೇ ವಿಕೆಟ್ ಗೆ ಜತೆಯಾದ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಎರಡನೇ ವಿಕೆಟ್ 144 ರನ್ ಸೇರಿಸಿದರು.
ಮಾರ್ಷ್ 62 ಎಸೆತಗಳಲ್ಲಿ ಏಳು ಸಿಕ್ಸರ್ ಹಾಗೂ ಐದು ಬೌಂಡರಿ ಬಾರಿಸಿ ಆಕರ್ಷಕ 89 ಗಳಿಸಿ ನಿರ್ಗಮಿಸಿದರು. ಇನ್ನೊಂದೆಡೆ ವಾರ್ನರ್ 41 ಎಸೆತಗಳಲ್ಲಿ 52 ಹಾಗೂ ನಾಯಕ ರಿಷಬ್ ಪಂತ್ 13 ರನ್ ಗಳಿಸಿ ಅಜೇಯರಾಗುಳಿದರು.
ಇದಕ್ಕೂ ಮುನ್ನ ರವಿಚಂದ್ರನ್ ಅಶ್ವಿನ್ ಹಾಗೂ ದೇವದತ್ತ ಪಡಿಕ್ಕಲ್ ಉತ್ತಮ ಬ್ಯಾಟಿಂಗ್ ನೆರವಿನಿಂದ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ 20 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 160 ರನ್ ಗಳಿಸಿತು.
ಸಂಜು ಪಡೆಗೆ ಆರಂಭದಲ್ಲೇ ಆಘಾತ ಉಂಟಾಯಿತು. ಜೋಸ್ ಬಟ್ಲರ್‌ 7 ಹಾಗೂ ಜೈಸ್ವಾಲ್ 19 ರನ್ ಗಳಿಸಿ ನಿರ್ಗಮಿಸಿದರು.
ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಅಶ್ವಿನ್ ಹಾಗೂ ಪಡಿಕ್ಕಲ್ ಉತ್ತಮ ಆಟವಾಡಿದರು. ಅಶ್ವಿನ್ 38 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್ ಬಾರಿಸಿ ಐಪಿಎಲ್ ನಲ್ಲಿ ಮೊದಲ ಅರ್ಧಶತಕ ಗಳಿಸಿದರು.
ನಾಯಕ ಸಂಜು 6 ಹಾಗೂ ರಿಯಾನ್ ಪರಾಗ್ 9 ರನ್ ಗಳಿಸಿ ನಿರ್ಗಮಿಸಿದರು. ಈ ನಡುವೆ 30 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿ ಎರಡು ರನ್ ಗಳಿಂದ ಪಡಿಕ್ಕಲ್ ಅರ್ಧಶತಕ ವಂಚಿತರಾದರು. ಡೆಲ್ಲಿ ಪರ ಚೇತನ್, ಎನ್ರಿಚ್ ಹಾಗೂ‌ ಮಿಚೆಲ್ ಮಾರ್ಷ್ ತಲಾ ಎರಡು ವಿಕೆಟ್ ಗಳಿಸಿದರು.

ರವೀಂದ್ರ ಜಡೇಜಾ ಅಲಭ್ಯ

ಗಾಯಾಳುವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ ರೌಂಡರ್ ಐಪಿಎಲ್ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
ಮೇ 4 ರಂದು ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕ್ಯಾಚ್ ಹಿಡಿಯಲು ವಿಫಲಯತ್ನ ನಡೆಸಿ ಜಡೇಜಾ ಗಾಯಗೊಂಡಿದ್ದರು. ಹೀಗಾಗಿ ಕಳೆದ ಪಂದ್ಯದಲ್ಲೂ ಆಡಿರಲಿಲ್ಲ. ಹೀಗಾಗಿ ಚೆನ್ನೈ ಗೆ ತೀವ್ರ ಹಿನ್ನಡೆಯಾಗಿದೆ.